AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನಂತೆಯೇ ಜಿಗಿಯುತ್ತಿದ್ದೇನೆ ಈಗಲಾದರೂ ಬಾ’ ಮೊಲವನ್ನು ಆಟಕ್ಕೆ ಕರೆಯುತ್ತಿರುವ ನಾಯಿಮರಿ

Viral Video : ಒಂದೋ, ಎರಡೋ, ಮೂರೋ... ನೋಡು ನನ್ನನ್ನು ಯಾರಾದರೂ ನಾಯಿಮರಿ ಅನ್ನೋದಕ್ಕೆ ಸಾಧ್ಯವಾ? ಒಮ್ಮೆ ತಿರುಗಿ ನೋಡು ಸಾಕು; ಹಳೆಯ ವಿಡಿಯೋ ವೈರಲ್

‘ನಿನ್ನಂತೆಯೇ ಜಿಗಿಯುತ್ತಿದ್ದೇನೆ ಈಗಲಾದರೂ ಬಾ’ ಮೊಲವನ್ನು ಆಟಕ್ಕೆ ಕರೆಯುತ್ತಿರುವ ನಾಯಿಮರಿ
ನಿನ್ನಂತೆ ನಾನೂ ಜಿಗಿವೇ!
TV9 Web
| Edited By: |

Updated on:Dec 28, 2022 | 3:47 PM

Share

Viral Video : ಇದು ಹಳೆಯ ವಿಡಿಯೋ. ಆದರೇನಂತೆ ಪ್ರಾಣಿಪ್ರಿಯರಿಗೆ ಸದಾ ಹೊಚ್ಚಹೊಸದೇ. ಈ ವಿಡಿಯೋದಲ್ಲಿ ನಾಯಿಮರಿ ಮತ್ತು ಮೊಲದಮರಿ ಆಟವಾಡಿಕೊಂಡಿವೆ. ಮೊಲದ ಮರಿ ಹೇಗೆ ಜಿಗಿಯುತ್ತದೆಯೋ ಹಾಗೆಯೇ ನಾಯಿಮರಿಯೂ ಜಿಗಿಯುತ್ತದೆ. ಎಂಥ ಮಜವಾಗಿದೆ ಅಲ್ಲವಾ? ಮನುಷ್ಯರಾಗಲಿ ಪ್ರಾಣಿಗಳಾಗಲಿ ಎಳವೆಯಲ್ಲಿ ಅನುಕರಿಸಿಯೇ ಬದುಕಲು ಕಲಿಯುವುದು. ಆದರೆ ಅನ್ಯವರ್ಗದ ಪ್ರಾಣಿಗಳನ್ನು ಅನುಕರಿಸುವುದು ತುಸು ಅಪರೂಪವೇ. ಮುಗ್ಧತನದ ಪರಮಾವಧಿ!

ಈತನಕ ಈ ವಿಡಿಯೋ ಅನ್ನು 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ನನಗೆ ನಗು ತಡೆಯಲಾಗುತ್ತಲೇ ಇಲ್ಲ ಎಂದಿದ್ದಾರೆ ಒಬ್ಬರು. ಇಲ್ಲಿ ಅನುಕರಣೆಯೂ ಎಷ್ಟೊಂದು ಪ್ರಾಮಾಣಿಕತೆಯಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು.

ನನ್ನ ಮಗಳು ನಾಯಿಮರಿಯೂ ಮೊಲದ ಮರಿಯೆಂದೇ ಭಾವಿಸಿದ್ದಾಳೆ. ಅದಕ್ಕೆ ಫೂಫ್ ಎಂದು ಹೊಸ ಹೆಸರನ್ನು ಇಟ್ಟಳು ಕೂಡ! ಎಂದಿದ್ದಾರೆ ಇನ್ನೂ ಒಬ್ಬರು. ಹೌದು ನನ್ನ ಮಗಳೂ ಇವೆರಡೂ ಮೊಲದ ಮರಿಗಳೇ ಎಂದು ಹೇಳುತ್ತಿದ್ದಾಳೆ ಎಂದು ಮಗದೊಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:43 pm, Wed, 28 December 22