AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

Scribbling : ಈ ವಿಡಿಯೋ ನೋಡಿದ ಮೇಲೆ ನೀವು ಖಂಡಿತ ನಿಮ್ಮ ಮಕ್ಕಳನ್ನು ಬಯ್ಯವುದಿಲ್ಲ. ಬದಲಾಗಿ ನೀವೇ ಪೇಂಟು ಬ್ರಷ್​ ತೆಗೆದುಕೊಂಡು ಅವರೊಂದಿಗೆ ಬೆರೆಯುತ್ತೀರಿ. ಮಜಾ ಇದೆ ಈ ವಿಡಿಯೋ.

ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ
ಮಗಳು ಗೀಚಿದಾಗ ಅಪ್ಪ ಏನು ಮಾಡಿದರಿಲ್ಲಿ?
TV9 Web
| Updated By: ಶ್ರೀದೇವಿ ಕಳಸದ|

Updated on:Jan 21, 2023 | 5:03 PM

Share

Viral Video : ಮಕ್ಕಳು ಒಂದು ವರ್ಷದವರಾಗುತ್ತಿದ್ದಂತೆ ಅವರಿಂದ ಗೋಡೆಯನ್ನು ರಕ್ಷಿಸುವುದೇ ದೊಡ್ಡ ಕೆಲಸವೆಂಬಂತೆ ಪೋಷಕರು ಚಿಂತೆಗೊಳಗಾಗುತ್ತಾರೆ. ಆದರೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಮಕ್ಕಳನ್ನು ಗೀಚುವಿಕೆಯಿಂದ (Scribbling) ತಡೆಯುವುದು ತಪ್ಪು. ಗೀಚುವಿಕೆಗೂ ಮಕ್ಕಳ ಮೆದುಳಿನ ವಿಕಾಸಕ್ಕೂ ಪರಸ್ಪರ ಸಂಬಂಧವಿದೆ ಎನ್ನತ್ತದೆ ಮನೋವಿಜ್ಞಾನ. ಗೀಚುವಿಕೆಯಿಂದ ಉಂಟಾಗುವ ಅತೀ ಸೂಕ್ಷ್ಮ ಕರ್ಕಶ ಶಬ್ದವು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಆದರೂ ಗೋಡೆಯ ಮೇಲೆ ಮಕ್ಕಳು ಗೀಚಿದಾಗ ಎಂಥ ಪೋಷಕರಿಗೂ ಕಿರಿಕಿರಿಯೇ. ಆದರೆ ಇದನ್ನೇ ಕಲಾತ್ಮಕ ದೃಷ್ಟಿಯಿಂದ ನೋಡುವುದನ್ನು ಬೆಳೆಸಿಕೊಂಡಲ್ಲಿ ಮಕ್ಕಳೊಂದಿಗೆ ಪೋಷಕರು ಖುಷಿಪಡುತ್ತಾರೆ. ಸೃಜನಶೀಲತೆಯ ಹುಟ್ಟು ಇಲ್ಲಿಂದಲೇ ಶುರುವಾಗುತ್ತದೆ.

ಈ ವಿಡಿಯೋದಲ್ಲಿ ಮಗಳು ಗೋಡೆ ಮೇಲೆ ಪುಟ್ಟದಾಗಿ ಏನೋ ಚಿತ್ರ ಬಿಡಿಸಿದ್ದಾಳೆ. ಆದರೆ ಕೋಪಗೊಳ್ಳದ ಕಲಾವಿದ ತಂದೆ ಇದನ್ನು ಅಚ್ಚರಿಪಡುವಂತೆ ಮಾರ್ಪಾಡು ಮಾಡಿದ್ಧಾನೆ. ಈತನಕ 11 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 90,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಶಭಾಷ್​ ಅಪ್ಪಾ, ಮನೆಗೊಬ್ಬರು ಇಂಥ ಒಬ್ಬ ಅಪ್ಪ ಇದ್ದರೆ ಸಾಕು, ಮಕ್ಕಳ ಮನಸು ಸೃಜನಶೀಲತೆಯಿಂದ ಅರಳತೊಡಗುತ್ತದೆ ಎಂದು ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

ಛೆ ನನಗೂ ಇಂಥ ಅಪ್ಪ ಇರಬೇಕಿತ್ತು. ಬಾಲ್ಯದಲ್ಲಿ ಸಾಕಷ್ಟು ಹೊಡೆತ ತಿಂದಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮಕ್ಕಳನ್ನು ಇಂಥ ಗೀಚುವಿಕೆಯಿಂದ ತಡೆಯುವುದಕ್ಕಿಂತ ಗೋಡೆಗಳಿಗೆ ಪ್ಲಾಸ್ಟರ್​ ಆಫ್​ ಪ್ಯಾರೀಸ್​ನ ಶೀಟುಗಳನ್ನು ಅಂಟಿಸುವುದು ಒಳ್ಳೆಯದು ಎಂದಿದ್ಧಾರೆ ಹಲವರು. ಈ ಉಪಾಯ ಬಹಳ ಮುದ್ಧಾಗಿದೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ಇಂಥ ಉಪಾಯಗಳನ್ನು ಕಂಡುಕೊಳ್ಳಬಹುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Sat, 21 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ