ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಎರಡು ಜೇನುಹುಳುಗಳ ವಿಡಿಯೋ ವೈರಲ್
Fanta Bottle : ಮಕರಂದ ಬೇಸರವಾಗಿ ಫಾಂಟಾ ಬೇಕೆನ್ನಿಸಿತ್ತೇನೋ. ಮಿಲಿಯನ್ಗಟ್ಟಲೆ ಜನ ಇವುಗಳ ಅನ್ಯೋನ್ಯತೆ, ಸಾಂಘಿಕ ಶಕ್ತಿಯನ್ನು ಶ್ಲಾಘಿಸಿದರೆ, ಇವರಿಬ್ಬರೂ ಸಂಭಾವನೆ ಪಡೆದುಕೊಂಡ ನಟರು ಆಗಿರಲಾರರು ಎಂದು ಕೆಲವರು ತಮಾಷೆ ಮಾಡಿದ್ಧಾರೆ.
Viral Video : ಕೆಲವೊಮ್ಮೆ ಬಾಟಲಿಯ ಮುಚ್ಚಳ ತೆಗೆಯಲು ಎಷ್ಟೋ ಸಲ ನೀವು ತಿಣುಕಾಡಿರುತ್ತೀರಿ. ಇಷ್ಟೊಂದು ದೊಡ್ಡ ಕೈಗಳು ಬೆರಳುಗಳು ಇದ್ಧಾಗಲೂ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ಎರಡು ಜೇನುನೊಣಗಳು ಫಾಂಟಾ ಬಾಟಲಿಯ ಮುಚ್ಚಳವನ್ನು ತೆಗೆದಿವೆ! ಇದು ಸ್ವಲ್ಪ ವಿಚಿತ್ರವೂ ಮತ್ತು ನಂಬಲು ಅಸಾಧ್ಯವೂ ಆದ ವಿಷಯವಾಗಿದೆಯಲ್ಲ? ಆದರೆ ಇದು ಸತ್ಯ. ನೀವೇ ಈ ವಿಡಿಯೋ ನೋಡಿಬಿಡಿ.
2 honeybees, Apis mellifera, have learnt to generate the necessary torque to undo a bottle top pic.twitter.com/WEycuwEmzP
ಇದನ್ನೂ ಓದಿ— Science girl (@gunsnrosesgirl3) January 3, 2023
ಮನುಷ್ಯರನ್ನು ಹೊರತುಪಡಿಸಿಯೂ ಎಂಥ ಸೂಕ್ಷ್ಮಜೀವಿಗೂ ಅದರದೇ ಆದ ಶಕ್ತಿ ಇದೆ ಮತ್ತು ಬುದ್ಧಿವಂತಿಕೆಯೂ ಇದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಶಕ್ತಿ ಎಂದರೆ ಅದು ಕೇವಲ ದೈಹಿಕಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ. ಬುದ್ಧಿವಂತಿಕೆಯೂ ಅಲ್ಲಿ ಮೇಳೈಸಬೇಕಾಗುತ್ತದೆ. ಎರಡೂ ಶಕ್ತಿಗಳು ಪ್ರವಹಿಸಿದಾಗಲೇ ಬೇಕಾದ್ದನ್ನು ಸಾಧ್ಯವಾಗಿಸಿಕೊಳ್ಳಬಹುದು. ಈತನಕ ಈ ವಿಡಿಯೋ ಅನ್ನು 3.3 ಮಿಲಿಯನ್ ನೆಟ್ಟಿಗರು ನೋಡಿದ್ಧಾರೆ. 51,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ಸುಮಾರು 7,000 ಜನರು ರೀಟ್ವೀಟ್ ಮಾಡಿದ್ಧಾರೆ. ಸಾವಿರಾರು ಜನರು ಬೆರಗಿನಿಂದ ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ಡೆವಿಲ್ಸ್ ಪೂಲ್; ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್
ಅದು ಹೇಗೆ ಎರಡೂ ಅಷ್ಟು ಅನ್ಯೋನ್ಯವಾಗಿ ಆ ಮುಚ್ಚಳವನ್ನು ಒಂದೇ ಏಟಿಗೆ ಬೀಳಿಸುತ್ತವೆ! ಜೇನುನೊಣಗಳ ಸಾಂಘಿಕ ಶಕ್ತಿ ಬಹಳ ದೊಡ್ಡದು ಎನ್ನುತ್ತಿದ್ಧಾರೆ ಅನೇಕರು. ಅವರಿಬ್ಬರೂ ಸಂಭಾವನೆ ಪಡೆದುಕೊಂಡ ನಟರು ಆಗಿರಲಾರರು ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಜೇನುಹುಳುಗಳು ಶ್ರದ್ಧಾಳುಗಳು ಎಂದಿದ್ದಾರೆ ಹಲವರು.
ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು
ನನಗಿದು ಅಷ್ಟೇನು ಅದ್ಭುತ ಎನ್ನಿಸುತ್ತಿಲ್ಲ, ಏಕೆಂದರೆ ಒಂದು ಜೇನುಹುಳುವು 3 ಇಂಚಿನ ಮೊಳೆಯನ್ನು ಕಟ್ಟಿಗೆಯಿಂದ ಹೊರತೆಗೆದುದನ್ನು ಸ್ವತಃ ನೋಡಿದ್ದೇನೆ ಎಂದಿದ್ದಾರೆ ಮಗದೊಬ್ಬರು. ಟ್ಯಾಂಗೋ ಆಗಿದ್ದರೆ ಈ ಜೇನುಹುಳುಗಳು ಹೀಗೇ ಮುಚ್ಚಳ ತೆಗೆಯುತ್ತಿದ್ದವಾ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಅಂತೂ ಈ ವಿಡಿಯೋ ಮಿಲಿಯನ್ ಜನರ ಕುತೂಹಲಕ್ಕೆ ಕಾರಣವಾಗಿದ್ದಂತೂ ಹೌದು ಒಟ್ಟಾರೆಯಾಗಿ ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:09 pm, Wed, 4 January 23