ಒಂದೇ ದಿನ ರಿಲೀಸ್ ಆಗಲಿದೆ ಆಲಿಯಾ ಭಟ್​-ರಣಬೀರ್​ ಸಿನಿಮಾ; ಬಾಕ್ಸ್​ ಆಫೀಸ್​​ನಲ್ಲಿ ಅಪರೂಪದ ಕ್ಲ್ಯಾಶ್

‘ಅನಿಮಲ್’ ಸಿನಿಮಾ ಸ್ವತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ಅದೇ ರೀತಿ ‘ಹಾರ್ಟ್​ ಆಫ್​ ಸ್ಟೋನ್’ ಸಿನಿಮಾ ಕೂಡ ಅದೇ ದಿನಾಂಕದಂದು ರಿಲೀಸ್ ಆಗಲಿದೆ.

ಒಂದೇ ದಿನ ರಿಲೀಸ್ ಆಗಲಿದೆ ಆಲಿಯಾ ಭಟ್​-ರಣಬೀರ್​ ಸಿನಿಮಾ; ಬಾಕ್ಸ್​ ಆಫೀಸ್​​ನಲ್ಲಿ ಅಪರೂಪದ ಕ್ಲ್ಯಾಶ್
ರಣಬೀರ್ ಕಪೂರ್​-ಆಲಿಯಾ ಭಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 19, 2023 | 10:03 AM

ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ಈಗ ಪತಿ-ಪತ್ನಿ. ಈ ದಂಪತಿಗೆ ಮುದ್ದಾದ ಮಗು ಜನಿಸಿದೆ. ಆಲಿಯಾ ಭಟ್ (Alia Bhatt) ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರು ‘ಅನಿಮಲ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಆಲಿಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ. ಈಗ ಅವರ ನಟನೆಯ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್​ ಸ್ಟೋನ್​’ ರಿಲೀಸ್​ಗೆ ರೆಡಿ ಇದೆ. ವಿಶೇಷ ಎಂದರೆ, ರಣಬೀರ್ ಕಪೂರ್ ಅಭಿನಯದ ‘ಅನಿಮಲ್​’ ಸಿನಿಮಾ ಜತೆಗೆ ಈ ಚಿತ್ರ ಸ್ಪರ್ಧೆಗೆ ಇಳಿಯುತ್ತಿದೆ. ಈ ಮೂಲಕ ಪತಿ-ಪತ್ನಿ ಸಿನಿಮಾ ಒಂದೇ ದಿನ ತೆರೆಗೆ ಬಂದಂತೆ ಆಗುತ್ತಿದೆ.

ರಣಬೀರ್ ಕಪೂರ್ ಅವರು ಬಾಲಿವುಡ್​​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಕಪೂರ್ ಕುಟುಂಬ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಬೇಡಿಕೆ ಇದೆ. ಅದೇ ರೀತಿ ಆಲಿಯಾ ಕೂಡ ಗುರುತಿಸಿಕೊಂಡಿದ್ದಾರೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ. ಮರ ಸುತ್ತುವ ಪಾತ್ರಕ್ಕೆ ಅವರು ಹೆಚ್ಚು ಆದ್ಯತೆ ಕೊಡುವುದಿಲ್ಲ. ಈಗ ಅವರ ನಟನೆಯ ‘ಹಾರ್ಟ್​ ಆಫ್​ ಸ್ಟೋನ್​’ ತಂಡ ಟೀಸರ್​ ಮೂಲಕ ರಿಲೀಸ್ ದಿನಾಂಕ ಘೋಷಣೆ ಮಾಡಿದೆ.

‘ಅನಿಮಲ್’ ಸಿನಿಮಾ ಸ್ವತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ಅದೇ ರೀತಿ ‘ಹಾರ್ಟ್​ ಆಫ್​ ಸ್ಟೋನ್’ ಸಿನಿಮಾ ಕೂಡ ಅದೇ ದಿನಾಂಕದಂದು ರಿಲೀಸ್ ಆಗಲಿದೆ. ಹಾಲಿವುಡ್​ ಸಿನಿಮಾಗಳಿಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಹೀಗಾಗಿ ‘ಹಾರ್ಟ್​ ಆಫ್​ ಸ್ಟೋನ್’ ಸಿನಿಮಾಗೆ ಭಾರತದಲ್ಲಿ ಹೆಚ್ಚು ಚಿತ್ರಮಂದಿರ ಸಿಗಬಹುದು. ಬಾಕ್ಸ್ ಆಫೀಸ್​​ನಲ್ಲಿ ಹಲವು ಕ್ಲ್ಯಾಶ್​ಗಳು ಆಗಿವೆ. ಈಗ ಪತಿ-ಪತ್ನಿ ಸಿನಿಮಾಗಳ ಮಧ್ಯೆ ಕಾಂಪಿಟೇಷನ್ ಏರ್ಪಟ್ಟಿದ್ದು, ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.  

ಇದನ್ನೂ ಓದಿ
Image
Alia Bhatt: ಪತ್ನಿ ಆಲಿಯಾ ಗರ್ಭಿಣಿ, ಆದ್ರೆ ಬೇರೆ ನಟಿ ಜೊತೆ ಹೆಚ್ಚಿತು ರಣಬೀರ್​ ಹಾಟ್ನೆಸ್​; ಎಚ್ಚರಿಕೆ ನೀಡಿದ ಫ್ಯಾನ್ಸ್
Image
Brahmastra: ಶಿವ ಎಂಬ ಪಾತ್ರ ಮಾಡಿ, ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ರಣಬೀರ್​; ಇದು ‘ಬ್ರಹ್ಮಾಸ್ತ್ರ’ ಎಡವಟ್ಟು
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಇದನ್ನೂ ಓದಿ: Ranbir Kapoor: ‘ಅನಿಮಲ್​’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ರಗಡ್​ ಅವತಾರದಲ್ಲಿ ರಣಬೀರ್​ ಕಪೂರ್​

‘ಅನಿಮಲ್’ ಸಿನಿಮಾದಲ್ಲಿ ರಣಬೀರ್​​ಗೆ ಜತೆಯಾಗಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2017ರಲ್ಲಿ ತೆರೆಗೆ ಬಂದ ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಇವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದೇ ಚಿತ್ರವನ್ನು ಹಿಂದಿಗೆ ‘ಕಬೀರ್ ಸಿಂಗ್​’ ಹೆಸರಲ್ಲಿ ಅವರು ರಿಮೇಕ್ ಮಾಡಿದ್ದರು. ಅದು ಕೂಡ ಯಶಸ್ಸು ಕಂಡಿತ್ತು. ಈ ಕಾರಣಕ್ಕೆ ‘ಅನಿಮಲ್​’ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Thu, 19 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ