Republic Day 2023 Dressing Ideas: ಗಣರಾಜ್ಯೋತ್ಸವದ ದಿನ ಸ್ಪೆಷಲ್ ಆಗಿ ಕಾಣಬೇಕಾ?; ಇಲ್ಲಿವೆ ಕೆಲವು ಡ್ರೆಸಿಂಗ್ ಐಡಿಯಾ

ನೀವೇನಾದರೂ ಗಣರಾಜ್ಯೋತ್ಸವಕ್ಕೆ ವಿಶೇಷವಾಗಿ ತಯಾರಾಗಲು ಬಯಸಿದ್ದರೆ ಕೆಲವು ಐಡಿಯಾಗಳು ಇಲ್ಲಿವೆ.

Republic Day 2023 Dressing Ideas: ಗಣರಾಜ್ಯೋತ್ಸವದ ದಿನ ಸ್ಪೆಷಲ್ ಆಗಿ ಕಾಣಬೇಕಾ?; ಇಲ್ಲಿವೆ ಕೆಲವು ಡ್ರೆಸಿಂಗ್ ಐಡಿಯಾ
ಸಾಂದರ್ಭಿಕ ಚಿತ್ರImage Credit source: ANI
Follow us
ಸುಷ್ಮಾ ಚಕ್ರೆ
|

Updated on: Jan 24, 2023 | 4:56 PM

ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆ ಧರಿಸಿ ಹೋಗುತ್ತಿದ್ದ ದಿನಗಳಿದ್ದವು. ಸಾಮಾನ್ಯವಾಗಿ ಗಣರಾಜ್ಯೋತ್ಸವ ದಿನದಂದು ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ (Fancy Dress Competition) ಇರುತ್ತಿತ್ತು. ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳಲ್ಲೇ ನಾನಾ ರೀತಿಯ ಫ್ಯಾಷನ್ ಮಾಡಬಹುದು. ಇದು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರ ಉಡುಗೆ ಹಾಕಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನೂ ಇಡಲಾಗುತ್ತದೆ.

ಗಣರಾಜ್ಯೋತ್ಸವದ ದಿನ ಮಹಾತ್ಮ ಗಾಂಧಿ, ನೆಹರೂ, ಅಬ್ದುಲ್ ಕಲಾಂ ಆಜಾದ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಒಬಾಮಾ, ನರೇಂದ್ರ ಮೋದಿ ಮುಂತಾದವರ ಉಡುಗೆಗಳನ್ನು ಹಾಕಿ ಮಕ್ಕಳನ್ನು ಪೋಷಕರು ರೆಡಿ ಮಾಡುತ್ತಾರೆ. ಇದು ಮಕ್ಕಳ ಕತೆಯಾದರೆ ದೊಡ್ಡವರೂ ಕಂಪನಿಗಳಲ್ಲಿ, ಕಾಲೇಜುಗಳಲ್ಲಿ ಕೇಸರಿ/ ಬಿಳಿ/ ಹಸರು ಬಣ್ಣದ ಬಟ್ಟೆ ಅಥವಾ ಮೂರೂ ಬಣ್ಣಗಳ ಕಾಂಬಿನೇಷನ್ ಇರುವ ಬಟ್ಟೆ ಧರಿಸಿ, ಬಾವುಟ ಹಿಡಿದು ಸಂಭ್ರಮಿಸುತ್ತಾರೆ.

ನೀವೇನಾದರೂ ಗಣರಾಜ್ಯೋತ್ಸವಕ್ಕೆ ಸಾಂಸ್ಕೃತಿಕವಾಗಿ ರೆಡಿಯಾಗಲು ಬಯಸಿದ್ದರೆ ಕೆಲವು ಐಡಿಯಾಗಳು ಇಲ್ಲಿವೆ.

ಇದನ್ನೂ ಓದಿ: India Republic Day 2023: ಈ ಬಾರಿಯ ಗಣರಾಜ್ಯೋತ್ಸವ ಪ್ರತಿ ವರ್ಷಕ್ಕಿಂತ ಭಿನ್ನ ಹೇಗೆ? ಇಲ್ಲಿದೆ ಮಾಹಿತಿ

ಕೇಸರಿ ಸ್ಕರ್ಟ್: ಕೇಸರಿ ಬಣ್ಣದ ಸ್ಕರ್ಟ್​ ಧರಿಸಿ ಅದರ ಮೇಲೆ ಬಿಳಿ ಅಥವಾ ಹಸಿರು ಬಣ್ಣದ ಟಾಪ್/ ಟಿ-ಶರ್ಟ್​ ಧರಿಸಬಹುದು. ಆನ್​ಲೈನ್, ಮಾಲ್​​ಗಳಲ್ಲಿ ಈ ಡ್ರೆಸ್ ಸಿಗುತ್ತದೆ. ಅದಕ್ಕೆ ಜಾಕೆಟ್ ಕೂಡ ಹಾಕಿಕೊಳ್ಳಬಹುದು.

ಹಸಿರು ಪ್ಯಾಂಟ್: ಹಸಿರು ಬಣ್ಣದ ಪ್ಯಾಂಟ್ ಹಾಕಿಕೊಂಡು, ಬಿಳಿ ಅಥವಾ ಕೇಸರಿ ಬಣ್ಣದ ಟಾಪ್ ಹಾಕಿಕೊಳ್ಳಬಹುದು. ಹಸಿರು ಬಣ್ಣದ ಟೈಟ್ ಪ್ಯಾಂಟ್, ಪಲಾಜೋ, ಬೆಲ್ ಬಾಟಂ ಪ್ಯಾಂಟ್​ಗಳು ಚೆನ್ನಾಗಿ ಕಾಣುತ್ತವೆ.

ಬಿಳಿ ಸಲ್ವಾರ್: ಬಿಳಿ ಬಣ್ಣದ ಸಲ್ವಾರ್ ಹಾಕಿಕೊಂಡು, ಅದಕ್ಕೆ ಬಿಳಿ ಬಣ್ಣದ ಪ್ಯಾಂಟ್ ಹಾಕಿಕೊಂಡು ಕೇಸರಿ ಮತ್ತು ಹಸಿರು ಬಣ್ಣದ ಮಿಕ್ಸ್​ ಇರುವ ದುಪಟ್ಟಾ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತದೆ. ಅಥವಾ ಬಿಳಿ ಟಾಪ್​ಗೆ ಹಸಿರು ಅಥವಾ ಕೇಸರಿ ಬಣ್ಣದ ಪ್ಯಾಂಟ್ ಕೂಡ ಹಾಕಿಕೊಳ್ಳಬಹುದು.

ಇದನ್ನೂ ಓದಿ: Republic Day 2023 Speech Ideas: ಶಾಲೆಯಲ್ಲಿ ಗಣರಾಜ್ಯೋತ್ಸವ ಭಾಷಣ ಮಾಡಿ ಮಿಂಚಲು ಇಲ್ಲಿವೆ ಒಂದಿಷ್ಟು ಪಾಯಿಂಟ್ಸ್

ಕಣ್ಣಿನ ಮೇಕಪ್, ನೈಲ್ ಆರ್ಟ್: ಗಣರಾಜ್ಯೋತ್ಸವದ ದಿನ ಯುವತಿಯರು ಕಣ್ಣಿನ ಮೇಲ್ಭಾಗದಲ್ಲಿ ಕೇಸರಿ, ಬಿಳಿ, ಹಸಿರಿನ ಕಾಂಬಿನೇಷನ್​ನಲ್ಲಿ ಐ ಮೇಕಪ್ ಕೂಡ ಮಾಡಿಕೊಂಡರೆ ಚೆನ್ನಾಗಿ ಕಾಣುತ್ತದೆ. ಹಾಗೇ, ಈ ಮೂರು ಕಾಂಬಿನೇಷನ್​ನ ನೈಲ್ ಆರ್ಟ್​ ಕೂಡ ಮಾಡಿಕೊಳ್ಳಬಹುದು. ಅದರ ಜೊತೆಗೆ ಕೇಸರಿ, ಬಿಳಿ ಹಸಿರು ಕಾಂಬಿನೇಷನ್​ನ ಕ್ಲಿಪ್, ಬಳೆ, ಬ್ರೇಸ್ಲೆಟ್​, ಸ್ಟಿಕರ್ ಕೂಡ ಹಾಕಿಕೊಳ್ಳಬಹುದು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ