ಸಿಯಾಚಿನ್​ನಲ್ಲಿ ನಿಯೋಜಿಸಲಾದ ಮೊದಲ ಮಹಿಳಾ ಕ್ಯಾಪ್ಟನ್​ ಶಿವಾ ಚೌಹಾಣ್​ಗೆ ನೆಟ್ಟಿಗರಿಂದ ಅಭಿನಂದನೆ

Shiva Chouhan : ಶಿವಾ ಶಕ್ತಿ! ಶಿವಾ ಅವರ ಯಶಸ್ಸು ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸೋಣ. ಅವರು ಲಿಂಗತಾರತಮ್ಯವನ್ನು ಸಿಯಾಚನ್​ನ ಹಿಮದ ಆಳದಲ್ಲಿ ಹೂತುಹಾಕುವಂತಾಗಲಿ ಎಂದಿದ್ಧಾರೆ ಆನಂದ ಮಹೀಂದ್ರಾ.

ಸಿಯಾಚಿನ್​ನಲ್ಲಿ ನಿಯೋಜಿಸಲಾದ ಮೊದಲ ಮಹಿಳಾ ಕ್ಯಾಪ್ಟನ್​ ಶಿವಾ ಚೌಹಾಣ್​ಗೆ ನೆಟ್ಟಿಗರಿಂದ ಅಭಿನಂದನೆ
ಸಿಯಾಚಿನ್​ನಲ್ಲಿ ನಿಯೋಜಿತಗೊಂಡು ಮೊದಲ ಮಹಿಳಾ ಕ್ಯಾಪ್ಟನ್​ ಶಿವಾ ಚೌಹಾಣ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 04, 2023 | 12:21 PM

Viral Video : ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್​ಗೆ ನಿಯೋಜಿಸಲಾದ ಮೊದಲ ಮಹಿಳಾ ಕ್ಯಾಪ್ಟನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕ್ಯಾಪ್ಟನ್ ಶಿವಾ ಚೌಹಾಣ್. ಈ ಕುರಿತು ಉದ್ಯಮಿ ಆನಂದ ಮಹೀಂದ್ರಾ ಟ್ವೀಟ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅನೇಕರು ಶಿವಾ ಅವರಿಗೆ ಗೌರವದಿಂದ ಮೆಚ್ಚುಗೆ ಸೂಚಿಸುತ್ತಿದ್ಧಾರೆ ಮತ್ತು ಅಭಿನಂದಿಸುತ್ತಿದ್ದಾರೆ.

ಸಿಯಾಚಿನ್​ನಲ್ಲಿ ಯುದ್ಧ ಸಂಬಂಧಿ ಚಟುವಟಿಕೆಗಳನ್ನು ನಿರ್ವಹಿಸಲು ಮೊದಲ ಸಲ ಮಹಿಳಾ ಅಧಿಕಾರಿಯನ್ನು ನಿಯೋಜಿಸಲಾದ ವಿಷಯವನ್ನು ಎಎನ್​ಐ ತನ್ನ ಟ್ವೀಟ್​ನಲ್ಲಿ ಹಂಚಿಕೊಂಡಿದೆ. ಜನವರಿ 2ರಂದು ಎಎನ್​ಐನ ವಿಡಿಯೋ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ ಆನಂದ ಮಹೀಂದ್ರಾ.

ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

ಶಿವಾ ಶಕ್ತಿ! ಶಿವಾ ಅವರ ಯಶಸ್ಸು ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸೋಣ. ಅವರು ಲಿಂಗತಾರತಮ್ಯವನ್ನು ಸಿಯಾಚನ್​ನ ಹಿಮದ ಆಳದಲ್ಲಿ ಹೂತುಹಾಕುವಂತಾಗಲಿ ಎಂದಿದ್ಧಾರೆ ಆನಂದ ಮಹೀಂದ್ರಾ. ನೂರಾರು ಜನರು ಈ ವಿಡಿಯೋಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

ಇಂಥ ಧೈರ್ಯಶಾಲಿಯನ್ನು ಹೆತ್ತ ಪೋಷಕರಿಗೆ ಸೆಲ್ಯೂಟ್​, ದೇವರು ಇವರೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಅನೇಕರು. ಈ ಹುದ್ದೆಯನ್ನೇರಿದ ಅವರಿಗೆ, ಅವರ ಕುಟುಂಬದ ಧೈರ್ಯಕ್ಕೆ ಸೆಲ್ಯೂಟ್​! ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:19 pm, Wed, 4 January 23