Guinness World Record: ಭಾರತದ ಈ ಕೈಗಡಿಯಾರದಲ್ಲಿದೆ 17,524 ವಜ್ರ; ಗಿನ್ನೆಸ್ ವಿಶ್ವ ದಾಖಲೆ

ಈ ಹಿಂದೆ (ಡಿಸೆಂಬರ್ 2018) ವಿಶ್ವ ದಾಖಲೆ ಪಡೆದಿದ್ದ ಹಾಂಗ್ ಕಾಂಗ್​​ನ ಆರನ್ ಶಮ್ ಜ್ಯುವೆಲರಿ ಲಿಮಿಟೆಡ್ ತಯಾರಿಸಿದ 15,858 ವಜ್ರಗಳೊಂದಿಗೆ ಆಭರಣದ ದಾಖಲೆಯನ್ನು ಮುರಿದಿದೆ.

Guinness World Record: ಭಾರತದ ಈ ಕೈಗಡಿಯಾರದಲ್ಲಿದೆ 17,524 ವಜ್ರ; ಗಿನ್ನೆಸ್ ವಿಶ್ವ ದಾಖಲೆ
Image Credit source: guinnessworldrecords.com
Follow us
ಅಕ್ಷತಾ ವರ್ಕಾಡಿ
|

Updated on:Jan 27, 2023 | 12:28 PM

ಅತಿ ಹೆಚ್ಚು ವಜ್ರಗಳಿಂದ ಅಂದರೆ 17,524 ವಜ್ರಗಳನ್ನು ಬಳಸಿ ತಯಾರಿಸಲಾದ ವಜ್ರದ ಕೈಗಡಿಯಾರ(​​​Diamonds Watch) ಗಿನ್ನೆಸ್ ವರ್ಲ್ಡ್ ರೆಕಾರ್ಡ್(Guinness World Records) ಪಡೆದುಕೊಂಡಿದೆ. ಈ ವಿಭಿನ್ನ ಕ್ರಿಯಾತ್ಮಕ ರೀತಿಯ ಪ್ರಯತ್ನಕ್ಕೆ ಕೈಹಾಕಿರುವುದು ಭಾರತದ ರೆನಾನಿ ಜ್ಯುವೆಲ್ಸ್. ಸುಮಾರು 11 ತಿಂಗಳ ಪ್ರಯತ್ನದ ನಂತರ ಈ ವಜ್ರದ ವಾಚ್​​​ ಸಿದ್ಧವಾಗಿದೆ. ಪ್ರಾರಂಭದಲ್ಲಿ ಸಾಕಷ್ಟು ಪರಿಕಲ್ಪನಾ ವಿನ್ಯಾಸಗಳನ್ನು ಪ್ರಯತ್ನಿಸಿ, ಧರಿಸಬಹುದಾದ ಹಾಗೂ ಆಕರ್ಷಣೀಯ ನೋಟವನ್ನು ನೀಡುವ ಒಂದು ಸುಂದರ ವಜ್ರಗಳ ಗಡಿಯಾರ ತಯಾರಿಸಿದ್ದು, ಇದು ನಮಗೆ ಸಂಪೂರ್ಣ ಹೊಸ ಅನುಭವವನ್ನು ನೀಡಿದೆ ಎಂದು ಮೀರತ್​ನ​​ ರೆನಾನಿ ಜ್ಯುವೆಲ್ಸ್ ಸಿಇಒ ಮತ್ತು ಸಂಸ್ಥಾಪಕ ಹರ್ಷಿತ್ ಬನ್ಸಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಾಚ್​​​ವ ವಿನ್ಯಾಸದಲ್ಲಿ 17,512 ಬಿಳಿ ವಜ್ರಗಳನ್ನು ಮತ್ತು 12 ಕಪ್ಪು ವಜ್ರಗಳನ್ನು ಇರಿಸಲಾಗಿದೆ. ಇದರಿಂದಾಗಿ ಈ ಹಿಂದೆ ವಿಶ್ವ ದಾಖಲೆ ಪಡೆದಿದ್ದ(ಡಿಸೆಂಬರ್ 2018) ಹಾಂಗ್ ಕಾಂಗ್​​ನ ಆರನ್ ಶಮ್ ಜ್ಯುವೆಲರಿ ಲಿಮಿಟೆಡ್ ತಯಾರಿಸಿದ 15,858 ವಜ್ರಗಳೊಂದಿಗೆ ಆಭರಣದ ದಾಖಲೆಯನ್ನು ಮುರಿದಿದೆ.  ಈ ಸ್ರಿಂಕಿಯಾ ವಾಚ್‌ನಲ್ಲಿ ಬಳಸಲಾದ ವಜ್ರಗಳನ್ನು ಇಂಟರ್ನ್ಯಾಷನಲ್ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಲ್ಯಾಬ್ (IGI) ಪ್ರಮಾಣಪತ್ರದಿಂದ ದೃಢೀಕರಿಸಲ್ಪಟ್ಟಿದೆ. ಇದು 373.30 ಗ್ರಾಂ ತೂಕ ಹೊಂದಿದ್ದು, ಧರಿಸಲು ಅನುಕೂಲವಾಗುವಂತೆ ತಯಾರಿಸಲಾಗಿದೆ.

ಇದನ್ನೂ ಓದಿ: ನೀವು ವೀಸಾ ಇಲ್ಲದೆ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು

ಪ್ರಾರಂಭದಲ್ಲಿ ಕೈಗಳಿಂದ ವಿನ್ಯಾಸಗೊಳಿಸಿದ್ದು, ನಂತರದ ವಿನ್ಯಾಸವನ್ನು ತ್ರಿಡಿಯಲ್ಲಿ, ಕಂಪ್ಯೂಟರ್​​ ಸಹಾಯದೊಂದಿಗೆ (CAD) ಮರುಸೃಷ್ಟಿಸಲಾಗಿದೆ. ಈ ವಾಚ್‌ಗೆ ಸ್ರಿಂಕಿಯಾ ಎಂದು ಹೆಸರಿಸಲಾಗಿದೆ. ಅಂದರೆ ಇದರ ಅರ್ಥ ಪ್ರಾಚೀನ ಭಾರತೀಯ ಪುರಾಣಗಳಿಂದ ಪ್ರೇರಿತವಾದ, ಸ್ರಿಂಕಿಯಾ ಎಂದರೆ ಹೂವು. ಇದು ಸಂಪತ್ತು ಮತ್ತು ಅದೃಷ್ಟದ ಭಾರತೀಯ ದೇವತೆ ಲಕ್ಷ್ಮಿ ಎಂದು ಹರ್ಷಿತ್ ಬನ್ಸಾಲ್ ಹೇಳಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂದಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:27 pm, Fri, 27 January 23

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ