ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

Baby drinking Beer : ಈ ವಿಡಿಯೋ ದೊಡ್ಡವರಿಗೆ ಮಾತ್ರ. ಕಡ್ಡಾಯವಾಗಿ ಒಂದೇ ಬಾರಿ ನೋಡಲು ಅನುಮತಿ ನೀಡಲಾಗಿದೆ. ನೋಡುತ್ತ ನೋಡುತ್ತ ಮುದ್ದು ಉಕ್ಕಿದರೆ ಖಂಡಿತ ಈ ವಿಡಿಯೋದಲ್ಲಿರುವವರು ಜವಾಬ್ದರರಲ್ಲ.

ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!
ನಾನೇನೂ ಮಾಡಿಲ್ಲಪ್ಪಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 02, 2023 | 6:50 PM

Viral Video : ಹೇಳಿಕೇಳಿ ಮಗು. ನೆಟ್ಟಗೆ ನಿಂತ್ಕೋಳೋಕೂ ಬರಲ್ಲ. ಅದಕ್ಕೇನು ತಿಳಿಯಬೇಕು, ಬಿಯರ್ ಕ್ಯಾನಿಗಾದರೂ ತಿಳಿಯಬಾರದಾ? ತಾನು ಯಾರ ಕೈಯಲ್ಲಿದ್ದೀನಿ ಹೇಗಿರಬೇಕು ಅಂತ? ಈಗ ವಿಡಿಯೋ ನೋಡಿದ ನಿಮಗೋ ಇದೊಂದು ತಮಾಷೆ. ಮತ್ತೆ ಮತ್ತೆ ನೋಡ್ತಾ ಇರೋಬರೋವ್ರಿಗೆಲ್ಲ ಹಂಚತಾ ವೈರಲ್ ಮಾಡಿಡ್ತಿದೀರಿ. ಮತ್ತೆ ಮತ್ತೆ ನೋಡೋಹಾಗಿಲ್ಲ ಎಂದು ಪ್ರಮಾಣ ಮಾಡ್ತಾ ಇದೊಂದೇ ಸಲ ನೋಡಿಬಿಡಿ.

ಮಗು ಎಂದರೆ ಮಗು ಅಷ್ಟೇ. 24 ತಾಸೂ ಅದರ ಮೇಲೊಂದು ಕಣ್ಣಿಟ್ಟಿರಲೇಬೇಕು. ನೀವು ನಿಮ್ಮ ನಿದ್ದೆ ನಿಮ್ಮ ಊಟ ನಿಮ್ಮ ವಿಶ್ರಾಂತಿ ನಿಮ್ಮ ಆಸೆ ನಿಮ್ಮ ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಿಮ್ಮನ್ನು ನೀವೇ ಅದಕ್ಕೇ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದಿರೋ ಅಷ್ಟೇ! ನೋಡಿದಿರಲ್ಲ ಈಗ ವಿಡಿಯೋದಲ್ಲಿ.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಬಿಡುತ್ತದೆ. ಒಂದು ಹೋಗಿ ಎರಡೇ ಆಗುವುದು. ಈಗ ನೋಡಿ ಈ ಮಗು ಬಿಯರ್ ಕುಡಿದದ್ದು ಒಂದು, ಇನ್ನು ಎದ್ದು ನಿಲ್ಲಲು ಹೋಗಿ ಹಿಂಬರಿಕೆಯಲ್ಲಿ ಬಿದ್ದಿದ್ದು ಇನ್ನೊಂದು. ಹಿಂದೇನಾದರೂ ಕಲ್ಲುಗಿಲ್ಲು ಇದ್ದಿದ್ದರೆ ಮೂರಾಗಿರೋದು. ಸದ್ಯ ಕ್ಯಾನ್​ನಲ್ಲಿ ಬಿಯರ್ ಇಲ್ಲವೆಂದೇ ಎಂದುಕೊಳ್ಳೋಣ ನಮ್ಮ ಸಮಾಧಾನಕ್ಕೆ.

ಈ ವಿಡಿಯೋ ಮಾಡಿದವರು ಖಂಡಿತ ಮಗುವಿನ ಪೋಷಕರಾಗಿರಲಾರರು ಎನ್ನುತ್ತಿದೆ ನೆಟ್​ಮಂದಿ. ನೀವೇನಂತೀರಿ?

ಅಣ್ಣೋವ್ರಂತೂ ಸರೀ ಪೋಸ್​ ಕೊಟ್ಟಿದಾರೆ. ಹ್ಯಾಪ್ಪಿ ನ್ಯೂ ಇಯರ್​!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:42 pm, Mon, 2 January 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?