IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಅತೀ ಹೆಚ್ಚು ಮೊತ್ತ ಪಡೆದ ಆಟಗಾರ ಯಾರು ಎಂಬ ಪ್ರಶ್ನೆಗೆ ಥಟ್ಟನೆ ಕೇಳಿ ಬರುತ್ತಿದ್ದ ಉತ್ತರ ಎಂಎಸ್ ಧೋನಿ. ಆದರೆ ಈ ಬಾರಿ ಐಪಿಎಲ್ನ ಟಾಪ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಬದಲಾವಣೆಗಳಾಗಿವೆ.
ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಕಳೆದ ಸೀಸನ್ನಲ್ಲಿ 12 ಕೋಟಿಗೆ ಸಿಎಸ್ಕೆ ಪರ ಆಡಿದ್ದ ಧೋನಿ ಅವರ ವೇತನದಲ್ಲಿ ಈ ವರ್ಷ ಕೂಡ ಬದಲಾವಣೆ ಆಗಿಲ್ಲ. ಇದರೊಂದಿಗೆ ಹಿಟ್ಮ್ಯಾನ್ ಐಪಿಎಲ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಹಾಗಿದ್ರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಆದಾಯಗಳಿಸಿರುವ ಟಾಪ್-10 ಆಟಗಾರರು ಯಾರೆಲ್ಲಾ ಎಂದು ನೋಡೋಣ...
10- ದಿನೇಶ್ ಕಾರ್ತಿಕ್: ಪ್ರಸ್ತುತ ಆರ್ಸಿಬಿ ತಂಡದ ಆಟಗಾರನಾಗಿರುವ ದಿನೇಶ್ ಕಾರ್ತಿಕ್ ಐಪಿಎಲ್ ಮೂಲಕ ಸಂಪಾದಿಸಿರುವ ಒಟ್ಟು ಮೊತ್ತ 86.92 ಕೋಟಿ ರೂ.
9- ಶಿಖರ್ ಧವನ್: 2008 ರಿಂದ ಐಪಿಎಲ್ ತಂಡಗಳ ಭಾಗವಾಗಿರುವ ಶಿಖರ್ ಧವನ್ ಗಳಿಸಿರುವ ಒಟ್ಟು ಆದಾಯ 91.8 ಕೋಟಿ ರೂ.
8- ಗೌತಮ್ ಗಂಭೀರ್: 2018 ರವರಗೆ ಐಪಿಎಲ್ನ ಭಾಗವಾಗಿದ್ದ ಗೌತಮ್ ಗಂಭೀರ್ ಪಡೆದಿರುವ ಒಟ್ಟು ಮೊತ್ತ 94.62 ಕೋಟಿ ರೂ.
7- ಎಬಿ ಡಿವಿಲಿಯರ್ಸ್: 2021 ರವರೆಗೆ ಐಪಿಎಲ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸೌತ್ ಆಫ್ರಿಕಾ ಎಬಿ ಡಿವಿಲಿಯರ್ಸ್ ಪಡೆದಿರುವ ಒಟ್ಟು ಮೊತ್ತ 102.5 ಕೋಟಿ ರೂ.
6- ಸುನಿಲ್ ನರೈನ್: 2012 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ವೆಸ್ಟ್ ಇಂಡೀಸ್ ಸ್ಪಿನ್ನರ್ ನರೈನ್ ಪಡೆದಿರುವ ಒಟ್ಟು ಮೊತ್ತ 107.2 ಕೋಟಿ ರೂ.
5- ರವೀಂದ್ರ ಜಡೇಜಾ: ಸಿಎಸ್ಕೆ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಐಪಿಎಲ್ ಮೂಲಕ ಗಳಿಸಿರುವ ಒಟ್ಟು ಆದಾಯ 109 ಕೋಟಿ ರೂ.
4- ಸುರೇಶ್ ರೈನಾ: 2021 ರವರೆಗೆ ಐಪಿಎಲ್ನಲ್ಲಿ ಕಾಣಿಸಿಕೊಂಡ ಸುರೇಶ್ ರೈನಾ ಪಡೆದಿರುವ ಒಟ್ಟು ಮೊತ್ತ 110 ಕೋಟಿ ರೂ.
3- ವಿರಾಟ್ ಕೊಹ್ಲಿ: 2008 ರಿಂದ ಆರ್ಸಿಬಿ ಪರ ಮಾತ್ರ ಆಡಿರುವ ವಿರಾಟ್ ಕೊಹ್ಲಿ ಐಪಿಎಲ್ ಮೂಲಕ ಗಳಿಸಿರುವ ಒಟ್ಟು ಆದಾಯ 173.2 ಕೋಟಿ ರೂ.
2- ಮಹೇಂದ್ರ ಸಿಂಗ್ ಧೋನಿ- 2008 ರಿಂದ ಐಪಿಎಲ್ ಆಡುತ್ತಿರುವ ಧೋನಿ ಪಡೆದ ಒಟ್ಟು ಮೊತ್ತ 176.84 ಕೋಟಿ ರೂ.
1- ರೋಹಿತ್ ಶರ್ಮಾ: 16 ಸೀಸನ್ ಮೂಲಕ ರೋಹಿತ್ ಶರ್ಮಾ ಪಡೆದಿರುವ ಒಟ್ಟು ಮೊತ್ತ 178.6 ಕೋಟಿ ರೂ.
Published On - 11:10 pm, Sun, 1 January 23