Trending News: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಮಾರಾಟ! ಎಷ್ಟಕ್ಕೆ ಗೊತ್ತಾ?
ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ದಿ ಇಂಟ್ರೆಪಿಡ್ ಅನ್ನು 1.1 ಮಿಲಿಯನ್ ಬ್ರಿಟಿಷ್ ಪೌಂಡ್‌ಗೆ ಮಾರಾಟ ಮಾಡಲಾಗಿದೆ. ಬಾಟಲಿಯನ್ನು ಅನಾಮಧೇಯ ಅಂತರಾಷ್ಟ್ರೀಯ ಸಂಗ್ರಾಹಕನಿಗೆ ಮಾರಲಾಗಿದೆ.
ವಿಶ್ವದ ಅತಿ ದೊಡ್ಡ ವಿಸ್ಕಿ (Whisky) ಬಾಟಲ್ ದಿ ಇಂಟ್ರೆಪಿಡ್ (Intrepid) ಅನ್ನು 1.1 ಮಿಲಿಯನ್ ಬ್ರಿಟಿಷ್ ಪೌಂಡ್ (10.76 ಕೋಟಿ)ಗೆ ಮಾರಾಟ ಮಾಡಲಾಗಿದೆ. 1989 ರಿಂದ 32 ವರ್ಷಗಳ ಕಾಲ ಸ್ಕಾಟ್ಲೆಂಡ್‌ನ ಮೆಚ್ಚುಗೆ ಪಡೆದ ಮಕಲನ್ ಡಿಸ್ಟಿಲರಿಯಲ್ಲಿ ಹರಾಜು ಇಡಲಾಗಿತ್ತು. ಮೇ 25, 2022 ರಂದು ಬಾಟಲಿಯನ್ನು ಹರಾಜಿನಲ್ಲಿ ಇಡಲಾಗಿದ್ದು, ಬಾಟಲಿಯನ್ನು ಅನಾಮಧೇಯ ಅಂತಾರಾಷ್ಟ್ರೀಯ ಸಂಗ್ರಾಹಕನಿಗೆ ಮಾರಲಾಗಿದೆ.
ಪಾನೀಯ ಕಂಪನಿ ಡಂಕನ್ ಟೇಲರ್ ಸ್ಕಾಚ್ ವಿಸ್ಕಿಯಿಂದ 2021ರಲ್ಲಿ 5 ಅಡಿ ಮತ್ತು 11 ಇಂಚು ಉದ್ದದ ಕಂಟೇನರ್‌ನಲ್ಲಿ ಬಾಟಲಿ ಮಾಡಲಾಯಿತು. ಸೆಪ್ಟೆಂಬರ್ 9, 2021 ರಂದು, ಬಾಟಲಿಯು ವಿಶ್ವದ ಅತಿದೊಡ್ಡ ಬಾಟಲಿ ಸ್ಕಾಚ್ ವಿಸ್ಕಿ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣೀಕರಣವನ್ನು ಪಡೆಯಿತು. ಈ ಬಾಟಲಿಯನ್ನು ಲಿಯಾನ್ ಮತ್ತು ಟರ್ನ್‌ಬುಲ್‌ನಿಂದ, ಸ್ಕಾಟ್‌ಲ್ಯಾಂಡ್ ಮೂಲದ ಹರಾಜು ಮನೆಯಲ್ಲಿ ಇಟ್ಟು ಹರಾಜು ಹಾಕಿ ಮರಾಲಾಗಿದೆ.
ಇದನ್ನೂ ಓದಿ: Trending: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ
ಇಂಟ್ರೆಪಿಡ್ ಬಾಟಲಿಯು 311 ಲೀಟರ್ ವಿಸ್ಕಿಯನ್ನು ಹೊಂದಿದೆ. ಬಾಟಲಿಯ ಮೇಲೆ ಓಲಿ ಹಿಕ್ಸ್, ಸರ್ ರನುಲ್ಫ್ ಫಿಯೆನ್ನೆಸ್, ವಿಲ್ ಕೋಪ್‌ಸ್ಟೇಕ್, ಡ್ವೇನ್ ಫೀಲ್ಡ್ಸ್ ಮತ್ತು ಕರೆನ್ ಡಾರ್ಕ್ ಮುಂತಾದ ವಿಶ್ವದ 11 ಅತ್ಯಂತ ಪ್ರಸಿದ್ಧ ಪರಿಶೋಧಕರ ಭಾವಚಿತ್ರಗಳಿವೆ. ಕಂಪನಿಯು ಮಕಲನ್ ಡಿಸ್ಟಿಲರಿಯಲ್ಲಿ 32 ವರ್ಷ ವಯಸ್ಸಿನ 12 ಬ್ಯಾರೆಲ್ ಅನ್ನು ಬಿಡುಗಡೆ ಮಾಡಲಾಯಿತು.
ದಿ ಸ್ಪಿರಿಟ್ಸ್ ಬ್ಯುಸಿನೆಸ್‌ನೊಂದಿಗೆ ಲಿಯಾನ್ ಮತ್ತು ಟರ್ನ್‌ಬುಲ್‌ನ ವ್ಯವಸ್ಥಾಪಕ ನಿರ್ದೇಶಕ ಗೇವಿನ್ ಸ್ಟ್ರಾಂಗ್ ಮಾತನಾಡಿ, “ವಿಶ್ವದ ಅತಿದೊಡ್ಡ ಬಾಟಲಿಯ ಸ್ಕಾಚ್ ವಿಸ್ಕಿಯ ನೇತೃತ್ವದ ಇಂಟ್ರೆಪಿಡ್ ಕಲೆಕ್ಷನ್ ಹೆಚ್ಚು ಜಾಗತಿಕ ಆಸಕ್ತಿಯನ್ನು ಆಕರ್ಷಿಸಿದೆ. ನಂಬಲಾಗದಷ್ಟು ಉತ್ತೇಜಕ ಯೋಜನೆಯಾಗಿದೆ ಮತ್ತು ಲಿಯಾನ್ ಮತ್ತು ಟರ್ನ್‌ಬುಲ್‌ನಲ್ಲಿ ನಡೆದ ಹರಾಜು ಯಶಸ್ವಿಯಾಗಿದೆ ಎಂದು ಸಂತೋಷಪಡುತ್ತೇವೆ.
ಇದನ್ನೂ ಓದಿ: Trending: ‘ದಿ ಕಂಜ್ಯೂರಿಂಗ್’ ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್ಗೆ ಮಾರಾಟ!
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Tue, 31 May 22