ಬೇಕೇ ಮ್ಯಾಜಿಕ್ ಪ್ಯಾಂಟ್? ಕಳ್ಳತನದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆನ್ನುವವರಿಗೆ ಮಾತ್ರ!

Viral Video : ಎಟಿಎಂ ನಿಂದ ಈ ವ್ಯಕ್ತಿ ಹಣ ತೆಗೆಯುತ್ತಾನೆ. ನಂತರ ಅದನ್ನು ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ. ಆನಂತರ ಜೇಬಿನೊಳಗೆ ಕೈಹಾಕಿದರೆ ಜೇಬು ಖಾಲಿ! ಅದು ಹೇಗೆ? ನೋಡಿ ವಿಡಿಯೋ.

ಬೇಕೇ ಮ್ಯಾಜಿಕ್ ಪ್ಯಾಂಟ್? ಕಳ್ಳತನದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆನ್ನುವವರಿಗೆ ಮಾತ್ರ!
ಪ್ಯಾಂಟ್​ ಜೇಬಿನಲ್ಲಿಯೇ ಹಣ ಇಟ್ಟುಕೊಂಡ ಆದರೆ...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 05, 2023 | 11:22 AM

Viral Video : ಹೈಟೆಕ್​ ಜಗತ್ತಿನಲ್ಲಿ ಎಲ್ಲವೂ ನವನವೀನ ತಂತ್ರಗಳನ್ನು ಹೊಂದಿದೆ. ಕಳ್ಳತನವಂತೂ ಕೇಳಲೇಬೇಡಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಒಬ್ಬ ವ್ಯಕ್ತಿ ಎಟಿಎಂನಿಂದ ಹಣವನ್ನು ಡ್ರಾ ಮಾಡುತ್ತಾನೆ. ಇನ್ನೊಬ್ಬ ವ್ಯಕ್ತಿ ಅವನ ಹಿಂಭಾಗದಲ್ಲಿ ಪ್ಯಾಂಟ್​ ಹಿಡಿಯುತ್ತಾನೆ. ಡ್ರಾ ಮಾಡಿದ ವ್ಯಕ್ತಿ ತನ್ನದೇ ಪ್ಯಾಂಟಿನ ಜೇಬು ಎಂದು ಹಣವನ್ನು ಅದರಲ್ಲಿ ಹಾಕುತ್ತಾನೆ. ಪ್ಯಾಂಟು ಮತ್ತು ಹಣದೊಂದಿಗೆ ಇನ್ನೊಬ್ಬ ವ್ಯಕ್ತಿ ಪರಾರಿಯಾಗುತ್ತಾನೆ.

ಪ್ರತೀ ದಿನವೂ ಕಳ್ಳತನಕ್ಕೆ ಸಂಬಂಧಿಸಿದ ಸಾಕಷ್ಟು ಸುದ್ದಿಗಳನ್ನು ಓದುತ್ತಿರುತ್ತೇವೆ. ಈಗಲಂತೂ ಮೊಬೈಲ್​ ಜಮಾನಾ. ಎಲ್ಲವನ್ನೂ ದಾಖಲಿಸಬಹುದು. ಈ ದಾಖಲೆಗೆ ಅವಕಾಶ ಇದ್ದಿದ್ದರಿಂದ ಕಳ್ಳರು ಹೇಗೆಲ್ಲ ತಲೆ ಓಡಿಸುತ್ತಾರೆ ಎನ್ನಲು ಸಾಕ್ಷ್ಯಾಧಾರಗಳು ಸಿಗುತ್ತಿವೆ. ಇದೀಗ ವೈರಲ್ ಆಗಿರುವ ವಿಡಿಯೋ ತಮಾಷೆಗೇ ಮಾಡಿದ್ದರೂ ಕೂಡ ಇದರಲ್ಲಿ ಗಮನಿಸಬೇಕಾದದ್ದು ಬುದ್ಧಿವಂತಿಕೆ.

ಇದನ್ನೂ ಓದಿ : ರೂ. 7 ಲಕ್ಷ ಮೌಲ್ಯದ ನೆಕ್ಲೇಸ್​ ಕದ್ದ ಮಹಿಳೆಯ ವಿಡಿಯೋ ವೈರಲ್​

ಏಕೆಂದರೆ 64 ಕಲೆಗಳಲ್ಲಿ ಚೋರವಿದ್ಯೆಯೂ ಒಂದು ಕಲೆ, ವೃತ್ತಿ. ಇದಕ್ಕೆ ಅಪಾರ ಸಮಯ ಪ್ರಜ್ಞೆ, ತಂತ್ರಗಾರಿಕೆ, ಬುದ್ಧಿವಂತಿಕೆ ಬೇಕಾಗುತ್ತದೆ. ಮಾಡುವ ಕೆಲಸದೆಡೆ ಮಾತ್ರ ಗಮನವಿರಬೇಕು. ಕ್ಷಣಾರ್ಧದಲ್ಲಿ ಅಂದುಕೊಂಡ ಗುರಿಸಾಧನೆಯಾಗಬೇಕು. ಸಾರ್ವಜನಿಕ ಸ್ಥಳಗಳೇ ಈ ವೃತ್ತಿಯ ಮೈದಾನವಾಗಿದ್ದಾಗ ಜನರಿಂದ ತಪ್ಪಿಸಿಕೊಂಡು ಓಡುವ ಜಾಣ್ಮೆಯೂ ಬೇಕಾಗುತ್ತದೆ. ಇಲ್ಲವಾದಲ್ಲಿ ಧರ್ಮದೇಟು ಮತ್ತು ಜೈಲೂಟ ಗ್ಯಾರಂಟಿ. ಏನೇ ಆಗಲಿ ತಪ್ಪಿಸಿಕೊಳ್ಳುವವರು ಎಷ್ಟು ದಿನವಂತ ತಪ್ಪಿಸಿಕೊಳ್ಳುತ್ತಾರೆ?

ಇದನ್ನೂ ಓದಿ : ನೀವೇ ಕೇಕ್​ ಕಟ್​ ಮಾಡಿ; ಝೊಮ್ಯಾಟೋ ಡೆಲಿವರಿ ಏಜೆಂಟ್​ರನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಆಹ್ವಾನಿಸಿದ ವಿಡಿಯೋ ವೈರಲ್

ಇಷ್ಟೆಲ್ಲದರ ಮಧ್ಯೆಯೂ ಪ್ರಸ್ತುತ ದಿನಮಾನಗಳಲ್ಲಿ ಚೋರವಿದ್ಯೆಯೂ ಹೈಟೆಕ್​ ಸ್ಪರ್ಶದಿಂದ ಅನೇಕ ಮಜಲುಗಳನ್ನು ಕಂಡಿದೆ. ದಿನವೂ ಹೆಚ್ಚುತ್ತಿರುವ ಸೈಬರ್ ಅಪರಾಧಗಳೇ ಇದಕ್ಕೆ ಸಾಕ್ಷಿ. ಇನ್ನು ರೀಲ್ಸ್​ಗಾಗಿ ತಲೆ ಓಡಿಸುವ ಜನರ ಸೃಜನಶೀಲತೆಯ ಬಗ್ಗೆ ಅಂತೂ ಮಾತನಾಡುವುದೇ ಬೇಡ! ಮೆದುಳಿನೊಳಗೆ ಕೈಹಾಕಿದರೂ ಅವರ ಐಡಿಯಾಗಳು ನಿಮ್ಮ ಕೈಗೆ ಎಟುಕಲಾರವು. ಈ ವಿಡಿಯೋ ನೋಡಿದ ನಿಮಗೆ ತಲೆಯಲ್ಲಿ ಈಗ ಏನು ಓಡುತ್ತಿದೆ?

ಇದೆಲ್ಲ ನಮ್ಮ ತಲೆಗೆಟಕುವ ವಿದ್ಯೆ ಅಲ್ಲಬಿಡಿ ಎನ್ನುತ್ತಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:18 am, Thu, 5 January 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್