ಪಶ್ಚಿಮ ಬಂಗಾಳದ ರೈಲ್ವೆ ಕೋಚ್ಗಳಲ್ಲಿ ಅರಳಿದ ಭಿತ್ತಿಚಿತ್ರ; ಅಸಂತುಷ್ಟಗೊಂಡ ನೆಟ್ಟಿಗರು
Indian Railways : ಹೀಗೆ ಕೋಚ್ಗಳನ್ನು ಬಣ್ಣಬೆಳಕಿನಿಂದ ಅಲಂಕರಿಸಿ ಗಮನ ಸೆಳೆಯುವುದಕ್ಕಿಂತ ಇಲಾಖೆಯ ಸೇವೆಗಳಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸಿ ಎಂದು ಪುರಾವೆ ಸಮೇತ ರೀಟ್ವೀಟ್ ಮಾಡಿದ್ದಾರೆ ನೆಟ್ಟಿಗರು.
Viral Video : ಪ್ರಯಾಣಿಕರ ಯಾನ ಪ್ರಶಾಂತವಾಗಿ ಸಾಗಲಿ, ಕಲಾತ್ಮಕ ಪರಿಸರದಿಂದ ಸ್ಫೂರ್ತಿಗೊಳ್ಳಲಿ ಎಂಬ ಉದ್ದೇಶದಿಂದ ಕೇಂದ್ರ ರೈಲ್ವೆ ಇಲಾಖೆಯು ಪಶ್ಚಿಮ ಬಂಗಾಳದ ಲೋಕಲ್ ರೈಲಿನ ಕೋಚ್ಗಳನ್ನು ಹೀಗೆ ಭಿತ್ತಿಚಿತ್ರಗಳ ಮೂಲಕ ಅಲಂಕರಿಸಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ ನಿಜ. ಆದರೆ ನೆಟ್ಟಿಗರು ಮಾತ್ರ ಮಿಶ್ರ ಅಭಿಪ್ರಾಯಗಳನ್ನು ಹೊಮ್ಮಿಸುತ್ತಿದ್ದಾರೆ. ಯಾಕಿರಬಹುದು? ಓದಿ.
Sir, मेरा नाम स्वागत कुमार साहू है।मैं आज train no -18451 Sambalpur jn to Khurda road (jn)यात्रा कर्रहथा मेरा आज jail warder की exam था।मेरा ट्रेन 4.10 hr delayed होगेया जिसकी वजेसे आज इतने मेहनत करने के बाद भी मैं आज exam देने मैं असमर्थ रहा . Thank you Indian railway?? pic.twitter.com/G22DPg8IY9
ಇದನ್ನೂ ಓದಿ— S Swain (@SSwain03666288) December 27, 2022
ಸೀಲ್ದಾ- ಬಂಗಾವ್ಗೆ ಚಲಿಸುವ ರೈಲ್ವೇಯ ಕೋಚ್ಗಳೊಳಗೆ ಹಳ್ಳಿಯ ಜನಜೀವವನ್ನು ಬಿಂಬಿಸುವ ಭಿತ್ತಿಚಿತ್ರಗಳನ್ನು ರಚಿಸಿ ನವೀಕರಿಸಲಾಗಿದೆ. ಈ ಮೂಲಕ ಸ್ಥಳೀಯ ರೈಲುಗಳನ್ನು ಆಕರ್ಷಕವಾಗಿ ಅಲಂಕರಿಸಿ ಪ್ರಯಾಣಿಕರ ಗಮನ ಸೆಳೆಯುವುದು ಇಲಾಖೆಯ ಉದ್ದೇಶವಾಗಿದೆ. ಬಾಗಿಲು ಮತ್ತು ಕಿಟಕಿಗಳಿಗೆ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗಿದ್ದು ರೈಲು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಇದನ್ನೂ ಓದಿ : 9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್
ಈ ವಿಡಿಯೋ ಅನ್ನು ಈತನಕ ಸುಮಾರು 75,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 1,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ರೈಲ್ವೆ ಇಲಾಖೆಯು ಹೀಗೆ ಬಣ್ಣ, ಲೈಟಿನಿಂದ ಅಲಂಕರಿಸುವುದಕ್ಕಿಂತ ನಿತ್ಯಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪುವಂತೆ ಕಾರ್ಯ ನಿರ್ವಹಿಸಬೇಕು. ಇಲಾಖೆಯ ಇತರೇ ಸೇವೆಗಳು ಸೂಕ್ತ ರೀತಿಯಲ್ಲಿ ಅರ್ಹರಿಗೆ ತಲುಪಬೇಕು. ಈ ವಿಷಯವಾಗಿ ಇಲಾಖೆಯು ಗಮನ ಕೊಡುವುದು ಅತ್ಯವಶ್ಯವಾಗಿದೆ ಎಂದಿದ್ದಾರೆ ಅನೇಕರು.
ಆಹಾರ ಪೂರೈಕೆ, ವಿಳಂಬ ಪ್ರಯಾಣ, ಸ್ವಚ್ಛತೆ ಇತ್ಯಾದಿ ವಿಷಯವಾಗಿ ಇಲಾಖೆಯ ಸೇವೆಯಲ್ಲಿ ಕಂಡುಬಂದಿರುವ ಕುಂದುಕೊರತೆಗಳನ್ನು ದಾಖಲೆ ಸಮೇತ ರೀಟ್ವೀಟ್ ಮಾಡಿ ಇಲಾಖೆಯ ಗಮನ ಸೆಳೆದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:50 am, Thu, 29 December 22