ತೂಕ ನಷ್ಟದ ನಂತರ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಿದೆಯಾ?
ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ತೂಕ ನಷ್ಟದ ನಂತರ ಅನೇಕರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ತಜ್ಞರ ಪ್ರಕಾರ, ಈ ರೀತಿಯ ಕೂದಲು ಉದುರುವಿಕೆಯನ್ನು ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ನಾಲ್ಕು ತಿಂಗಳವರೆಗೆ ಕಂಡುಬರುವ ತಾತ್ಕಾಲಿಕ ಸಮಸ್ಯೆಯಾಗಿದೆ.
ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ತೂಕ ನಷ್ಟ(Weight loss) ದ ನಂತರ ಅನೇಕರಲ್ಲಿ ಕೂದಲು ಉದುರುವಿಕೆ(Hair Fall) ಯ ಸಮಸ್ಯೆ ಹೆಚ್ಚಾಗಿ ಕಂಡುಬುರುತ್ತಿದೆ. ಸಾಕಷ್ಟು ಜನರು ತಮ್ಮ ದೇಹದ ಹೆಚ್ಚಳ ತೂಕದಿಂದಾಗಿ ಅಸಮಾಧಾನವನ್ನು ಹೊಂದಿರುತ್ತಾರೆ. ಇದರಿಂದಾಗಿ ಸರಿಯಾದ ಆಹಾರ ಕ್ರಮವನ್ನು ರೂಡಿಸಿಕೊಳ್ಳದೇ ಅನಾರೋಗ್ಯಕರವಾಗಿ ತೂಕ ಕಳೆದುಕೊಳ್ಳುತ್ತಾರೆ. ಇದರಿಂದಾಗಿ ದೇಹಕ್ಕೆ ಸರಿಯಾದ ಕ್ರಮದಲ್ಲಿ ಪೋಷಣೆ ಸಿಗದೇ ಇರುವ ಕಾರಣ ತೂಕ ನಷ್ಟದ ನಂತರ ಕೂದಲು ಉದುರುವಿಕೆಯಂತಹ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ, ಈ ರೀತಿಯ ಕೂದಲು ಉದುರುವಿಕೆಯನ್ನು ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ನಾಲ್ಕು ತಿಂಗಳವರೆಗೆ ಕಂಡುಬರುವ ತಾತ್ಕಾಲಿಕ ಸಮಸ್ಯೆಯಾಗಿದೆ.
ತೂಕ ನಷ್ಟದ ನಂತರ ಕೂದಲು ಉದುರುವಿಕೆಗೆ ಪ್ರಮುಖ ಕಾರಣ:
ಆಹಾರದಲ್ಲಿನ ಬದಲಾವಣೆ, ನಿರ್ಬಂಧಿತ ಆಹಾರ ಸೇವನೆ, ಮಾನಸಿಕ ಒತ್ತಡ ಇಂತಹ ಜೀವನಶೈಲಿ ನಿಮ್ಮ ಕೂದಲು ಉದುರುವಿಕೆಗೆ ಕಾರಣವಾಗಬಹುದು. ತೂಕ ಕಳೆದು ಕೊಳ್ಳಲು ಸರಿಯಾದ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುವುದು. ಇದರಿಂದಾಗಿ ದೇಹಕ್ಕೆ ಪೌಷ್ಟಿಕಾಂಶದ ಕೊರತೆ ಉಂಟಾಗಬಹುದು. ಜೊತೆಗೆ ತೂಕ ಕಳೆದು ಕೊಳ್ಳಲೇ ಬೇಕು ಎಂಬ ಅತಿಯಾಗಿ ಒತ್ತಡ ನೀವು ಹಾಕುವುದರಿಂದ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಬಹುದು.
ತೂಕ ನಷ್ಟದ ನಂತರ ಕೂದಲ ಪೋಷಣೆಗಾಗಿ ಈ ಆಹಾರ ಕ್ರಮ ರೂಡಿಸಿ:
ಪ್ರೋಟೀನ್ ಭರಿತ ಆಹಾರ ಸೇರಿಸಿ:
ನಿಮ್ಮ ಆರೋಗ್ಯವನ್ನು ಕಾಪಾಡಲು ನಿಮ್ಮ ಆಹಾರದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಸೇರಿಸಿ. ಪ್ರೋಟೀನ್ ನಿಮ್ಮ ತೂಕ ನಷ್ಟ ಆಹಾರಕ್ಕೆ ಉತ್ತಮವಾಗಿದೆ ಆದರೆ ಕೂದಲಿನ ಬೇರುಗಳಲ್ಲಿ ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿಮಗೂ ರಾತ್ರಿ ಲೈಟ್ ಹಾಕಿಕೊಂಡು ಮಲಗುವ ಅಭ್ಯಾಸವಿದೆಯೇ, ಅನೇಕ ರೋಗಗಳಿಗೆ ಕಾರಣವಾಗಬಹುದು
ತೇವಾಂಶ ಅಗತ್ಯ:
ದೇಹದಿಂದ ವಿಷವನ್ನು ಹೊರಹಾಕಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇದು ತೂಕ ನಷ್ಟ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಬಲವಾದ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ದಿನಕ್ಕೆ 2 ಲೀಟರ್ ನೀರು ಕುಡಿಯಿರಿ.
ತ್ವರಿತ ತೂಕ ನಷ್ಟವನ್ನು ತಪ್ಪಿಸಿ:
ತೂಕ ನಷ್ಟದ ನಿರ್ಧಾರವನ್ನು ನೀವು ತೆಗೆದುಕೊಂಡಾಗ, ನೀವು ಮಾನಸಿಕವಾಗಿ ಸಿದ್ಧರಿರಬೇಕು. ನಿಮ್ಮಲ್ಲಿ ಸಾಕಷ್ಟು ಸಮಯ, ತಾಳ್ಮೆ ಮತ್ತು ಸಮರ್ಪಣೆ ತುಂಬಾ ಅಗತ್ಯವಾಗಿದೆ. ತ್ವರಿತವಾಗಿ ತೂಕ ಕಳೆದುಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ:
ಪ್ರತಿದಿನ ನಿಮ್ಮ ಆಹಾರ ಕ್ರಮದಲ್ಲಿ ಹಣ್ಣು ತರಕಾರಿಗಳನ್ನು ಸೇರಿಸಿ. ವಿಶೇಷವಾಗಿ ನಾರಿನಾಂಶವಿರುವ ಸೊಪ್ಪು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಇದು ನಿಮ್ಮ ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:49 am, Fri, 27 January 23