ವಿಶ್ವದ ಅತ್ಯಂತ ಹಿರಿಯ ಪ್ಯಾರಾಚೂಟರ್‌ ಎಂಬ ದಾಖಲೆ ನಿರ್ಮಿಸಿದ 103 ವರ್ಷದ ಅಜ್ಜಿ

103 ವರ್ಷದ ಅಜ್ಜಿಯೊಬ್ಬರು ಟಂಡೆಮ್ ಪ್ಯಾರಾಚೂಟ್​ನಲ್ಲಿ ಯಶಸ್ವಿಯಾಗಿ ಜಿಗಿಯುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅವರು 103 ವರ್ಷ ಮತ್ತು 181 ದಿನಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

ವಿಶ್ವದ ಅತ್ಯಂತ ಹಿರಿಯ ಪ್ಯಾರಾಚೂಟರ್‌ ಎಂಬ ದಾಖಲೆ ನಿರ್ಮಿಸಿದ 103 ವರ್ಷದ ಅಜ್ಜಿ
ಸ್ವೀಡಿಷ್ ಅಜ್ಜಿ ಲಾರ್ಸನ್
Follow us
TV9 Web
| Updated By: Rakesh Nayak Manchi

Updated on:May 31, 2022 | 11:52 AM

ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತೆ 103 ವರ್ಷದ ಅಜ್ಜಿಯೊಬ್ಬರು ಟಂಡೆಮ್ ಪ್ಯಾರಾಚೂಟ್​ (Tandem Parachute)ನಲ್ಲಿ ಯಶಸ್ವಿಯಾಗಿ ಜಿಗಿಯುವ (Jump) ಮೂಲಕ ದಾಖಲೆ (Record)ಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವದ ಅತ್ಯಂತ ಹಿರಿಯ ಪ್ಯಾರಾಚೂಟರ್​ಗಾಗಿ ದಾಖಲೆ ನಿರ್ಮಿಸಿದ್ದಾರೆ. ರುಟ್ ಲಾರ್ಸನ್ ಸ್ವೀಡನ್‌ನ ಮೊಟಾಲಾದಲ್ಲಿ ಪ್ಯಾರಾಚೂಟಿಸ್ಟ್ ಜೋಕಿಮ್ ಜೋಹಾನ್ಸನ್‌ ಜೊತೆ ಜಿಗಿಯುವ ಮೂಲಕ ಸ್ವೀಡಿಷ್ ಅಜ್ಜಿ ಲಾರ್ಸನ್ ಈ ಸಾಧನೆ ಮಾಡಿ ವಿಶ್ವಮಟ್ಟದಲ್ಲಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್

ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಹಳೆಯ ಗಾದೆ ನಿಜ ಎಂದು ಸಾಬೀತುಪಡಿಸಿದ ಸ್ವೀಡಿಷ್ ಅಜ್ಜಿಯ ಪ್ಯಾರಚೂಟ್​ ಹಾರಾಟವನ್ನು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಏರ್​ಫೀಲ್ಡ್​ನಿಂದ ವೀಕ್ಷಿಸಿದರು. ಯಶಸ್ವಿಯಾಗಿ ಆಕಾಶದಿಂದ ಭೂಮಿಗೆ ಇಳಿಯುತ್ತಿದ್ದಂತೆ  ಲಾರ್ಸನ್ ಪಕ್ಕಕ್ಕೆ ಸಹಾಯಕರು ದಾವಿಸಿ ಪರೀಕ್ಷಿಸುತ್ತಾರೆ.

ರೋಮಾಂಚಕ ಅನುಭವದ ನಂತರ ಸುದ್ದಿ ಸಂಸ್ಥೆ ಟಿಟಿ ಜೊತೆ ಮಾತನಾಡಿದ ಅಜ್ಜಿ, ”ನಾನು ಬಹಳ ಸಮಯದಿಂದ ಈ ಬಗ್ಗೆ ಯೋಚಿಸುತ್ತಿದ್ದೆ. ಇಂದು ಯೋಚಿಸಿದಂತೆ ನಡೆಯಿತು. ಮೇಲಿಂದ ಕೆಳಗೆ ಇಳಿಯುವುದು ಇಷ್ಟವಾಯಿತು ಮತ್ತು ಹಾರಾಟ ತುಂಬಾ ಸಂತೋಷವನ್ನು ನೀಡಿದೆ” ಎಂದರು.

ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ

”ನಾನು ಇದನ್ನು ಎಂದಿಗೂ ಮಾಡಿಲ್ಲ. 100 ವರ್ಷಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ನಾನು ಅದನ್ನು ಮಾಡಬೇಕು ಎಂದು ಭಾವಿಸಿದ್ದೆ. ಇದು ಭಯಾನಕವಾಗಿದೆ” ಎಂದು ಅವರು ಹಾರಾಟದ ನಂತರ ಸ್ಥಳೀಯ ಟಿವಿ ಸ್ಟೇಷನ್‌ಗೆ ತಿಳಿಸಿದರು.

ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿಯೊಬ್ಬರು ಅಜ್ಜಿಯ ಜಿಗಿತವನ್ನು ದಾಖಲಿಸಿದ್ದು, ಅವರು 103 ವರ್ಷ ಮತ್ತು 181 ದಿನಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಈ ತಿಂಗಳ ಆರಂಭದಲ್ಲಿ ಮಹಿಳೆಯೊಬ್ಬರು ತನ್ನ ಜೀವನದಲ್ಲಿ ಮೊದಲ ಬಾರಿಗೆ ರೇಮಂಡ್ ಸುಲ್ಲಿವಾನ್ ಸ್ಕೈಡೈವ್ ಸೆಬಾಸ್ಟಿಯನ್‌ನಲ್ಲಿ ಸ್ಕೈಡೈವಿಂಗ್ ಪ್ರಯತ್ನಿಸುವ ಮೂಲಕ ತನ್ನ 100 ನೇ ಹುಟ್ಟುಹಬ್ಬವನ್ನು ಗುರುತಿಸಿಕೊಂಡರು.

ವಿಡಿಯೋ ನೋಡಿ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Tue, 31 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ