ನೀ ಬೀಳೋದೇ ಇಲ್ಲ ತಂಗಿ; ಹೇಗಿದೆ ಈ ಅಣ್ಣನ ಕಾಳಜಿ

Brother Sister Love : ತಾನು ಸೈಕಲ್ ಓಡಿಸುವಾಗ ಆಯತಪ್ಪಿ ಬಿದ್ದರೂ ತಂಗಿಗೆ ಏನೂ ಆಗಬಾರದು ಅಥವಾ ಯಾರಾದರೂ ಬಂದು ಸೈಕಲ್​ಗೆ ಹಾದರೂ ತನ್ನ ತಂಗಿಗೆ ಏನೂ ಆಗಬಾರದು. ಹೇಗಿದೆ ಅಣ್ಣನ ಕಾಳಜಿಯ ಪರಿ. ನೋಡಿ ವಿಡಿಯೋ.

ನೀ ಬೀಳೋದೇ ಇಲ್ಲ ತಂಗಿ; ಹೇಗಿದೆ ಈ ಅಣ್ಣನ ಕಾಳಜಿ
ತಂಗಿ ಬೀಳದಂತೆ ಅಣ್ಣ ಗಟ್ಟಿಯಾಗಿ ಬಟ್ಟೆಯಿಂದ ಕಟ್ಟಿ ಸೈಕಲ್​ ಮೇಲೆ ಕರೆದೊಯ್ಯುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 04, 2023 | 2:30 PM

Viral Video : ಚಿಕ್ಕವರನ್ನು ಯಾವ ಪ್ರಯಾಣದಲ್ಲಿಯೂ ಹೀಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ದೊಡ್ಡವರ ಕರ್ತವ್ಯ. ಇಲ್ಲಿರುವ ಅಣ್ಣನೇನು ಅಂಥಾ ದೊಡ್ಡವನಲ್ಲ. ಆದರೂ ತಂಗಿಗಿಂತ ದೊಡ್ಡವನು. ಮೂರು ವರ್ಷವೂ ದಾಟದ ತನ್ನ ತಂಗಿಯನ್ನು ಹೀಗೆ ಸೈಕಲ್​ನ ರಾಡ್​ಗೆ ಕಾಲುಗಳನ್ನು ಕಟ್ಟಿ ಆಕೆ ಸುರಕ್ಷಿತವಾಗಿ ಕುಳಿತುಕೊಳ್ಳುವಂತೆ ಮಾಡಿ ಸೈಕಲ್​ ಓಡಿಸುತ್ತಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ತಂಗಿಯ ಬಗೆಗಿರುವ ಅಣ್ಣನ ಕಾಳಜಿ ಪ್ರೀತಿಯನ್ನು ಕಂಡು ನೆಟ್ಟಿಗರ ಮನ ಕರಗುತ್ತಿದೆ. 22 ಸೆಕೆಂಡುಗಳ ಈ ಪುಟ್ಟ ವಿಡಿಯೋ ಅನ್ನು ಈತನಕ ಸುಮಾರು 14,000 ಜನರು ನೋಡಿದ್ದಾರೆ. ತಂಗಿಯ ಬೆನ್ನ ಹಿಂದೆ ಚೀಲಗಳನ್ನು ಕಟ್ಟಿದ್ದಾನೆ. ಎದೆಗೆ ತನ್ನ ಬೆನ್ನಿದೆ. ಕಾಲುಗಳನ್ನು ಸೈಕಲ್​ ರಾಡಿಗೆ ಕಟ್ಟಿದ್ದಾನೆ. ಅಕಸ್ಮಾತ್ ಬಿದ್ದರೂ ಗಂಭೀರವಾದ ಏಟು ಆಗದ ರೀತಿಯಲ್ಲಿ ಆಕೆಯನ್ನು ಎಲ್ಲಾ ರೀತಿಯಿಂದ ರಕ್ಷಿಸಿದ್ದಾನೆ ಅಣ್ಣ.

ಇದನ್ನೂ ಓದಿ : ನಾಯಿಯ ದಾಳಿಯಿಂದ ತನ್ನ ‘ಅಣ್ಣ’ನನ್ನು ರಕ್ಷಿಸಿದ ಜರ್ಮನ್ ಶೆಫರ್ಡ್​

ಅಪ್ಪ ಅಮ್ಮ ಕೂಲಿ ಮಾಡಿದರೇ ಆ ದಿನ ಹೊಟ್ಟೆ ತುಂಬುತ್ತದೆ. ಹೀಗಿರುವಾಗ ಅವರು ಕೂಲಿಗೆ ಹೊರಟಾಗ ಪುಟ್ಟಮಕ್ಕಳನ್ನು ದೊಡ್ಡಮಕ್ಕಳೇ ನೋಡಿಕೊಳ್ಳಬೇಕಲ್ಲವೆ? ಹಾಗಾಗಿ ಗಂಡುಮಕ್ಕಳಾಗಲಿ, ಹೆಣ್ಣುಮಕ್ಕಳಾಗಲಿ ತಮಗಿಂತ ಚಿಕ್ಕಮಕ್ಕಳನ್ನು ಅಥವಾ ಬೆನ್ನಿಗೆ ಹುಟ್ಟಿದವರನ್ನು ನೋಡಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹೀಗಿರುವಾಗ ಜವಾಬ್ದಾರಿ ಎನ್ನುವುದು ಎಳವೆಯಲ್ಲಿಯೇ ಅವರಿಗಂಟಿರುತ್ತದೆ. ನಿಮ್ಮ ಸುತ್ತಮುತ್ತಲೂ ಇಂಥ ಅನೇಕ ಕುಟುಂಬಗಳು ವಾಸಿಸುತ್ತಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಅವರ ಇಂಥ ಜೀವನಶೈಲಿ ಕಣ್ಣಿಗೆ ಬೀಳುತ್ತದೆ.

ಇದನ್ನೂ ಓದಿ : ಅಣ್ಣ ಕೊಟ್ಟ ಅಚ್ಚರಿ; ಸ್ಕೂಟಿ ನೋಡಿ ಹನಿಗಣ್ಣಾದ ತಂಗಿ

ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್ ಮಾಡುವುದರ ಹೊರತಾಗಿಯೂ ಇಂಥವರಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವುದು ಮಾನವೀಯತೆ. ಸಹಾಯ ಮಾಡಿದಲ್ಲಿ ಪರಸ್ಪರ ಬೆಳೆಯಬಹುದಲ್ಲವೆ? ಪರರ ಸಂತೋಷದಲ್ಲಿ ನಿಮ್ಮ ಸಂತೋಷವೂ ಇದೆಯಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:14 pm, Wed, 4 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್