Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನ ಬೀದಿಯಲ್ಲಿ ‘ಕೇಸರಿಯಾ’ ಹಾಡಿದ ಯುವಕ, ಆಲಿಸಿದ ಪೊಲೀಸರು

Maharashtra Police : ತನ್ನ ಪಾಡಿಗೆ ತಾನು ಮುಂಬೈನ ಬೀದಿಯಲ್ಲಿ ಹಾಡಿಕೊಂಡು ನಿಂತಿದ್ದಾನೆ. ಅಲ್ಲಿಗೆ ಬಂದ ಪೊಲೀಸರು ಇವನ ಹಾಡು ಕೇಳುತ್ತ ನಿಂತಿದ್ದಾರೆ. ಈ ಚಳಿ, ಈ ರಾತ್ರಿ, ಈ ಸಂಗೀತ... ಕೇಳಿ ನೀವೂ...

ಮುಂಬೈನ ಬೀದಿಯಲ್ಲಿ ‘ಕೇಸರಿಯಾ’ ಹಾಡಿದ ಯುವಕ, ಆಲಿಸಿದ ಪೊಲೀಸರು
ಯುವಕನ ಹಾಡು ಕೇಳುತ್ತಿರುವ ಮುಂಬೈ ಪೊಲೀಸ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 28, 2022 | 6:43 PM

Viral Video : ಮುಂಬೈನ ಬೀದಿಯಲ್ಲಿ ಈ ಯುವಕ ಗಿಟಾರ್ ನುಡಿಸಿಕೊಂಡು ಕೇಸರಿಯಾ ಹಾಡುತ್ತಿದ್ದಾಗ ಪೊಲೀಸರು ನಿಂತು ಆಲಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಮರೀನ್​ ಡ್ರೈವ್​ನಲ್ಲಿ ಚಿತ್ರೀಕರಿಸಲಾಗಿದೆ. ಸಂಗೀತದ ಶಕ್ತಿ ಅದ್ಭುತ ಎನ್ನುವುದು ಇದಕ್ಕೇ. ಯಾರು ಎಲ್ಲೇ ಇದ್ದರೂ ಅವರನ್ನು ಒಂದು ಕ್ಷಣವಾದರೂ ತನ್ನತ್ತ ಸೆಳೆದೇ ಸೆಳೆಯುತ್ತದೆ. ಡಿಸೆಂಬರ್ 19ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಜನರ ಮನಸೂರೆಗೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by SHIV (@shi.vxm)

ಸಂಗೀತಕ್ಕೆ ಶಾಂತಗೊಳಿಸುವ ಶಕ್ತಿ ಇದೆ. ಇಡೀ ದಿನ ಸಂಗೀತ ಕೇಳುತ್ತಿದ್ದರೂ ಬೇಸರವೆನ್ನಿಸುವುದಿಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ಸಂಗೀತಕ್ಕೆ ಯಾವುದೇ ಗಡಿಗಳ ಹಂಗಿಲ್ಲ ಎನ್ನುವುದು ಇದಕ್ಕೇ. ಅತ್ಯಂತ ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ ಎಂದಿದ್ದಾರೆ ಇನ್ನೊಬ್ಬರು. ಎಲ್ಲರನ್ನೂ ಎಲ್ಲವನ್ನೂ ಇದು ಬೆಸೆಯುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಹಾಡುವವರು ತಮ್ಮ ಪಾಡಿಗೆ ಹಾಡುತ್ತಲೇ ಇರುತ್ತಾರೆ. ಕೇಳುವವರು ಅವರಿದ್ದಲ್ಲಿಗೆ ಬಂದು ಕೇಳುತ್ತಿರುತ್ತಾರೆ. ಅಲ್ಲಿ ವರ್ಗಬೇಧವಿಲ್ಲ, ಭಾಷೆಯ ಹಂಗಿಲ್ಲ, ಜಾತಿಯ ಗೆರೆಗಳಿಲ್ಲ. ಸಂಗೀತ ಅಥವಾ ಕಲೆ ಎಂದಿಗೂ ವಿಶ್ವಮಾನ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ