ತೋಳದಂತೆ ಕಾಣಲು ಜಪಾನಿನ ವ್ಯಕ್ತಿ ರೂ 18 ಲಕ್ಷ ಖರ್ಚು ಮಾಡಿದ ಕಥೆ ಇದು
Wolf : ‘ಬಾಲ್ಯದಿಂದಲೂ ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಟಿವಿ, ಸಿನೆಮಾಗಳಲ್ಲಿ ಪ್ರಾಣಿಗಳ ಪಾತ್ರಧಾರಿಗಳನ್ನು ಕಂಡಾಗ ನನಗೂ ಹಾಗೆ ವೇಷ ಧರಿಸಬೇಕು ಎನ್ನಿಸುತ್ತಿತ್ತು. ಕೊನೆಗೂ ಅದು ಈಡೇರಿತು’ ಅನಾಮಿಕ ಪ್ರಾಣಿಪ್ರಿಯ
Viral Video : ಪ್ರಾಣಿಪ್ರಿಯರಾದ ನೀವು ಹೇಗೆಲ್ಲ ಪ್ರಾಣಿಗಳನ್ನು ಪ್ರೀತಿಸಬಹುದು ಎನ್ನುವುದನ್ನು ತಿಳಿದಿದ್ದೀರಿ. ಸಾಕಷ್ಟು ನಾಯಿಗಳನ್ನು, ದನಕರುಗಳನ್ನು, ಬೆಕ್ಕುಗಳನ್ನು ಹೀಗೆ ಏನೆಲ್ಲ ಸಾಕಲು ಶಕ್ಯವಿದೆಯೊ ಎಲ್ಲವನ್ನೂ ಸಾಕುತ್ತೀರಿ. ಸಾಲದಿದ್ದರೆ, ಬೀದಿಬದಿಯ ಪ್ರಾಣಿಗಳ ಆರೈಕೆಯನ್ನೂ ಮಾಡುತ್ತೀರಿ. ಆದರೆ ಇಲ್ಲೊಬ್ಬ ಜಪಾನಿನ ಮಹಾನ್ ಪ್ರಾಣಿಪ್ರಿಯನೊಬ್ಬ ತಾನು ತೋಳದಂತೆ ಕಾಣಬೇಕೆಂದು ಬಯಸಿ ರೂ. 18 ಲಕ್ಷ ಖರ್ಚು ಮಾಡಿದ್ದಾನೆ.
ಇದನ್ನೂ ಓದಿView this post on Instagram
ಝೆಪ್ಪೆಟ್ ಎಂಬ ಕಂಪೆನಿಯು ಈತನ ವೇಷವನ್ನು ವಿನ್ಯಾಸಗೊಳಿಸಿದೆ. ಈ ವೇಷ ಧರಿಸಿದ ವ್ಯಕ್ತಿಯ ಹೆಸರನ್ನು ಮಾತ್ರ ಗೌಪ್ಯವಾಗಿ ಇರಿಸಲಾಗಿದೆ, ‘ಚಿಕ್ಕಂಂದಿನಿಂದಲೂ ನನಗೆ ಪ್ರಾಣಿಗಳೆಂದರೆ ಬಹಳ ಪ್ರೀತಿ. ಸಿನೆಮಾ, ಟಿವಿಯಲ್ಲಿ ಪ್ರಾಣಿಗಳ ವೇಷ ಧರಿಸಿದ್ದನ್ನು ಗಮನಿಸುತ್ತಿದ್ದೆ. ಒಂದು ದಿನ ನಾನೂ ಹೀಗೆ ವೇಷ ಧರಿಸಬೇಲೇಬೇಕು ಎಂದು ಕನಸು ಕಾಣುತ್ತಾ ಹೋದೆ. ಈ ಕಂಪೆನಿಯು ಈ ದಿರಿಸನ್ನು ತಯಾರಿಸಲು ಸುಮಾರು 50 ದಿನಗಳನ್ನು ತೆಗೆದುಕೊಂಡಿತು.’
ಇದನ್ನೂ ಓದಿ : ‘ನಿನ್ನಂತೆಯೇ ಜಿಗಿಯುತ್ತಿದ್ದೇನೆ ಈಗಲಾದರೂ ಬಾ’ ಮೊಲವನ್ನು ಆಟಕ್ಕೆ ಕರೆಯುತ್ತಿರುವ ನಾಯಿಮರಿ
‘ಅಂತೂ ಈ ದಿರಿಸು ಈಗ ತಯಾರಾಗಿದೆ. ಬಹಳ ನೈಜತೆಯಿಂದ ಕೂಡಿದೆ. ಇದನ್ನು ಧರಿಸಿ ನನ್ನನ್ನು ನಾನು ಕನ್ನಡಿಯಲ್ಲಿ ನೋಡಿಕೊಂಡಾಗ ಅಚ್ಚರಿಗೆ ಒಳಗಾದೆ. ಹಿಂಗಾಲುಗಳ ಮೇಲೆ ನಡೆಯುವ ತೋಳದಂತೆ ಕಾಣಿಸಿಕೊಳ್ಳುವುದು ನನ್ನ ಜೀವಮಾನದ ಕನಸಾಗಿತ್ತು. ಅಂತೂ ಇದು ಈಡೇರಿದೆ. ತಯಾರಕರು ನನ್ನ ಮನದಿಂಗಿತವನ್ನು ಅರ್ಥ ಮಾಡಿಕೊಂಡು ಆಸ್ಥೆಯಿಂದ ಇದನ್ನು ತಯಾರಿಸಿದ್ಧಾರೆ. ಯಾರದೇ ಸಹಾಯವನ್ನು ಪಡೆಯದೇ ಸ್ವತಃ ಈ ದಿರಿಸನ್ನು ಧರಿಸಲು ಅನುಕೂಲವಾಗುವಂತೆ ವಿನ್ಯಾಸ ಮಾಡಿದ್ದಾರೆ.’ ಎಂದು ಹೇಳಿದ್ದಾನೆ ಈ ಅನಾಮಿಕ ಪ್ರಾಣಿಪ್ರಿಯ.
ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ
ಝೆಪ್ಪೆಟ್ ತನ್ನ ಗ್ರಾಹಕರಿಗಾಗಿ ಆಯಾ ವ್ಯಕ್ತಿಗಳ ಕನಸಿನ ವೇಷಭೂಷಣಗಳನ್ನು ತಯಾರಿಸಿಕೊಡುವಲ್ಲಿ ತೊಡಗಿಕೊಂಡಿರುವುದು ಇದು ಮೊದಲೇನಲ್ಲ. ಹಿಂದೆ ಟೋಕೋ ಎಂಬ ನಾಯಿಪ್ರಿಯ ತನ್ನನ್ನು ನಾಯಿಯಂತೆ ನೋಡಬೇಕು ಎಂದು ಕೇಳಿಕೊಂಡಾಗ ಈ ಕಂಪೆನಿಯು ರೂ. 12 ಲಕ್ಷ ವೆಚ್ಚದಲ್ಲಿ ನಾಯಿಯಂತೆ ಕಾಣುವ ದಿರಿಸನ್ನು ತಯಾರಿಸಿ ಕೊಟ್ಟಿತ್ತು.
ನಿಮಗೇನಾದರೂ ಹೀಗೆ ಕನಸುಗಳಿವೆಯೇ? ನೋಡಿ ಮತ್ತೆ ಪ್ರಯತ್ನಿಸಿ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:13 pm, Mon, 2 January 23