ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್
Guinness World Record : ಇವರ ದಂತವೈದ್ಯರು ಯಾರೆಂದು ಪತ್ತೆ ಹಚ್ಚಬೇಕು. ಇಷ್ಟೊಂದು ಶಕ್ತಿ ಎಲ್ಲಿಂದ ಪ್ರವಹಿಸುತ್ತದೆ. ನನ್ನ ಕೈಯಲ್ಲಿ ಕೂಡ ಇಷ್ಟೊಂದು ಶಕ್ತಿ ಇಲ್ಲ. ಇನ್ನು ಇವರ ಹಲ್ಲಿನಲ್ಲಿ! ನೆಟ್ಟಿಗರು ಕುತೂಹಲಿಗಳಾಗಿದ್ದಾರೆ.
Viral Video : ಪ್ರತೀ ವ್ಯಕ್ತಿಯಲ್ಲಿಯೂ ಒಂದೊಂದು ರೀತಿಯ ಶಕ್ತಿ, ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಒಂದೆಡೆಯಾದರೆ ಅದನ್ನು ಸ್ವಪ್ರಯತ್ನದಿಂದ ಪೋಷಿಸಿಕೊಂಡು ಹೋಗುವುದು ಇನ್ನೊಂದೆಡೆ. ಎರಡೂ ಮೇಳೈಸಿದಾಗಲೇ ಸಾಧನೆ ಮಾಡಲು ಸಾಧ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈಜಿಪ್ಟ್ನಲ್ಲಿ ಅಶ್ರಫ್ ಮಹ್ರೂಸ್ ಮೊಹಮ್ಮದ್ ಸುಲೈಮಾನ್ ಎಂಬುವವರು (Ashraf Mahrous Mohamed Suliman) 15,730 ಕಿ. ಗ್ರಾಂ ತೂಕದ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್ ವಿಶ್ವ ದಾಖಲೆ ಮಾಡಿದ್ದಾರೆ. ಇವರ ಈ ಅಗಾಧ ದೈಹಿಕ ಸಾಮರ್ಥ್ಯಕ್ಕೆ ನೆಟ್ಟಿಗರು ಬೆರಗಾಗುತ್ತಿದ್ದಾರೆ.
ಇದನ್ನೂ ಓದಿView this post on Instagram
2021ರ ಜೂನ್ನಲ್ಲಿ ಈಜಿಪ್ಟ್ನ ಇಸ್ಮಾಯಿಲಿಯಾ ಇವರ ಈ ಸಾಧನೆಗೆ ಸಾಕ್ಷಿಯಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ವರ್ಲ್ಡ್ ಗಿನ್ನೀಸ್ ರೆಕಾರ್ಡ್ನ ಇನ್ಸ್ಟಾಗ್ರಾಂನ ಪುಟದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಅನ್ನು ಸುಮಾರು 4 ಲಕ್ಷ ಜನರು ನೋಡಿದ್ದಾರೆ. ಸುಮಾರು 24,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ನನ್ನಮ್ಮನೇ ಬೇಕು ನಂಗೆ; ಅವರು ಎತ್ತಿಕೊಳ್ಳಲು ಹೋದರಿದಕೆ ಅಳುವು ಬರುವುದು
ಇವರ ದಂತವೈದ್ಯರು ಯಾರು ಎಂಬುದನ್ನು ನಾನು ಪತ್ತೆ ಹಚ್ಚಬೇಕಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಇಷ್ಟೊಂದು ಶಕ್ತಿಯನ್ನು ಇವ ಎಲ್ಲಿಂದ ತರುತ್ತಾನೆ, ಅಬ್ಬಾ! ಎಂದಿದ್ದಾರೆ ಮತ್ತೊಬ್ಬರು. ಈ ಅಣ್ಣನ ಹಲ್ಲುಗಳು, ಸ್ನಾಯುಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಎಂದು ಮಗದೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನ್ನ ಕೈಗಳಿಗಿಂತ ಇವನ ಹಲ್ಲುಗಳು ಬಲಶಾಲಿಯಾಗಿವೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಅಯ್ಯೋ ನನ್ನ ಕೈಗಳಲ್ಲಂತೂ ಇಷ್ಟು ಶಕ್ತಿ ಇಲ್ಲ. ಇನ್ನು ಹಲ್ಲುಗಳಲ್ಲಿ ಎಲ್ಲಿಂದ ಬರಬೇಕು ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ಧಾರೆ.
ನಿಮಗೇನಾದರೂ ಗೊತ್ತಾ ಇಂಥ ವ್ಯಕ್ತಿಗಳಿಗೆ ಈ ಅಗಾಧ ಶಕ್ತಿ ಎಲ್ಲಿಂದ ಪ್ರವಹಿಸುತ್ತದೆ ಎಂದು?
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 2:03 pm, Thu, 5 January 23