Assembly Polls: ಮಂಡ್ಯ ತಲುಪಿದ ಪ್ರಜಾಧ್ವನಿ ಯಾತ್ರೆ,  ಭೇದಿಸುವರೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೆಡಿ(ಎಸ್) ಭದ್ರಕೋಟೆ?

Assembly Polls: ಮಂಡ್ಯ ತಲುಪಿದ ಪ್ರಜಾಧ್ವನಿ ಯಾತ್ರೆ,  ಭೇದಿಸುವರೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೆಡಿ(ಎಸ್) ಭದ್ರಕೋಟೆ?

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 27, 2023 | 11:32 AM

ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಹೆಚ್ಚು ಸಾಮರಸ್ಯ, ಸಮನ್ವಯತೆ ಕಂಡುಬರುತ್ತಿದೆ. ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲ ಅವರಿಗೆ ಇದು ಸಂತೋಷದ ವಿಷಯವಾಗಿರಬಹುದು.

ಮಂಡ್ಯ: ಸಕ್ಕರೆ ನಾಡು ಯಾವತ್ತಿಗೂ ಜೆಡಿ(ಎಸ್) ಭದ್ರಕೋಟೆ. ಇದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗೊತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ವಿರೋಧ ಪಕ್ಷದ ಸಿದ್ದರಾಮಯ್ಯನವರಿಗೆ (Siddaramaiah) ಉಳಿದವರಿಗಿಂತ ಚೆನ್ನಾಗಿ ಗೊತ್ತು. ಪಕ್ಷದ ಪ್ರಜಾಧ್ವನಿ ಯಾತ್ರೆ (Prajadhvani Yatre) ಇಂದು ಮಂಡ್ಯ ಜಿಲ್ಲೆ ತಲುಪಿದ್ದು ಮತದಾರರನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಹೇಗೆ ತಮ್ಮೆಡೆ ವಾಲಿಸಿಕೊಳ್ಳಲಿದ್ದಾರೆ ಅಥವಾ ವಾಲಿಸಿಕೊಳ್ಳುವಲ್ಲಿ ಸಫಲರಾಗುತ್ತಾರೋ ಕಾದು ನೋಡಬೇಕಾದ ಅಂಶವಾಗಿದೆ. ಪ್ರಜಾಧ್ವನಿ ಯಾತ್ರೆಯನ್ನು ನೀವು ಗಮನಿಸುತ್ತಿರುವಿರಾದರೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಹೆಚ್ಚು ಸಾಮರಸ್ಯ, ಸಮನ್ವಯತೆ ಕಂಡುಬರುತ್ತಿದೆ. ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲ ಅವರಿಗೆ ಇದು ಸಂತೋಷದ ವಿಷಯವಾಗಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 27, 2023 11:31 AM