ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್

Tiger Attack : ಸರ್ಕಸ್​ ಪ್ರದರ್ಶನದ ವೇಳೆ ತನ್ನ ತರಬೇತುದಾರನ ಮೇಲೆಯೇ ಹುಲಿ ದಾಳಿ ಮಾಡಿದೆ. ಮಕ್ಕಳೆಲ್ಲರೂ ಈ ಭಯಾನಕ ದೃಶ್ಯ ನೋಡಿ ಕಂಗಾಲಾಗಿದ್ಧಾರೆ. ನೆಟ್ಟಿಗರಂತೂ ಬೆಚ್ಚಿಬಿದ್ದಿದ್ಧಾರೆ.

ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್
ಇಟಲಿಯ ಸರ್ಕಸ್​ ತರಬೇತುದಾರ ಇವಾನ್​ ಓರ್ಫಿ
Follow us
| Updated By: ಶ್ರೀದೇವಿ ಕಳಸದ

Updated on: Jan 04, 2023 | 5:19 PM

Viral Video : ಪ್ರಾಣಿಗಳನ್ನು ಎಷ್ಟೇ ಪಳಗಿಸಿದರೂ ಅವು ತಮ್ಮ ಸ್ವಭಾವವನ್ನು ಬಿಟ್ಟುಕೊಡಲಾರವು. ಅದರಲ್ಲೂ ವನ್ಯಪ್ರಾಣಿಗಳ ವಿಷಯವಾಗಿ ಇದು ಅಕ್ಷರಶಃ ಸತ್ಯ. ಇದೀಗ ವೈರಲ್ ಆಗಿರುವ ವಿಡಿಯೋ ಇದಕ್ಕೆ ಉದಾಹರಣೆ. ಇಟಾಲಿಯನ್​ ಸರ್ಕಸ್​ ನ ಲೈವ್​ ಷೋನಲ್ಲಿ ಈ ದುರ್ಘಟನೆ ನಡೆದಿದೆ. ತರಬೇತುದಾರ ಇವಾನ್​ ಓರ್ಫೀ ಮೂರು ಹುಲಿಗಳೊಂದಿಗೆ ಪ್ರದರ್ಶನ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಹಿಂದಿನಿದ ಬಂದ ಒಂದು ಹುಲಿ ಅವನ ಕಾಲನ್ನು ಹಿಡಿದೆಳೆದಿದೆ.

ಇಟಲಿಯ ಲೆಸ್ಸೆ ಪ್ರಾಂತ್ಯದಲ್ಲಿ ಈ ಸರ್ಕಸ್ ಏರ್ಪಾಡಾಗಿತ್ತು. ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಅನೇಕ ಕಿರಿಯರು ಹಿರಿಯರಿಗೆಲ್ಲ ಈ ಭಯಾನಕ ಘಟನೆ ದುಃಸ್ವಪ್ನದಂತೆ ಭಾಸವಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಬೆಚ್ಚಿ ಬೀಳುತ್ತಿದ್ದಾರೆ.

ಇನ್ನೊಂದು ಹುಲಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದ 31 ವರ್ಷದ ತರಬೇತುದಾರ ಇವಾನ್​ನ ಹಿಂಬದಿಯಿಂದ ಬಂದ ಹುಲಿ ಸೆಕೆಂಡುಗಳ ಅಂತರದಲ್ಲಿ ಅವನ ಮೇಲೆ ಹಾರಿ ಕಾಲನ್ನು ಕಚ್ಚಿದೆ. ನಂತರ ಕುತ್ತಿಗೆಯನ್ನೂ ಕಚ್ಚಿದೆ. ಸಹಾಯಕರು ಪಂಜರದೊಳಗೆ ರಕ್ಷಣೆಗಾಗಿ ಧಾವಿಸುತ್ತಿದ್ದಂತೆ ಪ್ರೇಕ್ಷಕರ ಕಿರುಚಾಟ ಮುಗಿಲು ತಲುಪಿರುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು.

ಇದನ್ನೂ ಓದಿ : ‘ನಾಗರಾಜ’ನಿಗೆ ಮುತ್ತು ಕೊಟ್ಟ ಸುರೇಶ, ನೆಟ್ಟಿಗರೆಲ್ಲ ಗಡಗಡಗಡಗಡ

ಈತನಕ ಸುಮಾರು 17,000 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ಧಾರೆ. ಅಲ್ಲದೆ ಸರ್ಕಸ್​ ಕಂಪನಿಯ ಮಾಲೀಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ‘ತರಬೇತಿ ಕೌಶಲದಲ್ಲಿ ಪಳಗಿದ ಇವಾನ್​ ಅಚಾನಕ್​ ಆಗಿ ಹುಲಿಯ ದಾಳಿಗೆ ಒಳಗಾಗಿದ್ಧಾರೆ, ಆದರೆ ಅದೃಷ್ಟವಶಾತ್ ಅವರಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ’ ಎಂದು.

ಇದನ್ನೂ ಓದಿ : ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು

ಪ್ರಾಣಿಪ್ರೀತಿಯ ಬಗ್ಗೆ ಜನಸಾಮಾನ್ಯರಿಗೆ ತೋರಿಸಿಕೊಡುವ ಸರ್ಕಸ್​ ಮಂದಿಯ ಜೀವನ ತಂತಿ ಮೇಲಿನ ನಡಿಗೆಯಂತೆಯೇ. ಅವುಗಳನ್ನು ಎಷ್ಟೇ ಪಳಗಿಸಿದರೂ, ಅವುಗಳೊಂದಿಗೆ ಎಷ್ಟೇ ವಿಶ್ವಾಸದಿಂದ ನಡೆದುಕೊಂಡರೂ ಯಾವಾಗ ಏನಾಗುತ್ತದೆಂದು ಹೇಳಲಾಗದು. ಪ್ರಾಣಿಗಳನ್ನು ಪಳಗಿಸುವುದೂ ಒಂದು ಕಲೆ. ಇಂಥ ಸಾಹಸ ಕಲೆಯಲ್ಲಿ ತೊಡಗಿಕೊಳ್ಳುವವರು ಅದೆಷ್ಟು ಧೈರ್ಯದಿಂದ ಕೂಡಿರಬೇಕು!? ಯೋಚಿಸಿ.

ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಸರ್ಕಸ್​ ಪ್ರದರ್ಶನಗಳಲ್ಲಿ ಇವಾನ್​ ತೊಡಗಿಕೊಳ್ಳುತ್ತಾನೆ ಎಂದು ಇಟಾಲಿಯನ್ ಸರ್ಕಸ್ ಕಂಪೆನಿ ತಿಳಿಸಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ