Hair fall: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಪ್ರಾಣಾಯಾಮ ಮತ್ತು ಯೋಗಾಸನ ಪರಿಣಾಮಕಾರಿ

ಕೂದಲಿನ ನಷ್ಟವು ಸೌಂದರ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಸಮಸ್ಯೆ ನಿವಾರಣೆಗೆ ಕೆಲವು ಯೋಗಾಸನಗಳು ಮತ್ತು ಪ್ರಾಣಾಯಾಮಗಳ ಸಹಕಾರಿಯಾಗಲಿವೆ.

TV9 Web
| Updated By: Rakesh Nayak Manchi

Updated on: Oct 31, 2022 | 6:30 AM

 ವೇಗದ ಜೀವನಶೈಲಿಯು ನಮಗೆ ಹಿಂದೆಂದಿಗಿಂತಲೂ ಉತ್ತಮ ಜೀವನಮಟ್ಟವನ್ನು ನೀಡಿದೆ. ಆದರೆ ಈ ಜೀವನಶೈಲಿಯು ಕೆಲವು ನ್ಯೂನತೆಗಳನ್ನು ಹೊಂದಿದೆ. ಈ ನ್ಯೂನತೆಗಳಲ್ಲಿ ಅನೇಕ ರೋಗಗಳು ಸಹ ಒಳಗೊಂಡಿದೆ. ಇವುಗಳಲ್ಲಿ ಕೂದಲು ಉದುರುವ ಸಮಸ್ಯೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲಾ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ. ಇಂದು ನಾವು ನಿಮಗೆ ಕೆಲವು ಯೋಗಾಸನಗಳು ಮತ್ತು ಪ್ರಾಣಾಯಾಮಗಳನ್ನು ಹೇಳುತ್ತೇವೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ನೆರವಾಗಬಹುದು.

Health tips yoga asanas and pranayama can stop hair fall solution in kannada

1 / 5
ನಾಡಿ ಶೋಧನ ಪ್ರಾಣಾಯಾಮ: ಇದರ ನಿರಂತರ ಅಭ್ಯಾಸವು ಹೃದ್ರೋಗಗಳು, ಅಸ್ತಮಾ, ಸಂಧಿವಾತ, ಖಿನ್ನತೆ, ಮೈಗ್ರೇನ್, ಒತ್ತಡ ಮತ್ತು ಕಣ್ಣಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಲಿದೆ.

Health tips yoga asanas and pranayama can stop hair fall solution in kannada

2 / 5
Health tips yoga asanas and pranayama can stop hair fall solution in kannada

ಕಪಾಲಭಾತಿ ಪ್ರಾಣಾಯಾಮ: ಪ್ರತಿದಿನ 10 ನಿಮಿಷಗಳ ಕಾಲ ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಮೆದುಳಿನ ಜೀವಕೋಶಗಳು ಹೆಚ್ಚು ಆಮ್ಲಜನಕವನ್ನು ಪಡೆಯುತ್ತವೆ. ಇದು ನಮ್ಮ ನರಮಂಡಲಕ್ಕೂ ಒಳ್ಳೆಯದು.

3 / 5
Health tips yoga asanas and pranayama can stop hair fall solution in kannada

ವಜ್ರಾಸನ: ಈ ಆಸನವನ್ನು ಡೈಮಂಡ್ ಪೋಸ್ ಎಂದೂ ಕರೆಯುತ್ತಾರೆ. ಈ ಆಸನವನ್ನು ಊಟದ ನಂತರ ತಕ್ಷಣವೇ ಮಾಡಬಹುದು.

4 / 5
Health tips yoga asanas and pranayama can stop hair fall solution in kannada

ಸರ್ವಾಂಗಾಸನ: ಈ ಆಸನವು ದೇಹದ ಪ್ರತಿಯೊಂದು ಭಾಗಕ್ಕೂ ಪ್ರಯೋಜನಕಾರಿಯಾದ ಕಾರಣ ಈ ಆಸನಕ್ಕೆ ಸರ್ವಾಂಗಾಸನ ಎಂಬ ಹೆಸರು ಬಂದಿದೆ. ಸರ್ವಾಂಗಾಸನದ ಅಭ್ಯಾಸದಿಂದ ಥೈರಾಯ್ಡ್ ಗ್ರಂಥಿಯು ಪೋಷಣೆಯನ್ನು ಪಡೆಯುತ್ತದೆ.

5 / 5
Follow us