ಆನೆಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೆ? ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ ಕೇಳುತ್ತಿದ್ದಾರೆ, ನೆಟ್ಟಿಗರ ಉತ್ತರವೇನು?
Viral Video : ಸ್ಮಾರ್ಟ್ ಜನರು ಹೀಗೇ ಜಾರಿಕೊಳ್ಳುವುದು ಮೇಡಮ್ ಎಂದು ಒಬ್ಬರು. ಈ ವಿಡಿಯೋ ನೋಡಿದ ಮೇಲೆ ಆನೆಗಳಿಗೆ ಹಾಸ್ಯಪ್ರಜ್ಞೆ ಇಲ್ಲವೆಂದು ಯಾವತ್ತೂ ಹೇಳುವುದಿಲ್ಲ ಬಿಡಿ ಮೇಡಮ್ ಎಂದು ಇನ್ನೊಬ್ಬರು. ನೀವೇನಂತೀರಿ?
Viral Video : ಮಣ್ಣಾಟದಲ್ಲಿ ಈ ಆನೆಗಳ ಹಿಂಡು ಮುಳುಗಿದೆ. ಈ ವಿಡಿಯೋ ಟ್ವೀಟ್ ಮಾಡಿದ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ, ‘ಯಾರು ಹೇಳಿದ್ದು ಆನೆಗಳಿಗೆ ಹಾಸ್ಯ ಪ್ರಜ್ಞೆ ಇಲ್ಲವೆಂದು?’ ಹೀಗಂತ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಮರಿಯಾನೆಯೊಂದು ಈ ಚಿಕ್ಕ ಮಣ್ಣಿನ ದಿಬ್ಬವನ್ನು ಇಳಿಯಲು ನೌಟಂಕಿ ಮಾಡಿದೆ ಎನ್ನುವುದು ಸುಪ್ರಿಯಾ ಅವರ ಗ್ರಹಿಕೆ. ಅನೇಕರು ಹೌದೆಂದಿದ್ದಾರೆ ಇನ್ನೂ ಹಲವರು ಇದನ್ನು ಒಪ್ಪಿಲ್ಲ. ಒಟ್ಟಾರೆಯಾಗಿ ಈ ವಿಡಿಯೋ ಸಾಕಷ್ಟು ಜನರನ್ನು ನಗೆಗಡಲಿಗಂತೂ ದೂಡಿದೆ.
— Supriya Sahu IAS (@supriyasahuias) January 3, 2023
ಈ ವಿಡಿಯೋ ಅನ್ನು ಈತನಕ ಸುಮಾರು 65,000 ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ತಮಾಷೆಯಾಗಿದೆ. ಆನೆಗಳು ಹೀಗೆಲ್ಲ ತಮಾಷೆ ಮಾಡುತ್ತವೆ ಎಂದಿದ್ದಾರೆ ಹಲವರು. ಇದನ್ನು ನೋಡಿ ಬಹಳ ಖುಷಿಯಾಯಿತು. ಆದರೆ ಇದು ತಮಾಷೆಗಾಗಿ ಹೀಗೆಲ್ಲ ಮಾಡುತ್ತಿಲ್ಲ ಎಂದಿದ್ಧಾರೆ ಅನೇಕರು.
ಇದನ್ನೂ ಓದಿ : ಓರಿಯನ್ ಮಾಲ್ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ
ದೇವರು ಎಲ್ಲ ಜೀವಿಗಳಿಗೂ ಎಲ್ಲಾ ರೀತಿಯ ಪ್ರಜ್ಞೆಯನ್ನು ದಯಪಾಲಿಸಿರುತ್ತಾನೆ ಎಂದಿದ್ದಾರೆ ಒಬ್ಬರು. ಇದು ಆನೆಮರಿ, ನಾಲ್ಕು ಕಾಲಿನ ಪ್ರಾಣಿಗಳಿಗೆ ಇಳಿಜಾರನ್ನು ಇಳಿಯುವುದು ತುಸು ಕಷ್ಟವೇ. ಇಳಿಯಲು ಹೋಗಿ ಉತುಳಿದೆ, ಇದರಲ್ಲಿ ಹಾಸ್ಯಪ್ರಜ್ಞೆ ಏನು ಬಂತು ಎಂದು ಕೇಳಿದ್ದಾರೆ ಕೆಲವರು. ಈ ವಿಡಿಯೋ ನೋಡಿದ ಮೇಲೆ ಆನೆಗಳಿಗೆ ಹಾಸ್ಯಪ್ರಜ್ಞೆ ಇಲ್ಲವೆಂದು ಇನ್ನು ಯಾವತ್ತೂ ಹೇಳುವುದಿಲ್ಲ ಮೇಡಮ್ ಎಂದು ನಗುವ ಎಮೋಟಿಕಾನ್ ಹಾಕಿದ್ದಾರೆ ಮತ್ತೂ ಒಬ್ಬರು.
ಇದನ್ನೂ ನೋಡಿ : ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ
ಎರಡನೇ ಆನೆಯು ತನ್ನ ಶಕ್ತಿಯನ್ನು ಉಳಿಸಿಕೊಳ್ಳುವ ತಂತ್ರವನ್ನು ಹೂಡಿದೆ ಎಂದಿದ್ದಾರೆ ಒಬ್ಬರು. ಸ್ಮಾರ್ಟ್ ಜನರು ಹೀಗೇ ಜಾರಿಕೊಳ್ಳುವುದು! ಎಂದಿದ್ದಾರೆ ಮತ್ತೊಬ್ಬರು. ಪ್ರತಿಯೊಂದು ಜೀವಿಗೂ ಚಲಿಸಲು ಅದರದೇ ಆದ ತಂತ್ರಗಳಿರುತ್ತವೆ ಎಂದಿದ್ದಾರೆ ಮಗದೊಬ್ಬರು. ಆನೆಗಳು ಅತ್ಯಂತ ಬುದ್ಧಿಶಾಲಿಗಳಿ ಎಂದು ಅನೇಕರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:01 pm, Wed, 4 January 23