ನಿನ್ನನ್ನು ನಾನೆಷ್ಟು ಪ್ರೀತಿಸುತ್ತೇನೆ ಗೊತ್ತಾ? ಮೇಲಿನಿಂದ ಕೆಳಗೆ ಹಾರಿದ ಯುವತಿ
Gondola : ನಿಮ್ಮ ಪ್ರೀತಿಯ ಆಳವನ್ನು ತೋರಿಸಲು ಈತನಕ ನೀವೆಲ್ಲ ಏನೇನು ಮಾಡಿದ್ದೀರೋ ಅದೆಲ್ಲವೂ ಹೊಳೆಯಲ್ಲಿ ಹುಣಸೆ ತೊಳೆದಂತೆ ಎನ್ನುತ್ತಿದೆ ಈ ವಿಡಿಯೋ. ನೋಡಿ ಬೇಕಿದ್ದರೆ ಒಮ್ಮೆ ಪ್ರೀತಿಸುವ ಈ ಸಾಹಸವನ್ನು.
Viral Video : ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ? ಈ ತೀವ್ರತೆಯನ್ನು ವ್ಯಕ್ತಪಡಿಸಲು ತಮ್ಮದೇ ಆದ ಬಗೆಗಳನ್ನು ಪ್ರೇಮಿಗಳು, ದಂಪತಿಗಳು ಕಂಡುಕೊಳ್ಳುತ್ತಾರೆ. ಏನು ಮಾಡಿದರೂ ಅದು ಹೊಸತನದಿಂದ ಕೂಡಿರಬೇಕು. ಪ್ರೀತಿಸುವವರಿಗೆ ಮನಸಿನ ಆಳ, ತೀವ್ರತೆ ಅರ್ಥವಾಗಬೇಕೆಂದು ನಡೆಸುವ ಪ್ರಯತ್ನಗಳಿಗೆ ಎಣೆಯುಂಟೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜಮ್ಮು ಕಾಶ್ಮೀರದ ಗುಲ್ಮಾರ್ಗದ ಬಳಿ ಗೊಂಡೋಲಾ ರೈಡ್ಗೆ ಹೋದ ಈ ಜೋಡಿಯ ನಡೆ. ನೆಟ್ಟಿಗರು ಈ ವಿಡಿಯೋ ನೋಡಿ ಕಣ್ಕಣ್ಣು ಬಿಡುತ್ತ ಕುಳಿತಿದ್ದಾರೆ.
View this post on Instagram
ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ? ಎಂದು ಆಕೆ ಆತನನ್ನು ಕೇಳುತ್ತಾಳೆ. ಎಷ್ಟು ಎಂದು ಆತ ಕೇಳುತ್ತಾನೆ. ಸೆಕೆಂಡೂ ತಡಮಾಡದೇ ತುಟಿಗೆ ಮುತ್ತನ್ನಿಡುತ್ತ ಮೇಲಿನಿಂದ ಕೆಳಗೆ ಹಾರಿಬೀಳುತ್ತಾಳೆ. ಪ್ರೀತಿಸುವುದು ಎಂದರೆ ಸಾಹಸವೇ!? ಇವರು ಸಾಹಸಪ್ರಿಯರು ಆಗಿರುವುದರಿಂದ ಎಲ್ಲವೂ ಸಾಹಸ ಪ್ರಕ್ರಿಯೆಯ ಮೂಲಕವೇ ವ್ಯಕ್ತವಾಗಬೇಕಲ್ಲವೆ?
ಇದನ್ನೂ ಓದಿ : ಬೇಟೆಯಾಡಲು ಪ್ರಯತ್ನಿಸಿದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಎಮ್ಮೆಯ ವಿಡಿಯೋ ವೈರಲ್
‘ಇದು ಪೂರ್ವನಿರ್ಧರಿತವಲ್ಲ. ಗೊಂಡೋಲಾಗೆ ಹೋಗೋಣ ಎಂದು ಸಾಂಡ್ರಾ ಹೇಳಿದಳು. ಆ ಪ್ರಕಾರ ಹೋದೆವು. ಆದರೆ ಖಂಡಿತವಾಗಲೂ ಈಕೆ ಹೀಗೆ ಮಾಡುತ್ತಾಳೆಂಬ ಸುಳಿವೂ ಕೂಡ ಇರಲಿಲ್ಲ. ನಿಜಕ್ಕೂ ಇದು ಅಚ್ಚರಿ ಮತ್ತು ಮೋಹಕತೆಯಿಂದ ಕೂಡಿತ್ತು’ ಎಂದಿದ್ದಾನೆ ಆತ. ಈ ವಿಡಿಯೋ ಅನ್ನು ಜನವರಿ 16ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ 1.5 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಅದ್ಭುತವಾದ ರೊಮ್ಯಾಂಟಿಕ್ ದೃಶ್ಯ ಎಂದಿದ್ದಾರೆ ಕೆಲವರು. ಆಹಾ ಪ್ರೀತಿಗೆ ಧೈರ್ಯವೂ ಬೇಕು. ಈಕೆ ನಿಜಕ್ಕೂ ಈತನನ್ನು ಬಹಳ ಪ್ರೀತಿಸುತ್ತಾಳೆ ಎಂದಿದ್ಧಾರೆ ಒಬ್ಬರು.
ಈ ವಿಡಿಯೋ ನೋಡಲು ಮಾತ್ರ. ಇವರಿಬ್ಬರೂ ನುರಿತ ಸಾಹಸಿಗರು. ಅನೇಕ ಸಾಹಸ ಚಟುವಟಿಕೆಗಳಲ್ಲಿ ಭಾಗಿಯಾದವರು. ಹಾಗಾಗಿ ಇವರು ಅಥವಾ ಇಂಥವರು ಹೀಗೆ ಮಾಡಲು ಸಾಧ್ಯ.
ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:58 pm, Wed, 25 January 23