AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆವಿಲ್ಸ್​ ಪೂಲ್​; ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್

Victoria Waterfalls: ಜೀವಕ್ಕೆ ಕುತ್ತು ತಂದುಕೊಳ್ಳುವ ಇಂಥ ಹುಚ್ಚಾಟಗಳೆಲ್ಲ ಬೇಕಾ ಎಂದು ಕೆಲವರು ಕೇಳುತ್ತಿದ್ಧಾರೆ. ಇಲ್ಲಿ ಹೀಗೆ ಮಲಗಿ ಫೋಟೋ ವಿಡಿಯೋ ತೆಗೆಸಿಕೊಳ್ಳುವ ಟ್ರಿಕ್​ ಬಗ್ಗೆ ಇನ್ನೂ ಕೆಲವರು ಚರ್ಚಸಿದ್ದಾರೆ.

ಡೆವಿಲ್ಸ್​ ಪೂಲ್​; ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್
ವಿಕ್ಟೋರಿಯನ್ ಜಲಪಾತದ ಡೆವಿಲ್ಸ್ ಪೂಲ್​ನಲ್ಲಿ ಪ್ರವಾಸಿಯ ಸಾಹಸ
TV9 Web
| Edited By: ಶ್ರೀದೇವಿ ಕಳಸದ|

Updated on:Jan 03, 2023 | 11:48 AM

Share

Viral Video : ಪ್ರಪಂಚದ ಅತೀ ಎತ್ತರದ ಜಲಪಾತಗಳಲ್ಲಿ ವಿಕ್ಟೋರಿಯಾ ಜಲಪಾತದಲ್ಲಿರುವ ಡೆವಿಲ್ ಪೂಲ್​ ಕೂಡ ಒಂದು. 355 ಅಡಿ ಎತ್ತರದಲ್ಲಿರುವ ಈ ಜಲಪಾತದಂಚಿನಲ್ಲಿ ಯುವತಿಯೊಬ್ಬಳು ಹೀಗೆ ಆನಂದವನ್ನು ಅನುಭವಿಸುತ್ತಿದ್ದಾಳೆ. ನೋಡಲೇನೋ ರೋಮಾಂಚಕಾರಿ ದೃಶ್ಯ. ಆದರೆ ನೋಡಿದ ಯಾರಿಗೂ ಇದರ ಆಳ ಧುಮುಕು ಭಯ ತರದೇ ಇರದು. ಆದರೂ ಹರಿಯುತ್ತಿರುವ ನೀರಿನಲ್ಲಿ ಈ ಯುವತಿ  ನಿರಾಯಾಸವಾಗಿ ಹೇಗೆ ಮಲಗಿದ್ದಾಳೆ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೆ? ಇದೇನಿದ್ದರೂ ಸಾಹಸಪ್ರಿಯರಿಗೆ ಮಾತ್ರ ಮೀಸಲು ಎಂದು ನೀವಂದುಕೊಳ್ಳಬಹುದು. ಆದರೆ ಇದರ ಹಿಂದಿನ ನಿಜವಾದ ತಂತ್ರ ಬೇರೆಯೇ ಇದೆ.

ಈ ಡೆವಿಲ್​ ಪೂಲ್​ ವಿಕ್ಟೋರಿಯನ್​ ಜಲಪಾತದ ಅಂಚಿನಲ್ಲಿ ಸಹಜವಾಗಿ ನಿರ್ಮಿತವಾಗಿರುವ ಅಷ್ಟೇನು ಆಳವಲ್ಲದ ಕೊಳವಾಗಿದೆ. ಜೂನ್​ನಿಂದ ಡಿಸೆಂಬರ್ ಮಧ್ಯೆ ಜಾಂಬೇಜಿ ನದಿಯ ಹರಿವು ನಿಧಾನ ಗತಿಯಲ್ಲಿರುತ್ತದೆ. ಹಾಗಾಗಿ ಈಜು ಬರುವವರನ್ನು ಮತ್ತು ಧೈರ್ಯವಿರುವ ಜನರನ್ನು ಮಾತ್ರ ವೃತ್ತಿಪರ ಮಾರ್ಗದರ್ಶನದಲ್ಲಿ ಡೆವಿಲ್​ ಪೂಲ್​ನ ಬಳಿ ಹೋಗಲು ಇಲ್ಲಿ ಅನುಮತಿ ನೀಡಲಾಗುತ್ತದೆ.

ಡಿಸೆಂಬರ್ 20ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 67 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 16,5000 ಜನರು ರೀಟ್ವೀಟ್ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಇದನ್ನೂ ನೋಡಿ : ಯುದ್ಧವೂ ಕಲೆ; ಆಕಾಶದಲ್ಲಿ ಹಾರ್ನ್​ಬಿಲ್​ಗಳ ಬಿರುಸಿನ ಕಾಳಗ, ವೈರಲ್ ಆದ ವಿಡಿಯೋ

ಇದು ಅಪಾಯಕಾರಿ ಜಲಪಾತ. ಇಲ್ಲಿ ಹೀಗೆಯೇ ಯಾರನ್ನೂ ಬಿಡುವುದಿಲ್ಲ. ಇಷ್ಟು ಎತ್ತರದ ಜಲಪಾತದ ಅಂಚಿಗೆ ಹೀಗೆ ನಿರಾಯಾಸವಾಗಿ ಮಲಗಲು ಯಾರಿಗೂ ಸಾಧ್ಯವೇ ಇಲ್ಲ. ಮಲಗಿದಾಗ ನಿಮ್ಮ ಕಾಲುಗಳನ್ನು ಹಿಡಿದುಕೊಳ್ಳಲಾಗುತ್ತದೆ. ನಂತರ ನಿಮ್ಮ ಮೊಬೈಲ್​ನಿಂದ ಫೋಟೋ ಅಥವಾ ವಿಡಿಯೋ ಮಾಡಿಕೊಡಲಾಗುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗಳೂ ಇಲ್ಲಿಗೆ ಹೋಗಿ ಬಂದಿದ್ದಾಳೆ. ಅವಳದೂ ಇದೇ ಅನುಭವ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ನನ್ನ ಸ್ನೇಹಿತನೊಬ್ಬ ಹೀಗೆ ಫೋಟೋ ತೆಗೆಸಿಕೊಳ್ಳಲು ಹೋಗಿ ಬಿದ್ದು ಸತ್ತೇ ಹೋದ. ಇಲ್ಲಿ ಫೋಟೋ ತೆಗೆಸಿಕೊಳ್ಳುವುದು ಅಷ್ಟು ಮುಖ್ಯವಲ್ಲ, ಇಂಥ ಹುಚ್ಚು ಸಾಹಸಕ್ಕೆ ಈಡಾಗಬೇಡಿ ಎಂದು ಮತ್ತೊಬ್ಬರು ಹೇಳಿದ್ಧಾರೆ. ನಾನು ಕೂಡ ಇಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಬಂದಿದ್ದೇನೆ ಎಂದು ಕೆಲವರು ಹೇಳಿದ್ಧಾರೆ. ಒಮ್ಮೆಯಾದರೂ ನಾನಿಲ್ಲಿಗೆ ಹೋಗಿ ಹೀಗೆ ಫೋಟೋ ತೆಗೆಸಿಕೊಳ್ಳಬೇಕು ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:45 am, Tue, 3 January 23

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್