ಪಾತರಗಿತ್ತಿ ಪಕ್ಕಾ ನಿನ್ ಹಿಡಿಯಾಕ್​ ಬಂದಾರಕ್ಕಾ, ಪೆಂಗ್ವಿನಪ್ಪಾ ಪೆಂಗ್ವಿನವ್ವಾ…

Penguins : ಎದ್ದೇಳಿ, ಎಚ್ಚರಗೊಳ್ಳಿ! ಅದೇ ಚಳಿ, ಅದೇ ನೆಗಡಿ, ಅದೇ ಕೆಮ್ಮು ಸಾಕಿನ್ನು. ಝಳಝಳ ಬಿಸಿಲಿಗೆ ಮೈಯ್ಯೊಡ್ಡಿ. ನಮ್ಮಂತೆ ಚಿಟ್ಟೆಯ ಬೆನ್ನಟ್ಟಿ ಎನ್ನುತ್ತಿವೆ ಪೆಂಗ್ವಿನ್​ಗಳು. 11.9 ಮಿಲಿಯನ್​ ಜನ ಪೆಂಗ್ವಿನ್​ಗಳ​ ಮಾತಿಗೆ ಸೈ ಎಂದಿದ್ದಾರೆ. ನೀವು?

ಪಾತರಗಿತ್ತಿ ಪಕ್ಕಾ ನಿನ್ ಹಿಡಿಯಾಕ್​ ಬಂದಾರಕ್ಕಾ, ಪೆಂಗ್ವಿನಪ್ಪಾ ಪೆಂಗ್ವಿನವ್ವಾ...
ಪಾತರಗಿತ್ತಿ ಹಿಡಿಯಲು ಜಿಗಿಯುತ್ತಿರುವ ಪೆಂಗ್ವಿನ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 02, 2023 | 12:07 PM

Viral Video : ಚಳಿಗೆ ಮುದುರಿಕೊಂಡು ಕುಸುಕುಸು ಕೆಮ್ಮುತ್ತ, ಸೊರಸೊರ ಮೂಗೇರಿಸುತ್ತ, ಬಿಸಿಬಿಸಿ ಕಾಫೀ ಕುಡಿಯುತ್ತ ಕೆಲಸದಲ್ಲಿ ನೀವೆಲ್ಲ ಮುಳುಗಿರಬಹುದು. ಆದರೆ ಹೊಸ ವರ್ಷಕ್ಕೆ ಹೊಸ ಸೂತ್ಯ ಬಂದಿದ್ದಾನೆ ಒಮ್ಮೆ ಅವನನ್ನು ಕಂಡರೆ ಚಳಿಯೂ ಜ್ವರೂ ಕೆಮ್ಮೂ ನೆಗಡಿಯೂ ಎಲ್ಲವೂ ಓಡಿಹೋಗತ್ತದೆ ಎನ್ನುವ ಸಂದೇಶವನ್ನು ಈ ಪೆಂಗ್ವಿನ್​ಗಳ ಹಿಂಡು ನೀಡುತ್ತಿದೆ. ಯಾಕೆ ಇವು ಹೀಗೆ ಒಂದೇ ಸಮ ಜಿಗಿಯುತ್ತಿವೆ? ಇವರ ಪಿಟಿ ಮಾಸ್ಟರ್ ಎಲ್ಲಿ ಕಾಣ್ತಿಲ್ವಲ್ಲ? ಎಂದು ಯೋಚಿಸ್ತಿದೀರಾ? ಅವರ ಪಿಟಿ ಮಾಸ್ಟರ್ ಹೇಳಿದಂತೆ ಅವರು ಕೇಳುತ್ತಿದ್ದಾರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಹೌದು ಪಿಟಿ ಮಾಸ್ಟರ್​ ಪಾತರಗಿತ್ತಿಯವರನ್ನು ಇವರೆಲ್ಲರೂ ಹಿಂಬಾಲಿಸುತ್ತಿದ್ದಾರೆ.

ಮನಸ್ಸನ್ನು ಅರಳಿಸುವಂಥ ಈ ವಿಡಿಯೋ ಅನ್ನು ಡಿಸೆಂಬರ್ 31ರಂದು ಪೋಸ್ಟ್ ಮಾಡಲಾಗಿದೆ. ಈತನಕ ಈ ವಿಡಿಯೋ 11.9 ಮಿಲಿಯನ್​ ಜನರನ್ನು ಮೋಡಿ ಮಾಡಿದೆ. ಎರಡೇ ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಚಿಟ್ಟೆಯನ್ನು ಹೀಗೆ ಬೆನ್ನಟ್ಟುತ್ತಿರುವ ಈ ಪೆಂಗ್ವಿನ್​ ಜಂಪ್​ ನೋಡಿದ ನೂರಾರು ಜನರು ಮರುಳಾಗಿದ್ದಾರೆ.

ಇದನ್ನೂ ನೋಡಿ : ಕಾವ್ಯಾತ್ಮಕ ಶೈಲಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್ ವಿಡಿಯೊ ವೈರಲ್

ನಾನಂತೂ ಮುಂದಿನ ಜನ್ಮದಲ್ಲಿ ಪೆಂಗ್ವಿನ್ ಆಗಿ ಹುಟ್ಟುತ್ತೇನೆ ಎಂದಿದ್ದಾರೆ ಒಬ್ಬರು. ಕುಂಟಾಬಿಲ್ಲೆ ಹುಟ್ಟಿದ್ದು ಇಲ್ಲಿಯೇ ಅನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು. ಚಿಟ್ಟೆ ನೀನು ಇನ್ನಷ್ಟು ಎತ್ತರಕ್ಕೆ ಹಾರು ಆಕಾಶವನ್ನು ಮುಟ್ಟು ಎನ್ನುತ್ತಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಹೊಸ ವರ್ಷಕ್ಕೆ ನೀವು ಹೀಗೆ ಇದೇ ಉತ್ಸಾಹದಿಂದ ಕುಣಿದು ಕುಪ್ಪಳಿಸಬೇಕೆನ್ನುವುದು ನಮ್ಮ ಆಶಯ. ಸಣ್ಣಪುಟ್ಟ ಕನಸು ಆಸೆಗಳೆಂಬ ಚಿಟ್ಟೆಗಳನ್ನು ಹೀಗೆ ಪ್ರಯತ್ನಪೂರ್ವಕವಾಗಿ ಬೆನ್ನಟ್ಟಿ ಖುಷಿ ನಿಮ್ಮದಾಗಿಸಿಕೊಳ್ಳಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:05 pm, Mon, 2 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್