ಪುಷಪ್ಸ್ ಎಂಥಾ ಸುಲಭ ಅಜ್ಜನ ಬೆನ್ನ ಮೇಲೆ ಹೀಗೆ ಮಲಗಿದರೆ
Pushups : ‘ಒಂದೇ ಸಲಕ್ಕೆ 15 ಪುಷಪ್ಸ್ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ ನನಗೆ ಇದೇ ಗುರಿ!
Viral Video : ಏನು ಮಾಡಲೂ ಒಂದು ಸ್ಫೂರ್ತಿ ಬೇಕಲ್ಲವೆ? ಬರೀ ಗುರಿ ಸಾಕಾಗುವುದಿಲ್ಲ. ಅದರಲ್ಲೂ ವರ್ಕೌಟ್ ಮಾಡುವುದಕ್ಕೆ ತುಸು ಜಾಸ್ತಿಯೇ ಸ್ಫೂರ್ತಿ ಬೇಕು. ಆಗ ಗುರಿಯೂ ಗರಿಗೆದರುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಗುವನ್ನು ಬೆನ್ನ ಮೇಲೆ ಮಲಗಿಸಿಕೊಂಡು ಪುಷಪ್ಸ್ ತೆಗೆಯುತ್ತಿದ್ದಾನೆ ಈ ಅಜ್ಜ. ನೆಟ್ಟಿಗರು ಈ ಮುದ್ದಾದ ವಿಡಿಯೋ ನೋಡುತ್ತ, ನಾವೂ ಇನ್ನು ಮುಂದೆ ಹೀಗೆಲ್ಲ ಮಾಡುವುದೇ ಎಂದು ಸಂಕಲ್ಪ ತೊಡುತ್ತಿದ್ದಾರೆ.
weighted push ups with tweety, a kabootar ka bachha.. ? pic.twitter.com/EGXStGCCGy
ಇದನ್ನೂ ಓದಿ— Sandeep (@dogtired1) January 24, 2023
ಸಂದೀಪ್ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಒಂದೇ ಸಲಕ್ಕೆ 15 ಪುಷಪ್ಸ್ ತೆಗೆಯುತ್ತೀರಿ ಎಂದರೆ ಸ್ವಲ್ಪ ಭಾರವನ್ನು ಸೇರಿಸಿಕೊಳ್ಳಿ. ಇನ್ನು ಮೂರು ವರ್ಷಗಳಲ್ಲಿ ಈಕೆ ಸುಮಾರು 18 ಕಿ.ಗ್ರಾಂ ನಷ್ಟು ತೂಗುತ್ತಾಳೆ, ನಾನು 60 ವರ್ಷದವನಾಗುತ್ತೇನೆ. ಆಗಲೂ 15 ಪುಷಪ್ಸ್ ತೆಗೆಯುವ ಗುರಿ ಹೊಂದಿದ್ದೇನೆ ಎಂದಿದ್ದಾರೆ ಈ ವ್ಯಕ್ತಿ.
ಇದನ್ನೂ ಓದಿ : ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ
ಈಗಾಗಲೇ ಈ ವಿಡಿಯೋ ಅನ್ನು 33,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಮತ್ತೆ ಮತ್ತೆ ನೋಡುತ್ತ ಕಳೆದುಹೋಗುತ್ತಿದ್ದಾರೆ. ಈ ದಿನ ನೋಡಿದ ಸಾಕಷ್ಟು ವಿಡಿಯೋಗಳಲ್ಲಿ ಇದು ತುಂಬಾ ಇಷ್ಟವಾಯಿತು ಎಂದಿದ್ದಾರೆ ಕೆಲವರು. ನಾನೀಗ ನನ್ನ ಮೊಮ್ಮಕ್ಕಳೊಂದಿಗೆ ಹೀಗೆ ಪುಷಪ್ಸ್ ತೆಗೆಯುವ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ
ಆಹಾ ಮುದ್ದು ಸುರಿಯುತ್ತಿದೆ ಇಲ್ಲಿ ಎಂದು ಅನೇಕರು ಹೇಳಿದ್ದಾರೆ. ಅವಳು ನಿಮ್ಮನ್ನು ಹಿಡಿದುಕೊಂಡ ರೀತಿಯೇ ಬಹಳ ಆಪ್ತವಾಗಿದೆ ಎಂದಿದ್ಧಾರೆ ಹಲವರು. ಆಹಾ ಎಂಥ ಯಂಗ್ ಅಜ್ಜ ಇವರು ಎಂದಿದ್ದಾರೆ ಮತ್ತೊಬ್ಬರು. ಸಂದೀಪ ಎನ್ನುವ ಇನ್ನೊಬ್ಬರು ಪಾರಿವಾಳದ ಮರಿಗಳನ್ನು ಬೆನ್ನ ಮೇಲೆ ಇಟ್ಟುಕೊಂಡು ಪುಷಪ್ಸ್ ತೆಗೆದ ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ