Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?
ಇತ್ತೀಚೆಗೆ ಹಳೆಯ ಬಿಲ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್, 1986 ರ ಬುಲೆಟ್ 350cc ಬಿಲ್ಗಳು ಸಾಕಷ್ಟು ವೈರಲ್ ಆಗಿತ್ತು. ಇದೇ ರೀತಿ ಈಗ 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ಸಕ್ಕತ್ತ್ ಸುದ್ದಿಯಾಗಿದೆ.
ಇತ್ತೀಚೆಗೆ ಹಳೆಯ ಬಿಲ್(Old Bill)ಗಳನ್ನು ಸಾಮಾಜಿಕ ಜಾಲತಾಣ(Social Media) ದಲ್ಲಿ ಹಂಚಿಕೊಳ್ಳುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್, 1986 ರ ಬುಲೆಟ್ 350cc ಬಿಲ್ಗಳು ಸಾಕಷ್ಟು ವೈರಲ್ ಆಗಿತ್ತು. ಇದೇ ರೀತಿ ಈಗ 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ಸಕ್ಕತ್ತ್ ಸುದ್ದಿಯಾಗಿದೆ. 1987ರಲ್ಲಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ? ತಿಳಿದುಕೊಳ್ಳಬೇಕಾದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಅಜ್ಜನ “ಜೆ ಫಾರ್ಮ್” ನ ಬಿಲ್ನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಜೆ ಫಾರ್ಮ್ ಎಂದರೆ ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟದ ರಶೀದಿಯಾಗಿದೆ. ಇದರಲ್ಲಿ 1987ರಲ್ಲಿ ಒಂದು ಕೆಜಿ ಗೋಧಿಗೆ 1.6 ರೂಪಾಯಿ ಇತ್ತು ಎಂದು ತೋರಿಸುತ್ತದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಗೋಧಿಯ ಬೆಲೆ ಕೆಜಿಗೆ ₹ 1.6 ಆಗಿತ್ತು ಎಂದು ಕೂಡ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.
Time when wheat used to be at 1.6 rupees per kg. The wheat crop my grandfather sold in 1987 to Food Corporation of India. pic.twitter.com/kArySiSTj4
— Parveen Kaswan, IFS (@ParveenKaswan) January 2, 2023
ಇದನ್ನೂ ಓದಿ: Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?
ಹಿಂದೆ ಗೋಧಿ ಕೆಜಿಗೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿ ಬೆಳೆ ಬಿಲ್ ಇದು. ಅವರಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಸಂಗ್ರಹ ಮಾಡಿ ಇಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗೀನ ವರೆಗೆ 42,900 ಜನ ವೀಕ್ಷಿಸಿದ್ದಾರೆ. ಜೊತೆಗೆ 695 ಲೈಕು ಮತ್ತು ಸಾಕಷ್ಟು ಕಾಮೆಂಟ್ಗಳನ್ನು ಕಾಣಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:07 pm, Tue, 3 January 23