ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು

Ukraine War : ಈ ಜೋಗುಳದ ಸಾಹಿತ್ಯದೆಡೆ ಲಕ್ಷ್ಯ ಕೊಡದೆ ಹಲವಾರು ಬಾರಿ ಕೇಳಿದೆ. ಇದು ಪ್ರೀತಿಯಿಂದ ಎರಕ ಹೊಯ್ದಿದೆ. ಖಂಡಿತ ಈ ಧ್ವನಿ, ದೃಶ್ಯ ಕದಡಿದ ನೀರನ್ನು ತಿಳಿಗೊಳಿಸುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಿದ್ದಾರೆ ಅನೇಕ ನೆಟ್ಟಿಗರು.

ಹಸುಗೂಸಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್​ ಸೈನಿಕನ ವಿಡಿಯೋ ವೈರಲ್; ಭಾವುಕರಾದ ನೆಟ್ಟಿಗರು
ತನ್ನ ಮಗುವಿಗೆ ಲಾಲಿ ಹಾಡುತ್ತಿರುವ ಉಕ್ರೇನಿಯನ್ ಯೋಧ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 03, 2023 | 6:22 PM

Viral Video : ಕಳೆದ ವರ್ಷವು ರಷ್ಯಾ-ಉಕ್ರೇನ್​ ಯುದ್ಧದ ಕರಾಳ ನೆನಪಲ್ಲೇ ಕಳೆದು ಹೋಯಿತು. ಹೊಸ ವರ್ಷದ ಆರಂಭದಲ್ಲಿ ಈ ವಿಡಿಯೋ ಆಶಾಭಾವನೆಯನ್ನು ತರಲಿ ಎಂಬ ಆಶಯದಿಂದ ಉಕ್ರೇನಿನ ಆಂತರಿಕ ವ್ಯವಹಾರಗಳ ಸಚಿವರಿಗೆ ಸಲಹೆಗಾರರಾಗಿರುವ ಆ್ಯಂಟನ್​ ಗೆರಾಶ್ಚೆಂಕೋ ಈ ಮುದ್ದಾದ ವಿಡಿಯೋ ಟ್ವೀಟ್ ಮಾಡಿದ್ದಾರೆ. ಉಕ್ರೇನಿನ ಯೋಧ ತನ್ನ ಎಳೆಗೂಸನ್ನು ಗಿಟಾರಿನ ಮೇಲೆ ಮಲಗಿಸಿಕೊಂಡು ಜೋಗುಳ ಹಾಡುತ್ತಿರುವ ವಿಡಿಯೋ ಇದಾಗಿದೆ. ಈ ಯೋಧ ಹಾಡಿರುವ ಜೋಗುಳವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ ಆ್ಯಂಟನ್.

ರಷ್ಯಾದ ದಾಳಿ ನಡೆದು ಇಷ್ಟು ತಿಂಗಳಾದರೂ ಉಕ್ರೇನ್ ಇನ್ನೂ ಕತ್ತಲೆಯಲ್ಲಿಯೇ ಇದೆ ಎಂಬ ಬೇಸರ ಜಗತ್ತಿನ ಅನೇಕರನ್ನು ನೋಯಿಸುತ್ತಿದೆ. ಹಾಗಾಗಿ ಅಲ್ಲಿ ಬೆಳಕು ಸೂಸಲೆಂದು ಅನೇಕ ಬಗೆಯ ಪ್ರಯತ್ನಗಳನ್ನು ಕೆಲವರಾದರೂ ನಡೆಸುತ್ತಿದ್ಧಾರೆ ಎನ್ನುವುದೇ ಈ ಹೊತ್ತಿನ ಭರವಸೆ. ​ಇಂಥ ವಿಡಿಯೋಗಳು ಹಲವಾರು ಜನರ ಮನದಲ್ಲಿ ಮೂಡಿರುವ ಭಯವನ್ನು ಹೊಡೆದೋಡಿಸಲಿ, ಮತ್ತೆ ಹೊಸ ಕಾಲ ಅರಳಲಿ ಎಂದು ಅನೇಕ ನೆಟ್ಟಿಗರು  ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ನಾನಂತೂ ಕೂಸು, ಎಲ್ಲಾ ಈ ಬಿಯರ್ ಕ್ಯಾನಿನದೇ ತಪ್ಪು!

ಈ ವಿಡಿಯೋದಲ್ಲಿರುವ ಯೋಧನ ಹೆಸರು ಒಲೆಗ್ ಬೆರೆಸ್ಟೋವಿ. ಗಿಟಾರಿನ ಮೇಲೆ ಹಸುಗೂಸನ್ನು ಮಲಗಿಸಿಕೊಂಡು ಹಾಡುತ್ತಿರುವ ಈ ವಿಡಿಯೋ ಎಂಥವರ ಮನಸ್ಸನ್ನೂ ಅಲ್ಲಾಡಿಸುವಂತಿದೆ. ಸಂಗೀತಕ್ಕೆ ಮನಸೋಲದವರು ಯಾರಿದ್ಧಾರೆ? ಮಗು ಶಾಂತವಾಗಿ ನಿದ್ರಿಸುತ್ತಿದೆ. ಈ ಕ್ಲಿಪ್​ನ ಪೂರ್ತಿ ವಿಡಿಯೋ ಇಲ್ಲಿದೆ ಕೇಳಿ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಈತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. ಹೀಗೆ ಸಂಗೀತವನ್ನು ಕೇಳುತ್ತ ಬೆಳೆಯುತ್ತಿರುವ ಮಗು ಖಂಡಿತ ಸ್ವತಂತ್ರ್ಯ ವ್ಯಕ್ತಿತ್ವನ್ನು ಹೊಂದುತ್ತದೆ ಎಂದು ಹೇಳಿದ್ಧಾರೆ ಅನೇಕರು. ಈ ಭಾಷೆ ಮತ್ತು ಅದರ ಅರ್ಥದ ಕಡೆ ಗಮನ ಕೊಡದೆ ಹಲವಾರು ಬಾರಿ ಈ ವಿಡಿಯೋ ನೋಡಿದೆ, ಜೋಗುಳವನ್ನೂ ಕೇಳಿದೆ. ಪ್ರೀತಿಯಿಂದ ಎರಕ ಹೊಯ್ದಿದೆ. ಖಂಡಿತ ಈ ಧ್ವನಿಯು, ದೃಶ್ಯವು ಕದಡಿದ ನೀರನ್ನು ತಿಳಿಗೊಳಿಸುತ್ತದೆ ಎಂದಿದ್ದಾರೆ ಒಬ್ಬರು. ಅನೇಕರು ಈ ಕುರಿತು ಇದೇ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:25 pm, Tue, 3 January 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ