ಸೆಲೆನಾ ಗೋಮೇಝ್ ಮತ್ತು ರೇಮಾ ಹಾಡಿದ ‘ಕಾಮ್ ಡೌನ್’ಗೆ ತಬಲಾ ಬಾಸ್ಕೆಟ್ ಬಾಲ್ ಸಾಥಿ
Viral Video : ಭಾರತೀಯ ಶಾಸ್ತ್ರೀಯ ಸಂಗೀತವು ಪ್ರಪಂಚದ ಯಾವುದೇ ಸಂಗೀತವನ್ನು ಸೋಲಿಸುವಷ್ಟು ಅಮೋಘ ಎಂದಿದ್ಧಾರೆ ಒಬ್ಬರು. ಈ ಪ್ರದರ್ಶನಕ್ಕೆ ನರ್ತಕರೂ ಜೊತೆಯಾಗಿದ್ದರೆ! ಎಂದಿದ್ದಾರೆ ಮತ್ತೊಬ್ಬರು. ನೀವೇನಂತೀರಿ?
Viral Video : ಹೊಸ ವರ್ಷದ ಮೊದಲ ಸೋಮವಾರ ಹೇಗಿದೆ ನಿಮ್ಮ ಮೂಡ್? ಮತ್ತದೇ ಮಂಡೇ ಬ್ಲ್ಯೂಸ್ ಕಾಡತೊಡಗಿದೆಯಾ? ವೈರಲ್ ಆಗಿರುವ ಈ ವಿಡಿಯೋ ನೋಡಿ. ತಬಲಾ ಕಲಾವಿದರನ್ನು ನೀವು ವೇದಿಕೆ ಮೇಲೆ ನೋಡುತ್ತೀರಲ್ಲವೆ? ಕೊರೊನಾ ಅವಧಿಯಲ್ಲಿ ಟೆರೇಸಿನ ಮೇಲೆ ನೋಡಿದಿರಿ, ಪಾರ್ಕಿನಲ್ಲಿ ನೋಡಿದಿರಿ, ರೈಲಿನಲ್ಲಿ ನೋಡಿದಿರಿ. ಆದರೆ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ನೋಡಿದ್ದಿದೆಯೇ? ಈ ಇಬ್ಬರು ಕಲಾವಿದರು ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ತಬಲಾ ನುಡಿಸುತ್ತ ಬಾಸ್ಕೆಟ್ ಬಾಲ್ ಆಡಿದ್ಧಾರೆ.
ಇದನ್ನೂ ಓದಿView this post on Instagram
ಪಾಪ್ ಗಾಯಕರಾದ ಸೆಲೆನಾ ಗೋಮೇಝ್ ಮತ್ತು ರೇಮಾ ಅವರ ಪ್ರಸಿದ್ಧ ಹಾಡು ‘ಕಾಮ್ ಡೌನ್’ಗೆ ತಬಲಾ ನುಡಿಸಿದವರು ನಿಹಾಲ್ ಸಿಂಘ್ ಮತ್ತು ಶೋಭಿತ್ ಬನ್ವೈತ್. ಈ ಹಾಡು ಈಗಾಗಲೇ ಪ್ರಪಂಚದಾದ್ಯಂತ ಜನಜನಿತವಾಗಿದೆ. ನನ್ನ ಸೋದರ್ ಶೋಭಿತ್ ಆರು ಗಂಟೆಗಳ ಕಾಲ ವಿಮಾನ ಪ್ರಯಾಣಿಸಿದ. ಆನಂತರ ದಣಿವಾರಿಸಿಕೊಂಡು ಮನಸ್ಸನ್ನು ಶಾಂತಗೊಳಿಸಿಕೊಳ್ಳಲು ನಾವು ಈ ಐಡಿಯಾ ಮಾಡಿದೆವು ಎಂದು ನೋಟ್ ಬರೆದಿದ್ದಾರೆ ನಿಹಾಲ್ ಸಿಂಘ್. ಗೋಮೇಝ್ ಮತ್ತು ರೇಮಾ ಹಾಡಿರುವ ಈ ಮೂಲ ಹಾಡನ್ನು ಕೇಳಿ.
ಶೋಭಿತ್ ಮತ್ತು ನಿಹಾಲ್ ನುಡಿಸಿರುವ ತಬಲಾ ಮತ್ತು ಬಾಸ್ಕೆಟ್ ಬಾಲ್ನ ಮೋಡಿಯನ್ನು ನೋಡಿದ ನೆಟ್ಟಿಗರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಈತನಕ 87,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಬಹಳ ಚೆನ್ನಾಗಿ ನುಡಿಸಿದ್ದೀರಿ. ಭಾರತೀಯ ಶಾಸ್ತ್ರೀಯ ಸಂಗೀತವು ಪ್ರಪಂಚದ ಯಾವುದೇ ರಾಕ್ ಸಂಗೀತವನ್ನು ಸೋಲಿಸುವಷ್ಟು ಅಮೋಘ ಎಂದಿದ್ಧಾರೆ ಒಬ್ಬರು. ನಿಮ್ಮ ಈ ಜೋಡಿಪ್ರದರ್ಶನಕ್ಕೆ ಒಬ್ಬರು ನರ್ತಕರೂ ಜೊತೆಯಾಗಿದ್ದರೆ ಅತ್ಯದ್ಭುತವಾಗಿರುತ್ತಿತ್ತು ಎಂದಿದ್ಧಾರೆ ಮತ್ತೊಬ್ಬರು.
ಹೊಸ ವರ್ಷವನ್ನು ನಾನು ಈ ವಿಡಿಯೋದಿಂದ ಸ್ವಾಗತಿಸಿದೆ. ಬಹಳ ಆಹ್ಲಾದಕರವಾಗಿದೆ ಈ ವಿಡಿಯೋ ಎಂದಿದ್ದಾರೆ ಮಗದೊಬ್ಬರು. ಇಂಥ ನಿಮ್ಮ ಪ್ರಯೋಗಗಳು ಮತ್ತಷ್ಟು ಹೆಚ್ಚಲಿ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:58 am, Mon, 2 January 23