Niagara Falls: ಹಿಮದ ಬಿರುಗಾಳಿಗೆ ಹೆಪ್ಪುಗಟ್ಟಿದ ನಯಾಗರ ಜಲಪಾತ: ಚಿತ್ರಗಳಲ್ಲಿ ನೋಡಿ
ಬಾಂಬ್ ಚಂಡಮಾರುತವು ಅಮೆರಿಕದಲ್ಲಿ ವಿನಾಶವನ್ನು ಉಂಟುಮಾಡಿದೆ. ಎಲ್ಲೆಂದರಲ್ಲಿ ಹಿಮದ ಹೊದಿಕೆ ಇರುವುದರಿಂದ ಅಮೆರಿಕದ ಜನರಿಗೆ ಭೂಮಿ ನೋಡುವ ಅವಕಾಶ ಸಿಗುತ್ತಿಲ್ಲ.
Updated on: Jan 02, 2023 | 10:06 AM

ಅಮೆರಿಕದಲ್ಲಿ ಹಿಮ ಚಂಡಮಾರುತದ ಪರಿಣಾಮದಿಂದ 50 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಾವಿರಾರು ವಿಮಾನಗಳು ರದ್ದಾಗಿವೆ. ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ನೀರಿನ ಕೊಳವೆಗಳಲ್ಲಿ ಮಂಜುಗಡ್ಡೆ ಹೆಪ್ಪುಗಟ್ಟಿದೆ.

ನಯಾಗರ ಸಂಪೂರ್ಣವಾಗಿ ಮಂಜಾಗಿ ಬದಲಾಗಿಲ್ಲ. ಅಲ್ಲಲ್ಲಿ ನೀರು ಹೆಪ್ಪುಗಟ್ಟಿದ್ದು ಒಳಭಾಗದಲ್ಲಿ ನೀರಿನ ಹರಿವಿದೆ. ನಿರ್ದಿಷ್ಟವಾಗಿ ತಂಪಾದ ತಾಪಮಾನದಲ್ಲಿ, ಮಂಜು ಮತ್ತು ಸ್ಪ್ರೇ ಧುಮ್ಮಿಕ್ಕುವ ನೀರಿನ ಮೇಲೆ ಮಂಜುಗಡ್ಡೆಯ ಹೊರಪದರವನ್ನು ರೂಪಿಸಲು ಪ್ರಾರಂಭಿಸುತ್ತದೆ. ಇದು ಜಲಪಾತವು ವಾಸ್ತವವಾಗಿ ಕಲ್ಲಾಗಿ ನಿಂತು ಹೋದಂತೆ ಕಂಡು ಬರುತ್ತದೆ. ಆದರೆ ನೀರು ಮಂಜುಗಡ್ಡೆಯ ಪದರಗಳ ಕೆಳಗೆ ಹರಿಯುತ್ತಿರುತ್ತದೆ ಎಂದು ನಯಾಗರಾ ಪಾರ್ಕ್ಸ್ ವೆಬ್‌ಸೈಟ್ ಮಾಹಿತಿ ನೀಡಿದೆ.

ವಿಶ್ವದ ಅತಿದೊಡ್ಡ ಜಲಪಾತಗಳಲ್ಲಿ ಒಂದಾದ ನಯಾಗರಾ ಜಲಪಾತವು ಹಿಮದ ಚಂಡಮಾರುತದಿಂದಾಗಿ ಹೆಪ್ಪುಗಟ್ಟಿದೆ. ನಯಾಗರಾ ಜಲಪಾತದ ಘನೀಕರಣದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿವೆ, ಅದರಲ್ಲಿ ಹರಿಯುವ ಹಿಮವು ಗೋಚರಿಸುತ್ತದೆ.

ನಯಾಗರ ಜಲಪಾತವು ನಯಾಗರ ನದಿಯ ಮೇಲೆ ನೆಲೆಗೊಂಡಿದೆ, ಇದು ಯುಎಸ್ ರಾಜ್ಯಗಳ ನ್ಯೂಯಾರ್ಕ್ ಮತ್ತು ಕೆನಡಾದ ಒಂಟಾರಿಯೊ ಪ್ರಾಂತ್ಯಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಹರಿಯುತ್ತದೆ.

ಈ ರೀತಿ ಫ್ರೀಜ್ ಆಗಿರುವುದು ಇದೇ ಮೊದಲಲ್ಲ 1848ರಲ್ಲಿ ಮೊದಲ ಬಾರಿಗೆ ಜಲಪಾತ ಫ್ರೀಜ್ ಆಗಿತ್ತು ಎಂದು ಇತಿಹಾಸ ಹೇಳುತ್ತದೆ. ತದ ನಂತರ 1902,1906,1911,1932,2014,2017,2018 ಈ ಇಸವಿಗಳಲ್ಲೂ ಫ್ರೀಜ್ ಆಗಿತ್ತು. ಉಷ್ಣಾಂಶ ಬಹಳ ಕಡಿಮೆ ಆದಾಗ ಈ ರೀತಿ ಫ್ರೀಜ್ ಆಗುತ್ತದೆ. ಈ ಬಾರಿ ಈ ರೀತಿ ಫ್ರೀಜ್ ಆಗಿರುವುದಕ್ಕೆ ಕಾರಣ ಬಾಂಬ್ ಸೈಕ್ಲೋನ್.

ಅಮೆರಿಕ ಹಿಂದೆಂದೂ ಕಂಡು ಕೇಳರಿಯದ ಬಾಂಬ್ ಹಿಮಪಾತದಿಂದ ಈ ಬಾರಿ ನಲುಗಿದ್ದು, ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ದೇಶವನ್ನಪ್ಪಳಿಸಿದ ಹಿಮಪಾತಕ್ಕೆ ಸಿಲುಕಿ ಅಮೆರಿಕದಲ್ಲಿ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

ಹಿಮಪಾತದಿಂದಾಗಿ ಜಲಾಶಯವೂ ಈಗ ಚಳಿಗಾಲದ ವಂಡರ್‌ಲ್ಯಾಂಡ್‌ನಂತೆ ಕಾಣಿಸುತ್ತಿದೆ. ಮೈನಸ್ ಶೂನ್ಯ ತಾಪಮಾನದಿಂದಾಗಿ ನಯಾಗರಾ ಜಲಪಾತವು ಭಾಗಶಃ ಹೆಪ್ಪುಗಟ್ಟಿದ್ದು, ಚಳಿಗಾಲದ ಅದ್ಭುತ ಲೋಕದಂತೆ ಕಾಣಿಸುತ್ತಿದೆ.

ಈ ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗರ ಜಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಾಯಾಗಾರ ಫಾಲ್ಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಮೆರಿಕದಲ್ಲಿ ತಾಪಮಾನ -52 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. 60 ರಷ್ಟು ಜನಸಂಖ್ಯೆಯು ಶೀತ ಅಲೆಯ ಹಿಡಿತದಲ್ಲಿದೆ









