ನೀವೇ ಕೇಕ್​ ಕಟ್​ ಮಾಡಿ; ಝೊಮ್ಯಾಟೋ ಡೆಲಿವರಿ ಏಜೆಂಟ್​ರನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಆಹ್ವಾನಿಸಿದ ವಿಡಿಯೋ ವೈರಲ್

New Year Celebration : ಹೀಗೆ ಸಂತೋಷವನ್ನು ಹಂಚುತ್ತಲೇ ಇರಿ, ಎಂದಾದರೊಂದು ದಿನ ಇದು ಯಾವುದಾದರೊಂದು ರೂಪದಲ್ಲಿ ನಿಮಗೆ ಮರಳುತ್ತದೆ ಎಂದು ನೆಟ್ಟಿಗರು ಬೆಂಗಳೂರಿನ ಯುವಕರನ್ನು ಹಾರೈಸುತ್ತಿದ್ದಾರೆ.

ನೀವೇ ಕೇಕ್​ ಕಟ್​ ಮಾಡಿ; ಝೊಮ್ಯಾಟೋ ಡೆಲಿವರಿ ಏಜೆಂಟ್​ರನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಆಹ್ವಾನಿಸಿದ ವಿಡಿಯೋ ವೈರಲ್
ಡೆಲಿವರಿಗೆ ಬಂದ ಝೊಮ್ಯಾಟೋ ಡೆಲಿವರಿ ಏಜೆಂಟ್​ ಕೇಕ್​ ಕಟ್ ಮಾಡುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 04, 2023 | 11:19 AM

Viral Video : ಹೀಗೊಂದು ಅನಿರೀಕ್ಷಿತ ಸಂತೋಷ ನೆಟ್ಟಿಗರ ಮನಸ್ಸನ್ನು ಸೂರೆಗೊಳ್ಳುತ್ತಿದೆ. ಫುಡ್ ಡೆಲಿವರಿ ಮಾಡಲು ಬಂದ ಝೊಮ್ಯಾಟೋ ಡೆಲಿವರಿ ಏಜೆಂಟ್​ರನ್ನು ಟೆರೇಸಿಗೆ ಆಹ್ವಾನಿಸಿ ಅವರಿಂದಲೇ ಕೇಕ್​ ಮಾಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ ಬೆಂಗಳೂರಿನ ಈ ಯುವಕರು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಕಿಶನ್​ ಶ್ರೀವತ್ಸ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ‘ನಾವು ಡಿಸೆಂಬರ್ 31ರ ರಾತ್ರಿ 11ಕ್ಕೆ ಫುಡ್​ ಆರ್ಡರ್ ಮಾಡಿದೆವು. ಆರ್ಡರ್ ತಲುಪಿದಾಗ ಸರಿಯಾಗಿ 12 ಗಂಟೆ. ಹಾಗಾಗಿ ಡೆಲಿವರಿ ಏಜೆಂಟ್​ ಅವರಿಗೆ ಕೇಕ್ ಕಟ್ ಮಾಡಲು ಹೇಳಿ ಅವರೊಂದಿಗೆ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದೆವು’ ಎಂದು ನೋಟ್​ ಬರೆದಿದ್ದಾರೆ ಕಿಶನ್.

ಇದನ್ನೂ ಓದಿ : ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು

ಗ್ರಾಹಕರು ಕೇಕ್​ ಕಟ್ ಮಾಡಲು ಹೇಳಿದಾಗ ಡೆಲಿವರಿ ಏಜೆಂಟ್​ ಸಂಕೋಚ ಪಡುತ್ತಾರೆ. ಆದರೆ ಯುವಕರು ಅವರನ್ನು ಒತ್ತಾಯಿಸಿ ಕೇಕ್​ ಕಟ್ ಮಾಡಿಸುತ್ತಾರೆ. ಜೊತೆಗೆ ಪರಸ್ಪರ ಕೇಕ್ ಕೂಡ ತಿನ್ನಿಸುತ್ತಾರೆ. ಈ ವಿಡಿಯೋ ಅನ್ನು ಜನವರಿ 1 ರಂದು ಪೋಸ್ಟ್ ಮಾಡಲಾಗಿದೆ. ಈತನಕ 32,000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

ಆಶ್ಚರ್ಯಕರ! ಈ ನಡೆಯು ಅತ್ಯುತ್ತಮವಾಗಿದೆ. ಹೀಗೆ ಸಂತೋಷವನ್ನು ಹಂಚುತ್ತಲೇ ಇರಿ. ಇದು ಎಂದಾದರೂ ಯಾವುದಾದರೂ ರೂಪದಲ್ಲಿ ಮರಳುತ್ತದೆ ಎಂದು ಒಬ್ಬರು ಹೇಳಿದ್ದಾರೆ. ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಾಯಿತು, ಹೀಗೆಯೇ ಮುಂದುವರಿಯಿರಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ