AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

Mud Bath : ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಕಪ್ಪು ನಾಯಿಯೊಂದು ಹತ್ತಿರ ಬಂದು ಹೀಗೆ ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ ಈ ವಿಡಿಯೋದಲ್ಲಿ?

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಮಣ್ಣಸ್ನಾನ ಆಹಾ
TV9 Web
| Edited By: |

Updated on:Jan 03, 2023 | 4:07 PM

Share

Viral Video : ಸ್ವಚ್ಛ, ಸ್ವಚ್ಛ, ಸ್ವಚ್ಛ! ಕೇಳಿ ಕೇಳಿ ಸಾಕಾಗಿದೆ. ಅರೆಕ್ಷಣವಾದರೂ ನಮ್ಮ ಮನಸಿಚ್ಛೆಯಂತೆ ಇರಲು ಬಿಡುತ್ತೀರಾ ನೀವು? ಸಾಕಿದ್ದೀರಿ ಎಂದ ಮಾತ್ರಕ್ಕೆ ನಿಮ್ಮಂತೆಯೇ ಹೇಗೆ ನಡೆಯಲಾದೀತು? ನಮ್ಮಗಳ ಆಸೆಯೇನು? ನಮಗೆ ಖುಷಿ ಕೊಡುವುದೇನು? ನಮಗೆ ನೆಮ್ಮದಿ ತರುವುದು ಏನು? ನಮಗೆ ಆಹ್ಲಾದವನ್ನುಂಟು ಮಾಡುವುದು ಏನು? ಕಣ್ಣಲ್ಲಿ ಕಣ್ಣಿಟ್ಟು ಹೇಳಿ ನೋಡೋಣ, ಒಮ್ಮೆಯಾದರೂ ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದೀರಾ? ಅದಕ್ಕೇ ನಾವು ಬೆಲ್ಟ್​ ಕಿತ್ತುಕೊಂಡಾದರೂ ಸರಿ ಸ್ವರ್ಗವನ್ನು ಅನುಭವಿಸಲು ಹೀಗೆಲ್ಲ ಧುಮುಕಿಯೇ ಬಿಡುತ್ತೇವೆ!

ಆನಂದಿಸುವ ಈ ನಾಯಿಯ ಪರಿಯನ್ನು ಕಣ್ತುಂಬಿಕೊಳ್ಳಿ. ಮನಬಂದಂತೆ ಕೆಸರಿನಲ್ಲಿ ಹೊರಳಾಡಿ ಮನಸ್ಸನ್ನು ದೇಹವನ್ನು ತಣಿಸಿಕೊಳ್ಳುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ನೀನು ಮಾಡುತ್ತಿರುವುದು ಸರಿಯಾಗಿದೆ ಎಂದು ಹುರಿದುಂಬಿಸುತ್ತಿದ್ದಾರೆ. ನಮಗಾದರೂ ಈ ಅವಕಾಶ ಸಿಗಬಾರದೆ ಎಂದು ಕೊರಗುತ್ತಿದ್ದಾರೆ.

ಇದನ್ನೂ ಓದಿ : ಧಾರವಾಡದ ಮಣ್ಣಲ್ಲಿಯೇ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಂಡಾಗ

ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಆದರೆ ನನಗೆ ನಿನ್ನಷ್ಟು ಧೈರ್ಯ ಇಲ್ಲ ಬಿಡು ಎಂದು ಕಪ್ಪು ನಾಯಿಯೊಂದು ಹತ್ತಿರ ಬಂದು ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ?

ಈ ವಿಡಿಯೋ ಅನ್ನು ಈತನಕ ಸುಮಾರು 6,000 ಜನರು ನೋಡಿದ್ದಾರೆ. ನಾಯಿಯ ನಿಜವಾದ ಬಣ್ಣ ಯಾವುದು? ಬಿಳಿಯೋ, ಕಂದೋ ಎಂದು ಕೇಳಿದ್ದಾರೆ.

ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:04 pm, Tue, 3 January 23