9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್

Train : ಈ ರೈಲಿಗಾಗಿ ಕಾದಿರುವ ಎಲ್ಲರಿಗೂ ಎಷ್ಟೊಂದು ತಾಳ್ಮೆ ಇದೆ ಎಂದಿದ್ದಾರೆ ಒಬ್ಬರು. ನಾನಾಗಿದ್ದರೆ ಖಂಡಿತ ಕಾಯುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಇದನ್ನು ಓದುತ್ತಿರುವ ನೀವು ಇಷ್ಟೊತ್ತು ಕಾಯುತ್ತಿದ್ದಿರಾ?

9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್
ಒಂಭತ್ತು ತಾಸುಗಳ ನಂತರ ರೈಲು ಬಂದಾಗ ಜನರು ಸಂಭ್ರಮಿಸಿದ ರೀತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 29, 2022 | 5:46 PM

Viral Video : ಅಬ್ಬಬ್ಬಾ ಎಂದರೆ ಒಂದು ತಾಸು ಕಾಯಬಹುದು ರೈಲನ್ನು. ಅದಕ್ಕಿಂತ ಹೆಚ್ಚಾದರೆ ಯಾರಿಗೂ ಬೇಸರವಾಗುತ್ತದೆ. ಆದರೆ ಆ ರೈಲು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದಾಗ ಕಾಯುವುದು ಅನಿವಾರ್ಯವೇ ಆಗುತ್ತದೆ. ಕಾಯ್ದು ಕಾಯ್ದು ಅಂತೂ ಕೊನೆಗೆ ರೈಲು ಬಂದಾಗ ಆಗುವ ಸಂತೋಷ ಇದೆಯಲ್ಲ, ಅನುಭವಿಸಿದವರಿಗೇ ಗೊತ್ತು. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಒಂಭತ್ತು ತಾಸುಗಳ ತನಕ ರೈಲಿಗಾಗಿ ಕಾಯ್ದ ಪ್ರಯಾಣಿಕರು, ರೈಲು ಬಂದ ನಂತರ ಸಂಭ್ರಮಿಸಿದ ಪರಿಯನ್ನು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೂರಾರು ಜನರು ಪ್ಲ್ಯಾಟ್​ಫಾರ್ಮ್ ಮೇಲೆ ಈ ರೈಲಿಗಾಗಿ ಕಾಯುತ್ತಿದ್ದಾರೆ. ದೂರದಿಂದ ರೈಲು ಬರುತ್ತಿದ್ದಂತೆ ವಿಜಯೋತ್ಸಾಹದಿಂದ ಸಂಭ್ರಮಿಸಿದ್ದಾರೆ. ಈ ವಿಡಿಯೋ ಅನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. 6,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಅಬ್ಬಾ ನಿಮಗೆಲ್ಲ ಇಷ್ಟೊಂದು ತಾಳ್ಮೆ ಇದೆಯಲ್ಲ ಶಭಾಷ್​ ಎಂದಿದ್ದಾರೆ ನೆಟ್ಟಿಗರು. ನಾನಾಗಿದ್ದರೆ ಖಂಡಿತ ಇಷ್ಟುಹೊತ್ತು ಕಾಯುತ್ತಲೇ ಇರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಒಂದು ದಿನವೇ ವ್ಯರ್ಥವಾಯಿತಲ್ಲ ಒಂದು ರೈಲಿಗೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಬಂತೂ ಬಂತೂ ರೈಲು ಬಂತು ಎಂಬಂತಾಗಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Published On - 5:43 pm, Tue, 29 November 22