ಮುಂಗಾಲಿಗಳೇ ಇಲ್ಲ ಈ ಟ್ರಕ್ಗೆ; ಭಾರತೀಯ ಡ್ರೈವರ್ಗಳಿಗೆ ಮಾತ್ರ ಈ ಸಾಹಸ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು
Viral Video : ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.

Viral Video : ನಮ್ಮ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಆಗಾಗ ನೋಡುತ್ತಲೇ ಇರುತ್ತೇವೆ. ತಮ್ಮ ಕೌಶಲದಿಂದ ಯಾರನ್ನೂ ಮೋಡಿಗೆ ಒಳಮಾಡುವಂಥ ಸಾಮರ್ಥ್ಯ ಇಲ್ಲಿಯವರಿಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮನುಷ್ಯ ಓಡಿಸುತ್ತಿರುವ ಟ್ರಕ್ಗೆ ಮುಂಗಾಲಿಗಳೇ ಇಲ್ಲ. ಬಹುಶಃ ಈ ಟ್ರಕ್ ಅಪಘಾತಕ್ಕೆ ಒಳಗಾದದ್ದು ಇರಬೇಕು. ಆದರೂ ಅದನ್ನು ತನ್ನ ಮಾತು ಕೇಳುವಷ್ಟರ ಮಟ್ಟಿಗೆ ರಿಪೇರಿ ಮಾಡಿಕೊಂಡು ಹೆದ್ದಾರಿಯಲ್ಲಿ ಓಡಿಸುತ್ತಿರುವ ಅವನ ಧೈರ್ಯಕ್ಕೆ ಸಲಾಮ್!
ಇದನ್ನು ನೋಡುತ್ತಿರುವ ಯಾರಿಗೂ ಇದು ಖಂಡಿತ ಗೊಂದಲಕ್ಕೆ ಬೀಳಿಸುತ್ತದೆ. ಹೀಗೆ ಅಪಾಯಕ್ಕೆ ಒಡ್ಡಿಕೊಳ್ಳಲು ಮಹಾನ್ ಧೈರ್ಯ ಬೇಕು ಒಂದು. ಇನ್ನೊಂದು ಮುಂಗಾಲಿಗಳಿಲ್ಲದೆ ಅದು ಓಡುತ್ತಿರುವುದಾದರೂ ಹೇಗೆ? ವಿಡಿಯೋ ಅನ್ನು ಈಗಾಗಲೇ 4.8 ಮಿಲಿಯನ್ ಜನರು ನೋಡಿದ್ದಾರೆ. 4 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು
ಆದರೆ ಅನೇಕರು ಇದು ಅತ್ಯಂತ ಅಪಾಯಕಾರಿ ನಡೆ ಎಂದು ಹೇಳಿದ್ದಾರೆ. ಏನಿದ್ದರೂ ಇಂಥದೆಲ್ಲ ಭಾರತೀಯ ಟ್ರಕ್ ಡ್ರೈವರ್ಗಳಿಗೆ ಮಾತ್ರ ಸಾಧ್ಯ ಎಂದಿದ್ದಾರೆ ಹಲವರು. ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:21 am, Wed, 4 January 23