ಬಂತೋ ಬಂತೂ ನಾಯಿಗಳ ಬಸ್ಸು; ಮಿಲಿಯನ್ ಜನರಿಗೆ ಈ ವಿಡಿಯೋ ಇಷ್ಟವಾಗಿದೆ
Pack Walk for Dogs : ಅಮೆರಿಕದ ಅಲಾಸ್ಕ್ನಲ್ಲಿ ನಾಯಿಗಳಿಗಾಗಿ ಎಂದೇ ಪ್ಯಾಕ್ ವಾಕ್ ನಡೆಸಿಕೊಂಡು ಬರುತ್ತಿದ್ದಾರೆ ಮೋ ಥಾಂಪ್ಸನ್ ಮತ್ತು ಆಕೆಯ ಗಂಡ ಲೀ ಥಾಂಪ್ಸನ್. ಪ್ರತೀ ದಿನ ಇವರು ಐದು ಟ್ರಿಪ್ ನಿಭಾಯಿಸುತ್ತಾರೆ. ನೋಡಿ ವಿಡಿಯೋ.
Viral Video : ಸಾಕುಪ್ರಾಣಿಗಳನ್ನು ಸ್ಕೂಟರ್ ಮೇಲೆ, ಕಾರಿನೊಳಗೆ ಕರೆದುಕೊಂಡು ಹೋಗುವುದನ್ನು ಈಗಲೂ ನೋಡುತ್ತ ನಿಲ್ಲುತ್ತೇವೆ ತಾನೆ? ಮುಗ್ಧತೆ ಸೂಸುವ ಅವುಗಳ ಕಣ್ಣುಗಳು, ಸ್ಪಂದಿಸುವ ರೀತಿ ನಮ್ಮನ್ನು ಹಾಗೆ ಆಕರ್ಷಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಿಮಪ್ರದೇಶದಲ್ಲಿ ಬಸ್ಸೊಂದು ಚಲಿಸುತ್ತಿದೆ. ಬಸ್ಸಿಗಾಗಿಯೇ ಕಾಯುತ್ತಿರುವ ಪ್ರಯಾಣಿಕರಂತೆ ಈ ನಾಯಿಗಳು ಬಸ್ಸನ್ನು ಏರುತ್ತವೆ. ಸೀಟಿನ ಮೇಲೆ ಕುಳಿತುಕೊಳ್ಳುತ್ತವೆ. ಮುಂದೆ ಪಿಕ್ನಿಕ್ಗೆ ಹೋಗುತ್ತವೆ!
The Doggy Bus!
ಇದನ್ನೂ ಓದಿThey’re going out for a pack walk. ?
?Skagway, Alaska ? TT: mo_mountains_mutts pic.twitter.com/rBMlHOg6XL
— Buitengebieden (@buitengebieden) January 2, 2023
ಟ್ವೀಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದ ಶೀರ್ಷಿಕೆ ದಿ ಡಾಗಿ ಬಸ್. ಅಲಾಸ್ಕಾದ ಸ್ಕಾಗ್ವೇನಗರದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಹೀಗೆ ಪ್ಯಾಕ್ವಾಕ್ಗೆ ಹೊರಟ ಈ ನಾಯಿಗಳ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಬಸ್ಸು ಹತ್ತುತ್ತಿದ್ದಂತೆ ಇವುಗಳ ಬೆಲ್ಟ್ಗಳನ್ನು ಸರಿ ಮಾಡಿ ಸೀಟಿನ ಮೇಲೆ ಕುಳಿತುಕೊಳ್ಳಲು ಅನುವು ಮಾಡಿಕೊಡುತ್ತಾರೆ ಒಬ್ಬ ಮಹಿಳೆ. ನಂತರ ಬಸ್ ಚಲಿಸುತ್ತದೆ. ಈ ವಿಡಿಯೋ ಅನ್ನು ಈತನಕ 1.2 ಮಿಲಿಯನ್ ಜನರು ನೋಡಿದ್ದಾರೆ.
ಇದನ್ನೂ ಓದಿ : ತೋಳದಂತೆ ಕಾಣಲು ಜಪಾನಿನ ವ್ಯಕ್ತಿ ರೂ 18 ಲಕ್ಷ ಖರ್ಚು ಮಾಡಿದ ಕಥೆ ಇದು
ಡೈಲಿಮೋಷನ್ ವರದಿಯಂತೆ, ಅಮೇರಿಕದ ಅಲಾಸ್ಕ್ನಲ್ಲಿ ನಾಯಿಗಳಿಗಾಗಿ ಪ್ಯಾಕ್ ವಾಕ್ ನಡೆಸಿಕೊಂಡು ಬರುತ್ತಿದ್ದಾರೆ ಮೋ ಥಾಂಪ್ಸನ್ ಮತ್ತು ಆಕೆಯ ಗಂಡ ಲೀ ಥಾಂಪ್ಸನ್. ಪ್ರತೀ ದಿನ ಇವರು ಐದು ಟ್ರಿಪ್ ನಿಭಾಯಿಸುತ್ತಾರೆ. ಲೀ ಬಸ್ ಡ್ರೈವರ್ ಆದರೆ ಮೋ ನಾಯಿಗಳನ್ನು ನೋಡಿಕೊಳ್ಳುತ್ತಾಳೆ. ನಮ್ಮಂತೆ ಅವುಗಳಿಗೂ ಬದಲಾವಣೆ ಬೇಕು. ಅದಕ್ಕಾಗಿ ಅವುಗಳೂ ಪ್ರಯಾಣಿಸಬೇಕು, ಅವುಗಳಿಗೂ ಸಾಮಾಜಿಕ ಜೀವನ ಎನ್ನುವುದು ಇದೆ ಎನ್ನುತ್ತಾರೆ ಈ ದಂಪತಿ.
ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ
‘ನಾವು ಈ ಕೆಲಸವನ್ನು ಬಹಳ ಆನಂದಿಸುತ್ತೇವೆ. ಇದು ಅತ್ಯಂತ ಒಳ್ಳೆಯ ಕೆಲಸವೆಂದು ಭಾವಿಸುತ್ತೇವೆ. ಹಲವಾರು ಜನರಿಗೆ ಕುತೂಹಲವಿದೆ. ಈ ನಾಯಿಗಳಿಗೆ ಹೇಗೆ ತರಬೇತಿ ಕೊಡುತ್ತೀರಿ, ಅಕಸ್ಮಾತ್ ಏನಾದರೂ ಹೆಚ್ಚೂ ಕಡಿಮೆಯಾದರೆ ಹೇಗೆ ನಿಭಾಯಿಸುತ್ತೀರಿ ಅಂತೆಲ್ಲ. ಈತನಕ ಇಷ್ಟೆಲ್ಲ ನಾಯಿಗಳು ನಮ್ಮೊಂದಿವೆ ನಿಯಮಿತವಾಗಿ ಪ್ಯಾಕ್ವಾಕ್ಗೆ ಬರುತ್ತಲೇ ಇವೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು. ಅವುಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ನಾವು ಬಹಳ ಗಮನ ಕೊಡುತ್ತೇವೆ’ ಎನ್ನುತ್ತಾರೆ ಈ ದಂಪತಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:23 pm, Tue, 3 January 23