ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಮದುವೆಯ ದಿನವೇ ತಲೆಗೂದಲನ್ನು ಕತ್ತರಿಸಿದ ವಧು

Cancer : ‘ನನ್ನ ತಾಯಿಯನ್ನು ಕ್ಯಾನ್ಸರ್​ನಿಂದ ಕಳೆದುಕೊಂಡಿದ್ದೇನೆ. ಹೆಣ್ಣುಮಕ್ಕಳು ಈ ರೋಗಕ್ಕೆ ಈಡಾಗುತ್ತಿದ್ದಂತೆ ಅವರು ಎದುರಿಸುವ ದೊಡ್ಡ ಸವಾಲೆಂದರೆ ಕೂದಲುದುರುವಿಕೆಯದು. ಹಾಗಾಗಿ ನಾನು ಈ ದಿನ ಈ ನಿರ್ಧಾರ ತೆಗೆದುಕೊಂಡೆ.’

ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಮದುವೆಯ ದಿನವೇ ತಲೆಗೂದಲನ್ನು ಕತ್ತರಿಸಿದ ವಧು
ತನ್ನ ಮದುವೆ ದಿನವೇ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು ದಾನ ಮಾಡಿದ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 05, 2023 | 6:28 PM

Viral Video : ತಮ್ಮ ಮದುವೆಯ ದಿನವು ಅತ್ಯಂತ ವಿಶೇಷವಾಗಿರಬೇಕೆಂದು ಸಾಕಷ್ಟು ಜನರು ಬಯಸುತ್ತಾರೆ. ಎಲ್ಲರ ನೆನಪಿನಲ್ಲಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಮದುವೆಯನ್ನು ಆಯೋಜಿಸುತ್ತಾರೆ ಕೂಡ. ಈಗಾಗಲೇ ಇಂಥ ಮದುವೆಗಳ ವಿಡಿಯೋ ಅನ್ನು ನೀವು ಇದೇ ತಾಣದಲ್ಲಿ ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ವಧು ತನ್ನ ಮದುವೆಯ ಸಮಯದಲ್ಲಿ ಕೂದಲನ್ನು ಕತ್ತರಿಸಿಕೊಂಡಿದ್ದಾಳೆ. ಯಾಕಿಂಥ ನಿರ್ಧಾರ? ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Michigan Wedding Photographer & Videographer | Brianna Eslinger (@theunfilteredcollective)

ವಿಡಿಯೋ ನೋಡಿದ ತಕ್ಷಣ ಕಾರಣ ಹೊಳೆಯಲಾರದು. ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ಈಕೆ ದಾನ ಮಾಡಿದ್ದಾಳೆ. ಈ ಸಂದರ್ಭವೇ ಬೇಕಿತ್ತೇ? ಎನ್ನಿಸಬಹುದು. ಆದರೆ ಈಕೆ ಕ್ಯಾನ್ಸರ್​ನಿಂದ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ. ಆ ನೆನಪಿಗಾಗಿ ಹೀಗೆ ಈ ನಿರ್ಧಾರ ಕೈಗೊಂಡಿದ್ದಾಳೆ. ಹೆಣ್ಣುಮಕ್ಕಳು ಕ್ಯಾನ್ಸರ್​ಗೆ ಒಳಗಾದಾಗ ಎದುರಿಸುವ ದೊಡ್ಡ ಸವಾಲೆಂದರೆ ಕೂದಲಿನದು. ಆ ನೋವು ನನಗೆ ಗೊತ್ತು ಹಾಗಾಗಿ ನಾನು ಈ ನಿರ್ಧಾರ ಕೈಗೊಂಡೆ ಎಂದಿದ್ದಾಳೆ ವಧು. ಈ ಸಂದರ್ಭಕ್ಕೆ ಸಾಕ್ಷಿಯಾದ ಕುಟುಂಬ ಸದಸ್ಯರು ಹನಿಗಣ್ಣಾಗುತ್ತಾರೆ. ವರ ಕೂಡ ವಧುವಿನ ನಿರ್ಧಾರವನ್ನು ಗೌರವಿಸಿದ್ದಾನೆ.

ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

ಈಗಾಗಲೇ ಈ ವಿಡಿಯೋ ಅನ್ನು ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,64,000 ಜನರು ಮೆಚ್ಚಿದ್ದಾರೆ. ಇದು ಅದ್ಭುತ ನಿರ್ಧಾರ ಎಂದಿದ್ಧಾರೆ ಕೆಲವರು. ನಾನು ಕ್ಯಾನ್ಸರ್​ಗೆ ಈಡಾಗಿ ಈಗ ಬದುಕುಳಿದಿದ್ದೇನೆ. ಕ್ಯಾನ್ಸರ್​ಗೆ ಒಳಗಾಗುವ ಮೊದಲು ನಾನು ಹೀಗೆ ಅನೇಕ ಬಾರಿ ಕೂದಲನ್ನು ದಾನ ಮಾಡಿದ್ದೇನೆ. ಈಗ ಕೂದಲಿನ ಮಹತ್ವ ನನಗೆ ಹೆಚ್ಚು ಅರ್ಥವಾಗುತ್ತಿದೆ. ಮತ್ತು ನೀವು ಬಾಹ್ಯದಲ್ಲಿಯೂ ಆಂತರ್ಯದಲ್ಲಿಯೂ ಸುಂದರವಾಗಿದ್ದೀರಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:27 pm, Thu, 5 January 23

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ