AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Postpartum Weight Loss: ಹೆರಿಗೆಯ ನಂತರ ತಕ್ಷಣ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಹೆರಿಯ ನಂತರ ನಟಿ ಆಲಿಯಾ ಭಟ್ ಫಿಟ್ನೆಸ್​​​ನಲ್ಲಿ ತೊಡಗಿಸಿಕೊಂಡಿದ್ದು, ಇದೀಗಾ ವರ್ಕ್​ ಔಟ್ ವಿಡಿಯೋ ಹಂಚಿಕೊಂಡಿದ್ದಾರೆ. ಆರೋಗ್ಯಕರ ಆಹಾರ ಕ್ರಮ ಹಾಗೂ ಮಾನಸಿಕವಾಗಿಯೂ ಆರೋಗ್ಯವಾಗಿರಲು ಒತ್ತಡದ ಜೀವನದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.

Postpartum Weight Loss: ಹೆರಿಗೆಯ ನಂತರ ತಕ್ಷಣ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
|

Updated on:Jan 22, 2023 | 10:44 AM

Share

ಹೆರಿಗೆಯ ನಂತರ ನಟಿ ಆಲಿಯಾ ಭಟ್ ಫಿಟ್ನೆಸ್​​​ನಲ್ಲಿ ತೊಡಗಿಸಿಕೊಂಡಿದ್ದು, ಇದೀಗಾ ವರ್ಕ್​ ಔಟ್ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳು ರಾಹಾ ಕಪೂರ್​​ಗೆ ಜನ್ಮ ನೀಡಿದ ನಂತರ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇನೆ. ಆರೋಗ್ಯಕರ ಆಹಾರ ಕ್ರಮ ಹಾಗೂ ಮಾನಸಿಕವಾಗಿಯೂ ಆರೋಗ್ಯವಾಗಿರಲು ಒತ್ತಡದ ಜೀವನದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ಹೆರಿಗೆಯ ನಂತರ ಪ್ರತಿಯೊಂದು ಮಹಿಳೆಯೂ ಬಯಸುವ ಹಾಗೆಯೇ ನಾನು ಕೂಡ ತೂಕ ಇಳಿಸಲು ಬಯಸುತ್ತೇನೆ, ಆದರೆ ಯಾವಾತ್ತೂ ನಿಮ್ಮ ದೇಹದ ಬಗ್ಗೆ ಅಸಮಾಧಾನ ಇಟ್ಟುಕೊಳ್ಳಬೇಡಿ. ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಈ ಸಮಯದಲ್ಲಿ ಮಾನಸಿಕವಾಗಿಯೂ ಆರೋಗ್ಯವಾಗಿರುವುದು ತುಂಬಾ ಅಗತ್ಯ ಎಂದು ಬಾಂಬೆ ಟೈಮ್ಸ್‌ಗೆ ಹೇಳಿಕೊಂಡಿದ್ದಾರೆ.

ಪ್ರಸವದ ನಂತರ ಸುರಕ್ಷಿತವಾಗಿ ತೂಕವನ್ನು ಕಳೆದುಕೊಳ್ಳಲು ಸಲಹೆ ಇಲ್ಲಿವೆ:

ಪ್ರಸವದ ನಂತರ ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಡಾ. ಬೋರ್ಚಾರ್ಡ್ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ.

ಸಮತೋಲಿತ ಆಹಾರ ಕ್ರಮ ರೂಡಿಸಿ:

ನೀವು ಸಾಮಾನ್ಯವಾಗಿ ಸೇವಿಸುವ ಆಹಾರ ಕ್ರಮದೊಂದಿಗೆ ಹಣ್ಣು ಹಾಗೂ ನಾರಿನಾಂಶವಿರುವ ಆಹಾರವನ್ನು ಸೇವಿಸಿ. ಆವಕಾಡೊ, ಚಿಯಾ ಬೀಜಗಳು ಅಥವಾ ಆಲಿವ್ ಎಣ್ಣೆಯಂತಹ ಕೊಬ್ಬಿನ ಆರೋಗ್ಯಕರ ಹಾಗೂ ದೇಹಕ್ಕೆ ತಂಪು ನೀಡುವ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ.

ಇದನ್ನೂ ಓದಿ: ಅತಿಯಾಗಿ ಚಿಂತಿಸುವುದರಿಂದ ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇದು ಆತಂಕದ ಅಸ್ವಸ್ಥತೆಯೇ?

ಯೋಗ ,ವ್ಯಾಯಾಮಕ್ಕೆ ಸಮಯ ಮೀಸಲಿಡಿ:

ಪ್ರಸವದ ನಂತರ ತೂಕ ಹೆಚ್ಚಾಗುವುದು ಮಾತ್ರವಲ್ಲದೇ ಮಾನಸಿಕವಾಗಿಯೂ ಕುಗ್ಗಿಹೋಗುತ್ತಾರೆ. ಆದ್ದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಲು ಯೋಗ ಹಾಗೂ ವ್ಯಾಯಾಮವನ್ನು ಮಾಡುವುದು ಅಗತ್ಯವಾಗಿದೆ. ಪ್ರತಿದಿನ ಇದಕ್ಕಾಗಿ ಒಂದಷ್ಟು ಹೊತ್ತು ಸಮಯ ಮೀಸಲಿಡಿ.

ಸ್ವಯಂ ಕಾಳಜಿಯ ಬಗ್ಗೆ ಮರೆಯಬೇಡಿ:

ಪ್ರಸವದ ನಂತರ ತಾಯಂದಿರು ಮಗುವಿನ ಯೋಗಕ್ಷೇಮಕ್ಕಾಗಿ ತುಂಬಾ ತ್ಯಾಗ ಮಾಡುತ್ತಾರೆ ಎಂದು ಡಾ. ಬೋರ್ಚಾರ್ಡ್ ಹೇಳುತ್ತಾರೆ. ಇದರಿಂದ ಅವರ ಆರೋಗ್ಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಸ್ವಯಂ ಕಾಳಜಿಯ ಬಗ್ಗೆ ಮರೆಯಬೇಡಿ. ಈ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯವಾಗಿರುತ್ತದೆ. ಜೊತೆಗೆ ಪೌಷ್ಟಿಕಾಂಶದ ಆಹಾರ ಸೇವನೆ,ಕುಟುಂಬ ಅಥವಾ ಸ್ನೇಹಿತರಿಂದ ಸಹಾಯವನ್ನು ಪಡೆಯಲು ಮರೆಯದಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:43 am, Sun, 22 January 23