ಕಲ್ಲುಬಂಡೆಯನ್ನು ಏರಿದ ದಿವ್ಯಾಂಗ; ಸ್ಪೂರ್ತಿಗೊಂಡ ನೆಟ್ಟಿಗರು

Specially Abled : ‘ನೀವು ನಿಮ್ಮ ಕನಸುಗಳ ಬೆನ್ನಟ್ಟುವುದನ್ನು ಯಾವುದರಿಂದಲೂ ತಡೆಯಲು ಸಾಧ್ಯವಿಲ್ಲ’ 9 ಸೆಕೆಂಡಿನ ಈ ವಿಡಿಯೋ ನೋಡಿದ ಯಾರೂ ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳದೇ ಇರಲಾರರು.

ಕಲ್ಲುಬಂಡೆಯನ್ನು ಏರಿದ ದಿವ್ಯಾಂಗ; ಸ್ಪೂರ್ತಿಗೊಂಡ ನೆಟ್ಟಿಗರು
ಕಾಲಿಲ್ಲವಾದರೇನು ಮನಸ್ಸಿನಿಂದ ಏರಬಲ್ಲೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 04, 2023 | 4:22 PM

Viral Video : ಮನಸೇ ಎಲ್ಲದರ ಮೂಲ ಎನ್ನುವುದು ಅಕ್ಷರಶಃ ಸತ್ಯ ಎನ್ನಿಸುತ್ತಿದೆ ಇಂಥ ವಿಡಿಯೋಗಳನ್ನು ನೋಡಿದಾಗೆಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ವ್ಯಕ್ತಿಗೆ ಎರಡೂ ಕಾಲುಗಳಿಲ್ಲ. ಆದರೆ, ಕೃತಕ ಜೋಡಣೆಗಳ ಸಹಾಯದಿಂದ ಕಡಿದಾದ ಕಲ್ಲುಬಂಡೆಯನ್ನು ಏರಲು ಪ್ರಯತ್ನಿಸಿದ್ದಾರೆ. ಮನೋಸ್ಥೈತ್ಯಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಏನಿದೆ ಎನ್ನುವುದನ್ನು ಮರೆತು ಏನಿಲ್ಲ ಎನ್ನುವುದರತ್ತಲೇ ನಾವು ಹೆಚ್ಚು ಆಲೋಚಿಸುತ್ತೇವೆ. ಈ ಒಣಚಿಂತೆಯೇ ನಮ್ಮನ್ನು ಅಗ್ನಿಯಂತೆ ಸುಡುತ್ತದೆ. ಕ್ರಮೇಣ ದೇಹದ ಮೇಲೆ ಪರಿಣಾಮ ಬೀರಿ ಮಾನಸಿಕವಾಗಿಯೂ ಕುಸಿಯುವಂತೆ ಮಾಡುತ್ತದೆ. ಆದರೆ ಇಲ್ಲಿರುವ ಈ ವಿಡಿಯೋ ನೋಡಿ, ಕೇವಲ 9 ಸೆಕೆಂಡಿನ ಈ ವಿಡಿಯೋ ಇದು. ‘ನೀವು ನಿಮ್ಮ ಕನಸುಗಳ ಬೆನ್ನಟ್ಟುವುದನ್ನು ಯಾವುದರಿಂದಲೂ ತಡೆಯಲು ಸಾಧ್ಯವಿಲ್ಲ’ ಎನ್ನುವ ಶೀರ್ಷಿಕೆ ಹೊಂದಿದ ಈ ವಿಡಿಯೋ ಏನು ಹೇಳಲು ಬಯಸುತ್ತಿದೆ ಎನ್ನುವುದು ಈಗಾಗಲೇ ನಿಮಗೆ ಅರ್ಥವಾಗಿರುತ್ತದೆ.

ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

ನಮ್ಮ ಕನಸು, ನಮ್ಮ ಇಚ್ಛಾಶಕ್ತಿಗೆ ಅನುಸಾರವಾಗಿ ನಮ್ಮ ಬದುಕು ಸಾಗುತ್ತದೆ. ದೇಹದ ಏರುಪೇರು ಒಂದುಕಡೆ. ಆದರೆ ಇಚ್ಛಾಶಕ್ತಿ ಪ್ರಬಲವಾಗಿದ್ಧಾಗ ಯಾರೂ ಯಾವುದೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅಂಥದೊಂದು ಶಕ್ತಿ ನಮ್ಮ ಮೈಮನಸ್ಸನ್ನು ಆವಾಹಿಸಿಕೊಂಡುಬಿಡುತ್ತದೆ.

ಇದನ್ನೂ ಓದಿ : ನೀ ಬೀಳೋದೇ ಇಲ್ಲ ತಂಗಿ; ಹೇಗಿದೆ ಈ ಅಣ್ಣನ ಕಾಳಜಿ

ವಿಡಿಯೋದಲ್ಲಿರುವ ವ್ಯಕ್ತಿಯನ್ನೇ ಗಮನಿಸಿ. ಚಲಿಸಲು ಬೇಕಾದಂಥ ಕಾಲುಗಳೇ ಇಲ್ಲ. ಆದರೂ ಅವರು ಇಂಥ ಸಾಹಸಕ್ಕೆ ಇಳಿದಿದ್ದಾರೆ. ಬಹುಶಃ ಕಾಲಿರುವ ನಾವೂ ಕೂಡ ಇಂಥ ಸಾಹಸಕ್ಕೆ ಇಳಿಯಲಾರೆವೇನೋ. ಈತನಕ ಈ ವಿಡಿಯೋ ಅನ್ನು ಸುಮಾರು 32,000 ಜನರು ನೋಡಿದ್ಧಾರೆ.  ಸಾವಿರಾರು ಜನರು ಇಷ್ಟಪಟ್ಟಿದ್ದಾರೆ. ನೂರಾರು ಈ ದಿವ್ಯಾಂಗ ವ್ಯಕ್ತಿಗೆ ಹಾರೈಸಿ ಶ್ಲಾಘಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ