ಕೋಪಗೊಂಡ ಹಿಪ್ಪೋಪೊಟೋಮಸ್ ಪ್ರವಾಸಿಗರ ಸ್ಪೀಡ್​ಬೋಟ್​ ಬೆನ್ನಟ್ಟಿದ ವಿಡಿಯೋ ವೈರಲ್

Viral Video : ದಿನಕ್ಕೆ 16 ತಾಸು ನೀರಿನಲ್ಲಿರುವ ಹಿಪ್ಪೋಗಳು​, ಸಿಂಹ, ಆನೆ, ಚಿರತೆ, ಕಾಡೆಮ್ಮೆ, ಘೇಂಡಾಮೃಗಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕೊಲ್ಲುತ್ತವೆ. ಆಫ್ರಿಕಾದಲ್ಲಿ ಪ್ರತೀ ವರ್ಷ ಸುಮಾರು 500 ಜನರು ಇವುಗಳಿಗೆ ಬಲಿಯಾಗುತ್ತಾರೆ.

ಕೋಪಗೊಂಡ ಹಿಪ್ಪೋಪೊಟೋಮಸ್ ಪ್ರವಾಸಿಗರ ಸ್ಪೀಡ್​ಬೋಟ್​ ಬೆನ್ನಟ್ಟಿದ ವಿಡಿಯೋ ವೈರಲ್
ಕೋಪಗೊಂಡ ಹಿಪ್ಪೋಪೊಟೋಮಸ್ ಸ್ಪೀಡ್​ಬೋಟ್ ಬೆನ್ನಟ್ಟಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 05, 2023 | 10:21 AM

Viral Video : ಈ ದೈತ್ಯಪ್ರಾಣಿಗಳು ತಮ್ಮ ಪಾಡಿಗೆ ತಾವಿರುತ್ತವೆ. ನಾವೇನಾದರೂ ಮಾಡಿದರೆ ಮಾತ್ರ ಅವು ಮರಳಿ ದಾಳಿ ಮಾಡುತ್ತವೆ ಎನ್ನಲಾಗದು.ಅದರಲ್ಲೂ ವನ್ಯಜೀವಿಗಳ ನಡಾವಳಿಯನ್ನು ಊಹಿಸುವುದು ಅಸಾಧ್ಯವೇ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಿಪ್ಪೋಪೊಟೋಮಸ್ ಭಯಂಕರ​ ಸಿಟ್ಟಿಗೆದ್ದಿದೆ. ಪ್ರವಾಸಿಗರು ತಮ್ಮ ಪಾಡಿಗೆ ತಾವು ಸ್ಪೀಡ್​ಬೋಟ್​ನಲ್ಲಿ ಹೋಗುತ್ತಿದ್ದರೆ, ಕೆಲವೇ ಮೀಟರುಗಳ ಅಂತರದಲ್ಲಿ ಕಾಣಿಸಿಕೊಂಡ ಇದು ಬೋಟನ್ನೇ ಕಬಳಿಸುವ ಹಾಗೆ ಮುನ್ನುಗ್ಗಿ ಬರುತ್ತಿದೆ. ಆ ಉಗ್ರತೆ, ಕೋಪ ಎಲ್ಲವೂ ಈ ದೈತ್ಯದೇಹಿಯ ಮುಖದಲ್ಲಿ ಹೇಗೆ ವ್ಯಕ್ತವಾಗಿದೆ ನೋಡಿ.

ಹತ್ತಿರ ಹೋಗಲೇಬೇಡಿ! ಸಿಂಹ, ಆನೆ, ಚಿರತೆ, ಕಾಡೆಮ್ಮೆ, ಘೇಂಡಾಮೃಗಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಈ ಹಿಪ್ಪೋಪೊಟೋಮಸ್​ಗಳು ಕೊಲ್ಲುತ್ತವೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಬೋಟ್​ ಅನ್ನು ಹೀಗೆ ಬೆನ್ನಟ್ಟಿ ಬರುತ್ತಿದ್ದರೆ ಯಾರಿಗೆ ತಾನೆ ಆತಂಕವಾಗಲಾರದು? ಸ್ವಲ್ಪೇ ಅಂತರದಲ್ಲಿ ಪ್ರವಾಸಿಗರು ಇದರಿಂದ ತಪ್ಪಿಸಿಕೊಂಡಿದ್ದಾರೆ. ಈ ಆತಂಕದ ಮಧ್ಯೆಯೇ ಈ ತುಣುಕನ್ನು ಹೇಗೆ ಸೆರೆಹಿಡಿದಿದ್ದಾರೆ ನೋಡಿ.

ಇದನ್ನೂ ಓದಿ : ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು

ಈತನಕ ಈ ವಿಡಿಯೋ ಅನ್ನು 1,24,000 ಜನರು ನೋಡಿದ್ದಾರೆ. ನೂರಾರು ಜನರು ಲೈಕ್ ಮತ್ತು ರೀಟ್ವೀಟ್ ಮಾಡಿದ್ದಾರೆ. ಹಿಪ್ಪೋಪೊಟೋಮಸ್​ ಅತ್ಯಂತ ಅಪಾಯಕಾರಿ, ಆಕ್ರಮಣಕಾರಿ ಜೀವಿ. ಪ್ರತೀ ವರ್ಷ ಆಫ್ರಿಕಾದಲ್ಲಿ ಏನಿಲ್ಲವೆಂದರೂ 500 ಜನರನ್ನಾದರೂ ಈ ಪ್ರಾಣಿಗಳು ಕೊಲ್ಲುತ್ತವೆ. ಇವುಗಳ ಹರಿತವಾದ ಹಲ್ಲುಗಳಿಗೆ ಒಮ್ಮೆ ಸಿಕ್ಕಿಕೊಂಡರೆ ಯಾರೂ ಬದುಕುಳಿಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ : ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್

ಇಂಥ ಹಿಪ್ಪೋಪೊಟೋಮಸ್​ಗಳು ಆಫ್ರಿಕಾದ ಸಬ್​ ಸಹಾರನ್​ಗಳಲ್ಲಿ ಹೆಚ್ಚು ವಾಸಿಸುತ್ತವೆ. ಈ ದೈತ್ಯದೇಹಿಗಳು ಉಭಯವಾಸಿಗಳಾದರೂ ಶೀತಲಪ್ರದೇಶಗಳಲ್ಲಿ ಹೆಚ್ಚು ವಾಸಿಸುತ್ತವೆ. ಹಾಗಾಗಿ ಆಳ ನೀರಿನಲ್ಲಿಯೇ ಇವು ಹೆಚ್ಚು ಇರಲು ಇಷ್ಟಪಡುತ್ತವೆ. ದಿನಕ್ಕೆ ಏನಿಲ್ಲವೆಂದರೂ 16 ತಾಸುಗಳ ಕಾಲವಾದರೂ ನೀರಿನಲ್ಲಿಯೇ ಇವು ವಾಸಿಸುತ್ತವೆ.

ಇದನ್ನೂ ನೋಡಿ : ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಎರಡು ಜೇನುಹುಳುಗಳ ವಿಡಿಯೋ ವೈರಲ್

ಸ್ಪೀಡ್​ ಬೋಟ್​, ಬೋಟ್​ ರೇಸಿಂಗ್ ಅಥವಾ ವಿಹಾರಕ್ಕೆ ಹೋಗುವಾಗ ಜಾಗರೂಕರಾಗಿರಿ. ಸಾಮಾನ್ಯವಾಗಿ ಸರೋವರ, ನದಿಗಳಲ್ಲಿ ಯಾವೆಲ್ಲ ಪ್ರಾಣಿಗಳು ವಾಸಿಸುತ್ತವೆ ಎಂಬ ಮಾಹಿತಿ ಇದ್ದೇ ಇರುತ್ತದೆ. ಏನೇ ಆಗಲಿ ಒಟ್ಟಿನಲ್ಲಿ ಎಚ್ಚರಿಕೆಯಲ್ಲಿ ವಿಹಾರವನ್ನು ಮಾಡಿ. ವನ್ಯಪ್ರಾಣಿಗಳನ್ನೆಂದೂ ಕೆಣಕಲು ಹೋಗಬೇಡಿ. ಇನ್ನು ಪ್ರಾಣಿಗಳು ಅನ್ಯಜೀವಿಗಳನ್ನು ಕಂಡಾಗ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೀಗೆ ದಾಳಿ ಮಾಡುವ ಅಪಾಯವಿರುತ್ತದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:16 am, Thu, 5 January 23

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ