ಯುದ್ಧವೂ ಕಲೆ; ಆಕಾಶದಲ್ಲಿ ಹಾರ್ನ್​ಬಿಲ್​ಗಳ ಬಿರುಸಿನ ಕಾಳಗ, ವೈರಲ್ ಆದ ವಿಡಿಯೋ

Hornbill : ತಮಿಳುನಾಡಿನ ನೆಲ್ಲಿಯಂಪತಿ, ವಾಲ್ಪಾರೈಗೆ ಹಾರ್ನ್​ಬಿಲ್​ಗಳು ವಲಸೆಗೆ ಬಂದಿವೆ. ಈಗಿವು ಕಾದಾಡುತ್ತಿವೆಯೋ, ಕಲಾತ್ಮಕವಾಗಿ ಹಾರಾಡುತ್ತಿವೆಯೋ ಎಂಬ ಸುಂದರವಾದ ಗೊಂದಲ ನೆಟ್ಟಿಗರಲ್ಲಿ ಮೂಡಿದೆ.

ಯುದ್ಧವೂ ಕಲೆ; ಆಕಾಶದಲ್ಲಿ ಹಾರ್ನ್​ಬಿಲ್​ಗಳ ಬಿರುಸಿನ ಕಾಳಗ, ವೈರಲ್ ಆದ ವಿಡಿಯೋ
ಹಾರ್ನ್​ಬಿಲ್​ಗಳ ಕಾದಾಟ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 03, 2023 | 10:57 AM

Viral Video : ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನಲ್ಲಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಾಗ ವನ್ಯಜೀವಿಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಸಲ ಅವರು ಟ್ವೀಟ್ ಮಾಡಿದ ಈ ವಿಡಿಯೋದಲ್ಲಿ ಹಾರ್ನ್​ಬಿಲ್​ಗಳು ಆಕಾಶದಲ್ಲಿ ಆಕ್ರಮಣಕಾರಿಯಾಗಿ ದಾಳಿಯಲ್ಲಿ ತೊಡಗಿಕೊಂಡಿವೆ.

ಪ್ರತೀ ವರ್ಷವೂ ತಮಿಳುನಾಡಿನ ನೆಲ್ಲಿಯಂಪತಿ ಮತ್ತು ವಾಲ್ಪಾರೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಾರ್ನ್​ಬಿಲ್​ಗಳು ವಲಸೆಗೆ ಬರುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಹೀಗೆ ಅವು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡುವುದೇ ಅದ್ಭುತ ಅನುಭವ. ಬಹುವರ್ಣಗಳಲ್ಲಿ ವಿನ್ಯಾಸಗೊಂಡಿರುವ ಅವುಗಳ ಗರಿಗಳಂತೂ ನಯನ ಮನೋಹರ. ಆದರೆ ಈ ವಿಡಿಯೋದಲ್ಲಿ ಮಾತ್ರ ಈ ಚೆಂದುಳ್ಳಿಗಳು ಯಾಕೋ ಎಂತೋ ಅಂತೂ ಕಾದಾಟಕ್ಕಿಳಿದಿವೆ. ಕೊಕ್ಕಿಗೆ ಕೊಕ್ಕು ಕೊಟ್ಟಿ ದಾಳಿ ಮಾಡಿವೆ. ಈತನಕ ಈ ವಿಡಿಯೋ ಅನ್ನು 47,200 ಜನರು ನೋಡಿದ್ದಾರೆ. ಸಾವಿರಕ್ಕು ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್

ನೆಲ್ಲಿಯಂಪತಿ ಕೇರಳದಲ್ಲಿದೆ ಎಂದಿದ್ದಾರೆ ಕೆಲವರು. ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಆಕ್ರಮಣಶೀಲತೆಗಿಂತ ಇದು ಕಲಾತ್ಮಕವಾಗಿ ಕಾಣುತ್ತಿದೆ. ಆಕಾಶದಲ್ಲಿ ಇವೆರಡೂ ನರ್ತಿಸುವಂತೆ ತೋರುತ್ತಿದೆ ಎಂದಿದ್ದಾರೆ ಹಲವರು. ಬಹಳ ಅದ್ಭುತವಾಗಿದೆ ಈ ದೃಶ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಕಾದಾಟವೋ ಕಲೆಯೋ ಎರಡಕ್ಕೂ ಲಯವಂತೂ ಬೇಕೇಬೇಕು. ಅದಿಲ್ಲಿ ಸಾಧಿಸಿದೆ.

ಈ ವಿಡಿಯೋ ನೋಡಿದ ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:55 am, Tue, 3 January 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ