ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್

Viral Video : ಡ್ರೈವರ್​ಗೆ ಚಹಾ ಕುಡಿಯಲೇಬೇಕೆಂದು ತೀವ್ರವಾಗಿ ಅನ್ನಿಸಿದೆ. ಹಿಂದೂಮುಂದೂ ನೋಡದೆ ದಟ್ಟಣೆಯಿಂದ ಕೂಡಿದ ರಸ್ತೆಯ ಮಧ್ಯೆ ಹೀಗೆ ಬಸ್​ ನಿಲ್ಲಿಸಿ ಇಳಿದುಬಿಟ್ಟಿದ್ಧಾರೆ. ಆಮೇಲೆ?

ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್
ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ಬಸ್ ಡ್ರೈವರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 05, 2023 | 3:06 PM

Viral Video: ಚಹಾ! ಅನೇಕರ ಚೈತನ್ಯದ ಮೂಲವೇ ಇದರಲ್ಲಿದೆ. ಮಳೆಗಾಲಕ್ಕೆ, ಚಳಿಗಾಲಕ್ಕೆ ಚಹಾ ಇಲ್ಲದೆ ಕೈಕಾಲಷ್ಟೇ ಅಲ್ಲ ತಲೆಯೂ ಓಡದು ಎಂಬಂಥ  ಸ್ಥಿತಿ ನಿರ್ಮಾಣವಾಗುತ್ತದೆ. ಈಗಲಂತೂ ಚಳಿಗಾಲ. ಬೆಚ್ಚಗೆ, ಹಿತವಾದ ಚಹಾವನ್ನು ಆಸ್ವಾದಿಸಬೇಕೆಂದು ಯಾರಿಗೂ ತೀವ್ರವಾಗಿ ಅನ್ನಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ದೆಹಲಿಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ರಸ್ತೆಯ ಮಧ್ಯೆಯೇ ಬಸ್ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದಾರೆ.

ಚಹಾ ಕುಡಿಯಲೇಬೇಕೆಂದು ಅವರಿಗೆ ತೀವ್ರವಾಗಿ ಅನ್ನಿಸಿದೆ. ದಟ್ಟಣೆಯಿಂದ ಕೂಡಿದ ರಸ್ತೆಯ ಮಧ್ಯೆ ಹೀಗೆ ಧೈರ್ಯದಿಂದ ಬಸ್​ ನಿಲ್ಲಿಸಿಬಿಟ್ಟಿದ್ದಾರೆ. ಮುಂದೆ ಏನಾಗಬೇಕೋ ಅದೇ ಆಗಿದೆ. ರಸ್ತೆ ಪೂರ್ತಿ ಜಾಮ್ ಆಗಿಬಿಟ್ಟಿದೆ. ಜನರು ಕೋಪದಿಂದ ಒಂದೇ ಸಮ ಹಾರ್ನ್​ ಮಾಡಿದ್ಧಾರೆ. ಆದರೂ ಡ್ರೈವರ್​ಗೆ ಚಹಾ ಕುಡಿಯುವುದು ಮುಖ್ಯ. ಚಹಾ ಅಂಗಡಿಗೆ ಹೋಗಿದ್ದಾರೆ. ಬೆನ್ನ ಹಿಂದೆ ನಡೆಯುತ್ತಿರುವುದೆಲ್ಲ ಕಿವಿಗೆ ತಲುಪುತ್ತಿದ್ದಂತೆ ತಪ್ಪಿನ ಅರಿವಾಗಿ ಕೈಯಲ್ಲಿ ಕಪ್​ ಹಿಡಿದುಕೊಂಡೇ ಬಸ್ಸಿನೆಡೆ ಓಡಿದ್ದಾರೆ.

ಇದನ್ನೂ ಓದಿ : ಸರ್ಕಸ್​ ನಡೆಯುತ್ತಿದ್ದಾಗ ಹುಲಿಯ ದಾಳಿಗೆ ಈಡಾದ ಇಟಾಲಿಯನ್​ ತರಬೇತುದಾರ; ವಿಡಿಯೋ ವೈರಲ್

ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಶುಭ್​ ಎನ್ನುವವರು ಜನವರಿ 2ರಂದು ಪೋಸ್ಟ್ ಮಾಡಿದ್ದಾರೆ.  ದೆಹಲಿಯ ವಿಶ್ವವಿದ್ಯಾಲಯದ ಕ್ಯಾಂಪಸ್​ ಬಳಿ ಇರುವ ಸುಧಾಮ ಟೀ ಸ್ಟಾಲ್​ ಬಳಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈತನಕ 1,36,000 ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಅರೆ ಪಾಪ ಅವನದು ತಪ್ಪಿಲ್ಲ. ಸುಧಾಮ ಚಹಾ ಅಷ್ಟೊಂದು ಚೆನ್ನಾಗಿದೆ ಎಂದರ್ಥ ಎಂದಿದ್ದಾರೆ ಒಬ್ಬರು. ಇದು ಚಹಾದ ಮಹಿಮೆ ಮತ್ತು ಶ್ರೇಷ್ಠತೆ ಎಂದಿದ್ಧಾರೆ ಮತ್ತೊಬ್ಬರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:06 pm, Thu, 5 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ