‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

Collie Dog : ತೋಳದಂತೆ ಕಾಣಿಸಿಕೊಳ್ಳಲು ಒಬ್ಬಾತ ರೂ. 18 ಲಕ್ಷ ಖರ್ಚು ಮಾಡಿದ. ಕಳೆದ ವರ್ಷ ನಾಯಿಯಂತೆ ಕಾಣಿಸಿಕೊಳ್ಳಲು ಇನ್ನೊಬ್ಬಾತ ರೂ. 12 ಲಕ್ಷ ಖರ್ಚು ಮಾಡಿದ್ದ. ಇವರಿಬ್ಬರೂ ಯಾಕೆ ಹೀಗೆ ಮಾಡಿದರು? ಉತ್ತರ ಒಂದೇ.

‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ
ನಾಯಿಯ ವೇಷದಲ್ಲಿರುವ ಅನಾಮಿಕ ಪ್ರಾಣಿಪ್ರಿಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 02, 2023 | 5:37 PM

Viral Video : ತೋಳದಂತೆ ಕಾಣಬೇಕೆಂಬ ಆಸೆಯಿಂದ ಜಪಾನಿನ ಅನಾಮಿಕ ಪ್ರಾಣಿಪ್ರಿಯನೊಬ್ಬ ರೂ. 18 ಲಕ್ಷ ಖರ್ಚು ಮಾಡಿ ದಿರಿಸನ್ನು ವಿನ್ಯಾಸ ಮಾಡಿಸಿಕೊಂಡು ತೆಗೆಸಿಕೊಂಡ ಫೋಟೋಗಳು ಇಂದಷ್ಟೇ ವೈರಲ್ ಆಗಿದ್ದನ್ನು ನೋಡಿದಿರಿ. ಈ ಬೆನ್ನಲ್ಲೇ, ಕಳೆದ ವರ್ಷ ನಾಯಿಯಂತೆ ವೇಷ ಧರಿಸಿದ ವ್ಯಕ್ತಿ ಟೋಕೋ ಸ್ಯಾನ್​, ತಾನೇಕೆ ಅಂದು ಹಾಗೆ ಮಾಡಿದೆ ಎನ್ನುವುದನ್ನು ಇದೀಗ ಬಹಿರಂಗಗೊಳಿಸಿದ್ದಾನೆ. ಈ ನೆಪದಲ್ಲಿ ಅವನ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ತೋಳದಂತೆ ವೇಷ ಧರಿಸಿದವನಿಗೂ, ನಾಯಿಯಂತೆ ವೇಷ ಧರಿಸಿದ್ದವನಿಗೂ ಝೆಪ್ಪೆಟ್​ ಎಂಬ ಕಂಪೆನಿಯೇ ಅವರವರ ಇಚ್ಛೆಯ ಪ್ರಾಣಿಗಳ ದಿರಿಸನ್ನು ವಿನ್ಯಾಸಗೊಳಿಸಿತ್ತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಚಿಕ್ಕಂದಿನಿಂದಲೂ ನನಗೆ ಪ್ರಾಣಿಯಾಗಬೇಕು ಎಂಬ ಆಸೆ ಇತ್ತು. ಹೇಗೆ ಅದನ್ನು ಸಾಧ್ಯವಾಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕ್ರಮೇಣ ಬೆಳೆದಂತೆ ಆ ಆಸೆ ಬಲವಾಗತೊಡಗಿತು. ಅದನ್ನು ಪೂರೈಸಿಕೊಳ್ಳಲೆಂದು ನಾನು ಹೀಗೆ ನಾಯಿಯಂತೆ ವೇಷ ಧರಿಸಬೇಕೆಂದು ನಿರ್ಧರಿಸಿದೆ. ಇದಕ್ಕಾಗಿ ರೂ. 12 ಲಕ್ಷ ಖರ್ಚು ಮಾಡಿದೆ. ಝೆಪ್ಪೆಟ್​ ಕಂಪೆನಿಯು ಈ ಉಡುಪನ್ನು ಸಿದ್ಧಪಡಿಸಲು 40 ದಿನಗಳನ್ನು ತೆಗೆದುಕೊಂಡಿತು.’ ಎಂದು ಹೇಳಿರುವ ಟೋಕೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಅವತಾರದಲ್ಲಿ ತನ್ನ ಚಿತ್ರಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಿದ್ದ.

ಇದನ್ನೂ ಓದಿ : ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ

ಇವನ ಈ ನಡೆಯನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿ ಚರ್ಚಿಸಿದರು. ಆದರೂ ನಿಖರವಾದ ಕಾರಣ ಗೊತ್ತಾಗಿರಲಿಲ್ಲ. ಆದರೆ ಇದೀಗ ಆತ, ‘ತನಗೆ ನಾಯಿಯಾಗಬೇಕೆಂಬ ಒಳಾಸೆ ಬಾಲ್ಯದಿಂದಲೇ ಇತ್ತು. ಅದನ್ನು ಈ ಮೂಲಕ ಸಾಧ್ಯವಾಗಿಸಿಕೊಂಡೆ. ಟೋಕೋ ಎಂಬ ಹೆಸರಿನಲ್ಲಿಯೇ ಯೂಟ್ಯೂಬ್​ ಚಾನೆಲ್ ಶುರು ಮಾಡಿದೆ. ಅಲ್ಲಿ ಸಾಕಷ್ಟು ಜನರು ಪ್ರಶ್ನಿಸುತ್ತಿದ್ದರು. ನನಗೆ ಬೇಕಾದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತ ಬಂದೆ.’

ಇದನ್ನೂ ಓದಿ : ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

‘ಅಂತೂ ನಾಯಿಯಾಗುವ ಕನಸು ನನಸಾಯಿತು. ನನಗೆ ನೆನಪಿದ್ದಂತೆ ನಾನು ಯಾವಾಗಲೂ ಪ್ರಾಣಿಯಾಗಿಯೇ ಇರಲು ಬಯಸುತ್ತ ಬಂದಂಥವನು ಮತ್ತು ನನ್ನ ನೆಚ್ಚಿನ ನಾಯಿ ತಳಿ ಕೋಲಿ. ಹಾಗಾಗಿ ಅದೇ ವೇಷ ಧರಿಸಿದೆ. ನಮ್ಮ ಮತ್ತು ಪ್ರಾಣಿಗಳ ಮಧ್ಯೆ ಗಾತ್ರ ಆಕಾರವಷ್ಟೇ ವ್ಯತ್ಯಾಸ. ಆದರೆ ನಾಯಿಗಳು ಮನೆಗೆ ಬಾಡಿಗೆ ಕಟ್ಟುವುದಿಲ್ಲ, ಪ್ರಯಾಣಿಸುವುದಿಲ್ಲ ಮತ್ತು ಇಂಟರ್​ನೆಟ್​ಗಾಗಿ ಹಣ ಪಾವತಿಸಬೇಕಾದ ಅನಿವಾರ್ಯತೆ ಇಲ್ಲ’ ಎಂದಿದ್ದಾನೆ.

ಆದರೆ ಈತ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ. ತೋಳ ವೇಷಧಾರಿ ಕೂಡ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ.

ಕಂಪೆನಿಯು ತನ್ನ ಉತ್ಪನ್ನವನ್ನು ಮಾರಲು ತಂತ್ರ ಹೂಡಿರಬಹುದೆಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ಧಾರೆ. ಈ ಇಬ್ಬರನ್ನೂ ದಯೆಯಿಂದ ನೋಡಿ ಎಂದು ಪ್ರಾಣಿಪ್ರಿಯರು ಹೇಳುತ್ತಿದ್ದಾರೆ. ಇವರಿಬ್ಬರ ಕಥೆ ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:22 pm, Mon, 2 January 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ