ಈ ಸಮಯ ಶೃಂಗಾರಮಯ; ಇವರು ನಿಜಕ್ಕೂ ಪ್ರೀತಿಯಲ್ಲಿ ‘ಬಿದ್ದಿದ್ದಾರೆ’

Wedding Shoot : ಇನ್ನೂ ಸ್ವಲ್ಪ ಸರಿಯಾಗಿ ಪ್ರ್ಯಾಕ್ಟೀಸ್ ಮಾಡಬೇಕಿತ್ತೇನೋ. ಈ ಸಂದರ್ಭದಲ್ಲಿ ನಗಬಾರದು, ಆದರೂ ನಗು ಬರುತ್ತಿದೆ. ಮದುವೆ ದಿನ ನಿಜವಾಗಲೂ ಏಟು ಬಿದ್ದಿದ್ದರೆ ಏನು ಗತಿ? ನೆಟ್ಟಿಗರೆಲ್ಲ ಗುಸುಗುಸು...

ಈ ಸಮಯ ಶೃಂಗಾರಮಯ; ಇವರು ನಿಜಕ್ಕೂ ಪ್ರೀತಿಯಲ್ಲಿ ‘ಬಿದ್ದಿದ್ದಾರೆ’
‘ಈ ಸಮಯ ಶೃಂಗಾರಮಯ’ ಎನ್ನುತ್ತಿರುವಾಗಲೇ...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 28, 2022 | 5:44 PM

Viral Video : ಮದುವೆಯ ಋತುಮಾನ ಆರಂಭವಾಗಿದೆ. ಎಲ್ಲೆಡೆ ಪ್ರೀ ವೆಡ್ಡಿಂಗ್ ಶೂಟ್​, ವೆಡ್ಡಿಂಗ್​ ಶೂಟ್​ನ ಸಂಭ್ರಮ. ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಥರದ ಭಾವವನ್ನು ಸೆರೆಹಿಡಿಯುವಂಥ ವಿಡಿಯೋಗಳ ಮಹಾಪೂರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ವಧು ವರರು ವೇದಿಕೆಯಲ್ಲಿ ಶೃಂಗಾರಮಯವಾಗಿ ಕ್ಯಾಮೆರಾದ ಮುಂದೆ ಪೋಸ್​ ಕೊಡುತ್ತಿದ್ದಾರೆ. ಆದರೆ ಅಚಾನಕ್​ ಆಗಿ ಆಯತಪ್ಪಿ ಬಿದ್ದುಬಿಟ್ಟಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Prewedding in jaipur (@jaipur_preweddings)

ಜೈಪುರ ಪ್ರೀ ವೆಡ್ಡಿಂಗ್ಸ್ ಎಂಬ ಇನ್‌ಸ್ಟಾಗ್ರಾಮ್‌ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಈತನಕ 12.6 ಮಿಲಿಯನ್ ಜನರು ನೋಡಿದ್ಧಾರೆ. 7.8 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ವರಮಾಲಾಗೆ ಸವಾಲು ಹಾಕಿದ ವಧು‘ಯೋಗ‘; ವೈರಲ್ ಆದ ವಿಡಿಯೋ

ಇವರು ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರೆ! ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇಷ್ಟೊಂದು ಭಾರವಾದ ಲೆಹೆಂಗಾ ಧರಿಸಿದರೆ ಇನ್ನೇನಾಗಬೇಡ ಎಂದು ಇನ್ನೊಬ್ಬರು ತಮಾಷೆ ಮಾಡಿದ್ಧಾರೆ. ನಿಜಕ್ಕೂ ಇದು ಭಯಾನಕ. ಮದುವೆಯ ದಿನ ಗಂಭೀರವಾಗಿ ಏಟು ಬಿದ್ದರೆ ಏನು ಗತಿ? ಎಂದು ಹೇಳಿದ್ದಾರೆ ಮತ್ತೊಬ್ಬರು. ಇಂಥ ಸಂದರ್ಭದಲ್ಲಿ ನಗಬಾರದು ಆದರೆ ನನಗೆ ನಗು ಬರುತ್ತಿದೆ ಏನು ಮಾಡಲಿ ಎಂದು ಮತ್ತೊಬ್ಬರು ಕೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:38 pm, Wed, 28 December 22