AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ಕಲಾವಿದರನ್ನು ಅವಮಾನಿಸಿದ್ದಕ್ಕಾಗಿ ದೆಹಲಿ ಪೊಲೀಸರ ಬಗ್ಗೆ ಅಸಮಾಧಾನಗೊಂಡ ನೆಟ್ಟಿಗರು

Busker : ‘ಹೇಳುತ್ತಿರುವುದು ಕೇಳುತ್ತಿಲ್ಲವಾ, ಎದ್ಧೇಳು ಮೇಲೆ!’ ಬೀದಿ ಪ್ರದರ್ಶನ ಕಲಾವಿದರು ಗಿಟಾರ್ ನುಡಿಸುತ್ತ ಹಾಡುತ್ತಿರುವಾಗ, ಪೊಲೀಸರು ಕಲಾವಿದರ ಕೈ ಹಿಡಿದು ಹೀಗೆ ಹೇಳಿದ ವಿಡಿಯೋ ವೈರಲ್ ಆಗಿದೆ.

ಬೀದಿ ಕಲಾವಿದರನ್ನು ಅವಮಾನಿಸಿದ್ದಕ್ಕಾಗಿ ದೆಹಲಿ ಪೊಲೀಸರ ಬಗ್ಗೆ ಅಸಮಾಧಾನಗೊಂಡ ನೆಟ್ಟಿಗರು
ಕಲಾವಿದ ಅಂಶುಲ್​ ಗಿಟಾರ್​ ನುಡಿಸುತ್ತಿರುವಾಗ ಕೈ ಹಿಡಿದು ನಿಲ್ಲಿಸಿದ ದೆಹಲಿ ಪೊಲೀಸ್
TV9 Web
| Edited By: |

Updated on:Jan 05, 2023 | 5:54 PM

Share

Viral Video : ಕಲಾವಿದರು ಎಲ್ಲೇ ಇರಲಿ ಎಲ್ಲಿಯೇ ಪ್ರದರ್ಶನ ನೀಡಲಿ ಅವರು ಕಲಾವಿದರೇ. ಅವರ ಕಲೆಯನ್ನು ಗೌರವಿಸಬೇಕು. ಜನಸಾಮಾನ್ಯರಿಗೆ ಸಂಗೀತ ತಲುಪಲಿ ಎಂದು ಅನೇಕ ಕಲಾವಿದರು ಬೀದಿಬದಿ ಪ್ರದರ್ಶನ ನೀಡುತ್ತಾರೆ. ಅಂಥವರನ್ನು ತುಸು ಹೆಚ್ಚೇ ಗೌರವದಿಂದ ಕಾಣಬೇಕು. ಏಕೆಂದರೆ ಕಲೆಯನ್ನೇ ನೆಚ್ಚಿಕೊಂಡ ಅವರು ಕೇವಲ ಕೇಳುಗರನ್ನು ಮಾತ್ರ ಬಯಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಸಾಮಾಜಿಕ ಪ್ರಜ್ಞೆಯನ್ನು ಎಲ್ಲರಿಗಿಂತ ಹೆಚ್ಚೇ ಬೆಳೆಸಿಕೊಂಡ ಪೊಲೀಸರೇ ಹೀಗೆ ಕಲಾವಿದರನ್ನು ಅವಮಾನಿಸಿದರೆ ಹೇಗೆ?

ಫಕೀರ, ಅನ್ಶುಲ್​ ರಾಯ್ಜೀ ಎಂಬ ಬೀದಿ ಪ್ರದರ್ಶನ ಕಲಾವಿದರು ದೆಹಲಿಯಲ್ಲಿ  (Delhi CP) ಸಂಗೀತ ಪ್ರದರ್ಶನ ನೀಡುತ್ತಿದ್ದಾಗ ಸಾಕಷ್ಟು ಜನರು ಇವರ ಸಂಗೀತವನ್ನು ಆಸ್ವಾದಿಸುತ್ತಾ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಅಲ್ಲಿಗೆ ಬಂದ ಪೊಲೀಸ್, ಪ್ರದರ್ಶನಕ್ಕೆ ಅಡ್ಡಿಪಡಿಸಿ ಅವಮಾನಿಸಿದರು. ಈ ವಿಡಿಯೋ ಅನ್ನು ನಟ ರಾಜೇಶ್​ ತೈಲಾಂಗ್ ಎನ್ನುವವರು ಟ್ವೀಟ್ ಮಾಡಿದ್ಧಾರೆ. ‘ಹೀಗೆ ಮಾಡಬಾರದಾಗಿತ್ತು. ಈ ಕಲಾವಿದರು ನಮ್ಮ ದೆಹಲಿಯನ್ನು ಹೆಚ್ಚು ಸಂಗೀತಮಯವಾಗಿಸುವಂಥವರು, ಅಭಿರುಚಿಯನ್ನು ಪಸರಿಸುವಂಥವರು. ಅಂಥವರಿಗೆ ಹೀಗೆ ಮಾಡಿರುವುದು ಅವಮಾನ’ ಎಂದು ನೋಟ್​ ಬರೆದಿದ್ದಾರೆ. ಇಷ್ಟೇ ಅಲ್ಲ ದೆಹಲಿ ಪೊಲೀಸರನ್ನು ಟ್ಯಾಗ್ ಕೂಡ ಮಾಡಿದ್ದಾರೆ.

‘ನಿಮಗೆ ನನ್ನ ಮಾತು ಕೇಳಿಸುತ್ತಿಲ್ಲವೇ ಎದ್ದು ಹೋಗು ಇಲ್ಲಿಂದ’  ಗಿಟಾರ್ ನುಡಿಸುತ್ತಿರುವ ಕಲಾವಿದ ಅನ್ಶುಲ್​ ಅವರ ಕೈ ಹಿಡಿದು ಎಳೆದು ಹೇಳುತ್ತಾರೆ ಪೊಲೀಸ್​. ಇಷ್ಟೇ ಅಲ್ಲ ಪ್ರದರ್ಶನವನ್ನು ಆಸ್ವಾದಿಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸ್ ಆದೇಶ ನೀಡುತ್ತಾರೆ.

‘ಭಾರತದಲ್ಲಿ ಬೀದಿ ಪ್ರದರ್ಶನಗಳು ಜೀವಂತವಾಗಿರಬೇಕು ಮತ್ತು ಕಾನೂನುಬದ್ಧವಾಗಿ ನಡೆಯಬೇಕು. ಇದಕ್ಕೆ ಸಾರ್ವಜನಿಕರು ಬೆಂಬಲಿಸುತ್ತಾರೆಯೇ?’ ಎಂಬ ನೋಟ್​ನೊಂದಿಗೆ ಅನ್ಶುಲ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನವರಿ 4 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ 4 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ : ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ

ನೆಟ್ಟಿಗರು ಪೊಲೀಸರ ಈ ನಡೆಯಿಂದ ಕೋಪಗೊಂಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಮೆರಿಕ, ಲಂಡಿನ್​, ಪ್ಯಾರೀಸ್​ನ ಮೂಲೆಮೂಲೆಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡುತ್ತಾರೆ. ಜನರು ನಿಂತುಕೊಂಡೇ ಕಲೆಯನ್ನು ಆಸ್ವಾದಿಸುತ್ತಾರೆ. ಆದರೆ ದೆಹಲಿಯಲ್ಲಿ ಈ ಬಗ್ಗೆ ಕಾನೂನು ಏನು ಹೇಳುತ್ತದೆಯೋ ಗೊತ್ತಿಲ್ಲ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಕೋಪಗೊಂಡ ಹಿಪ್ಪೋಪೊಟೋಮಸ್ ಪ್ರವಾಸಿಗರ ಸ್ಪೀಡ್​ಬೋಟ್​ ಬೆನ್ನಟ್ಟಿದ ವಿಡಿಯೋ ವೈರಲ್

ಇತರರು ಇಷ್ಟಪಡಲಿ ಬಿಡಲಿ ಕಲಾವಿದರು ತಮಗಿಷ್ಟವಾದ ಸ್ಥಳದಲ್ಲಿ ಕುಳಿತು ಪ್ರದರ್ಶನ ನೀಡಬಹುದು. ಆದರೆ ಅವರನ್ನು ಹೀಗೆ ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಕಲಾವಿದರು ಪರವಾನಿಗೆ ತೆಗೆದುಕೊಂಡಿದ್ದಾರೆಯೇ, ಅದಕ್ಕೆ ನಿರ್ದಿಷ್ಟವಾದ ಶುಲ್ಕ ಭರಿಸಬೇಕೆ? ಈ ಬಗ್ಗೆ ನಮ್ಮ ದೇಶದಲ್ಲಿ ಕಾನೂನು ಏನು ಹೇಳುತ್ತದೆ ಎಂದು ಮಗದೊಬ್ಬರು ಕೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:26 pm, Thu, 5 January 23

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ