AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

Marriage : ಮದುವೆಯಲ್ಲಿ ವರನು ವಧುವಿನ ಚಿತ್ರವನ್ನು ಕ್ಯಾನ್ವಾಸ್​ಮೇಲೆ ತಲೆಕೆಳಗಾಗಿ ಬಿಡಿಸುತ್ತಾ ಹೋಗುತ್ತಾನೆ. ಕೊನೆಯ ಹಂತಕ್ಕೆ ಬಂದಾಗ ವಧುವಿನ ಅಚ್ಚರಿಯಮೊಗವನ್ನು ನೋಡಲಾದರೂ ನೀವು ಈ ವಿಡಿಯೋ ನೋಡಲೇಬೇಕು.

ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​
ಮದುವೆಯಲ್ಲಿ ವಧುವಿನ ಪೋರ್ಟ್ರೇಟ್​ ಮಾಡಿದ ವರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 03, 2023 | 6:28 PM

Viral Video : ಮದುವೆಯ ದಿನ ವಧುವರರು ಎಲ್ಲಾ ಸಂಭ್ರಮಗಳಾಚೆಯೂ ಏನಾದರೂ ಒಂದು ಅಚ್ಚರಿಯನ್ನು ಎದುರು ನೋಡುತ್ತಿರುತ್ತಾರೆ. ಎಷ್ಟೋ ವಧುವರರು ನರ್ತಿಸುತ್ತಾರೆ. ವಾದ್ಯಗಳನ್ನು ನುಡಿಸುತ್ತಾರೆ. ಸಂಗೀತ ಕಛೇರಿಯನ್ನೂ ನೀಡುತ್ತಾರೆ. ಈಗಿಗಲಂತೂ ಸಾಹಸವನ್ನೂ ಮಾಡುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ವಿಶಿಷ್ಟ. ವರ ತನ್ನ ವಧುವಿನ ಚಿತ್ರವನ್ನು ಬಿಡಿಸುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Varun Jarsania (@varun.jarsania)

ವಧು ಪ್ರಥಾ ವರ ವರುಣ್​. ಕ್ಯಾನ್ವಾಸ್ ಮೇಲೆ ತನ್ನ ಚಿತ್ರ ಮೂಡುತ್ತಿದ್ದಂತೆ ಉತ್ಸಾಹ ಮತ್ತು ಖುಷಿಯಿಂದ ಪ್ರಜ್ವಲಿಸುತ್ತಾಳೆ ಪ್ರಥಾ. ಮಜಾ ಎಂದರೆ ಈ ಚಿತ್ರವನ್ನು ತಲೆಕೆಳಗಾಗಿ ಚಿತ್ರಿಸುತ್ತಾರೆ ವರುಣ್​. ಚಿತ್ರ ಪೂರ್ತಿಯಾಗುತ್ತಿದ್ದಂತೆ ಕ್ಯಾನ್ವಾಸ್​ ಅನ್ನು ನೇರವಾಗಿ ಇಡುತ್ತಾನೆ ವರುಣ್​. ಆಗ ಪ್ರಥಾಳ ಅಚ್ಚರಿಯನ್ನು ನೋಡಿಯೇ ಅನುಭವಿಸಬೇಕು. ಈ ಕಲೆಗಾರಿಕೆಯನ್ನು ನೋಡಿದಾಗ ವರುಣ್​ ಪರಿಣತ ಕಲಾವಿದ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ : ತೋಳದಂತೆ ಕಾಣಲು ಜಪಾನಿನ ವ್ಯಕ್ತಿ ರೂ 18 ಲಕ್ಷ ಖರ್ಚು ಮಾಡಿದ ಕಥೆ ಇದು

ಈ ವಿಡಿಯೋ ಅನ್ನು ಮಿಲಿಯನ್​ಗಟ್ಟಲೆ ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯೆಗಳ ಮೂಲಕ ಶ್ಲಾಘಿಸಿದ್ದಾರೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಈ ಹುಡುಗಿ ಎಂಥ ಅದೃಷ್ಟವಂತೆ. ಇದಕ್ಕಿಂತ ದೊಡ್ಡ ಉಡುಗೊರೆ ಬೇಕೆ? ಎಂದು ಕೇಳಿದ್ದಾರೆ ಅನೇಕರು.

ಈ ವಿಡಿಯೋ ಅತ್ಯಂತ ಸುಂದರವಾಗಿದೆಯಲ್ಲ?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:24 pm, Tue, 3 January 23