ಪಾರ್ಕಿನ್ಸನ್ಸ್ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್
Viral Video : ಸಹಾಯ ಎಷ್ಟೇ ಚಿಕ್ಕದಾಗಿದ್ದರೂ ಆ ಕ್ಷಣಕ್ಕೆ ಅದು ದೊಡ್ಡದೇ. ಲಂಡನ್ನ ರೈಲಿನಲ್ಲಿ ಈ ವೃದ್ಧರು ಪ್ರಯಾಣಿಸುತ್ತಿದ್ಧಾಗ ಈ ಅಪರಿಚಿತ ಮಹಿಳೆ ಅವರಿಗೆ ಸಹಾಯ ಮಾಡಿದ್ದು ಹೀಗೆ.
Viral Vide0: ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ನಮಗೆ ಸೀಟ್ ಸಿಕ್ಕರೆ ಸಾಕು ಎಂದು ಸಿಕ್ಕಲ್ಲಿ ಕುಳಿತುಕೊಳ್ಳುವವರೇ ಅಲ್ಲ. ಆದರೆ ಕೆಲವರು ಮಾತ್ರ ಅಕ್ಕಪಕ್ಕದವರನ್ನು ದಯೆ, ಕರುಣೆಯಿಂದ ಗಮನಿಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಪರಿಚಿತ ಮಹಿಳೆಯೊಬ್ಬರು ಪಾರ್ಕಿನ್ಸನ್ನಿಂದ ಬಳಲುತ್ತಿರುವ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ್ದಾರೆ.
(London): This man with Parkinson’s disease couldn’t hold his newspaper so a stranger held it still for him so he could read it.
ಇದನ್ನೂ ಓದಿFaith in humanity restored. (?:rosiemegangill) pic.twitter.com/Uu4nDgIcaP
— GoodNewsMovement (@GoodNewsMVT) January 4, 2023
ಪಾರ್ಕಿನ್ಸನ್ಗೆ ಒಳಗಾದವರಿಗೆ ಕೈ ಕಾಲುಗಳು ಸ್ವಾಧೀನದಲ್ಲಿರುವುದಿಲ್ಲ. ನಿರಂತರವಾಗಿ ಅಲ್ಲಾಡುತ್ತಲೇ ಇರುತ್ತವೆ. ಹೀಗಿರುವಾಗ ನಿತ್ಯ ಕೆಲಸಗಳನ್ನು ಮಾಡಿಕೊಳ್ಳಲೂ ಅವರಿಗೆ ತೊಂದರೆಯಾಗುತ್ತಿರುತ್ತದೆ. ಆಗ ಯಾರಾದರೂ ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಮನೆಯಲ್ಲಾದರೆ ಒಬ್ಬರಿಲ್ಲಾ ಒಬ್ಬರು ಇರುತ್ತಾರೆ. ಆದರೆ ಪ್ರಯಾಣದಲ್ಲಿ?
ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ವೃದ್ಧರು ದಿನಪತ್ರಿಕೆ ಓದಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ಪತ್ರಿಕೆಯನ್ನು ಹಿಡಿದು, ವೃದ್ಧರಿಗೆ ಓದಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ಅನ್ನು ಲಂಡನ್ನಲ್ಲಿ ಚಿತ್ರೀಕರಿಸಲಾಗಿದೆ.
ಇದನ್ನೂ ನೋಡಿ : ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್
ಇದನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ದಯೆಯಿಂದ ಮಾಡಿದ ಯಾವ ಕೆಲಸ, ಸಹಾಯವೂ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುತ್ತಿದ್ದಾರೆ. ಈತನಕ 75,000 ಜನರು ಈ ವಿಡಿಯೋ ನೋಡಿದ್ದಾರೆ. ನಾನು ಇಂಥ ಪೋಸ್ಟ್ಗಳನ್ನು ದಿನವೂ ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ ಒಬ್ಬರು. ನನ್ನ ತಂದೆಗೂ ಪಾರ್ಕಿನ್ಸನ್ ಕಾಯಿಲೆ ಇತ್ತು. ಇದು ನನ್ನನ್ನು ಆಳವಾಗಿ ತಟ್ಟುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಸಹಾಯಕ್ಕೆ ಸಣ್ಣದು ದೊಡ್ಡದು ಎನ್ನುವುದಿಲ್ಲ. ಪ್ರತಿ ಸಹಾಯವೂ ದೊಡ್ಡದೇ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:21 am, Fri, 6 January 23