Viral video: ಹುತಾತ್ಮ ಯೋಧನ ದೇಶಭಕ್ತಿ ಗೀತೆಯ ಭಾವೋದ್ರಿಕ್ತ ವಿಡಿಯೋ ವೈರಲ್

TV9 Digital Desk

| Edited By: Rakesh Nayak Manchi

Updated on:May 31, 2022 | 1:28 PM

ಜಮ್ಮುಕಾಶ್ಮೀರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರಿಂದ ಹತ್ಯೆಗೀಡಾಗಿದ್ದ ಪೊಲೀಸ್ ಮುದ್ದಾಸಿರ್ ಅಹ್ಮದ್ ಅವರು ದೇಶಭಕ್ತಿ ಗೀತೆಗೆ ಡಬ್​ಸ್ಮಾಶ್ ಮಾಡಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

Viral video: ಹುತಾತ್ಮ ಯೋಧನ ದೇಶಭಕ್ತಿ ಗೀತೆಯ ಭಾವೋದ್ರಿಕ್ತ ವಿಡಿಯೋ ವೈರಲ್
ಮುದ್ದಾಸಿರ್ ಅಹ್ಮದ್

ಜಮ್ಮುಕಾಶ್ಮೀರ (Jammu Kashmir)ದಲ್ಲಿ ನಡೆದ ಎನ್​ಕೌಂಟರ್​ (Encounter)ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರಿಂದ ಹತ್ಯೆಗೀಡಾಗಿದ್ದ ಪೊಲೀಸ್ ಒಬ್ಬರು ದೇಶಭಕ್ತಿ ಗೀತೆಗೆ ಡಬ್​ಸ್ಮಾಶ್ ಮಾಡಿದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಅವರ ನಟನೆ ಮತ್ತು ಹಾಡು ದೇಶವಾಸಿಗಳ ಮನಸು ಕರಗಿಸುವಂತಿದೆ. ಮೇ 25 ರಂದು ಬಾರಾಮುಲ್ಲಾದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುದ್ದಾಸಿರ್ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಇದಕ್ಕೂ ಹಿಂದೆ ಅವರು ಮಾಡಿದ್ದ ರೀಲ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.

ವೀಡಿಯೊದಲ್ಲಿ, ಅವರು 1986 ರ ಚಲನಚಿತ್ರ ಕರ್ಮದಿಂದ ಜನಪ್ರಿಯವಾದ ‘ದಿಲ್ ದಿಯಾ ಹೈ, ಜಾನ್ ಭಿ ದೆಂಗೆ’ ಎಂಬ ಹಾಡಿಗೆ ನಟನೆ ಮಾಡುವುದನ್ನು ಕಾಣಬಹುದು. ವೀಡಿಯೊವನ್ನು ಹಂಚಿಕೊಂಡ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್, ಹಾಡಿನ ಪ್ರತಿ ಪದವನ್ನು ಅರ್ಥೈಸಿದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, RIP ಹೀರೋ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡಾಗಿನಿಂದ ಇಂದಿನವರೆಗೆ (ಮಂಗಳವಾರದವರೆಗೆ) ವಿಡಿಯೋ 7,92,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಕಡಲತೀರದ ಬಂಡೆಯ ಮೇಲೆ ವಿಮಾನದ ರೆಕ್ಕೆಯಲ್ಲಿ ನಡೆಯುವ ಛಾಯಗ್ರಾಹಕನ ಸಾಹಸದ ವಿಡಿಯೋ ವೈರಲ್

ಹುತಾತ್ಮ ಮಗನ ಬಗ್ಗೆ ಮಾತನಾಡಿದ ತಂದೆ ಮಕ್ಸೂದ್ ಅಹ್ಮದ್,”ನನ್ನ ಮಗನ ತ್ಯಾಗ ಹಲವಾರು ಜೀವಗಳನ್ನು ಉಳಿಸಿದೆ. ಅವನು ಎಂದಿಗೂ ಹಿಂತಿರುಗುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅವನ ತ್ಯಾಗದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಮಗ ದೇಶಕ್ಕಾಗಿ ಪ್ರಾಣವನ್ನು ನೀಡಿದ್ದಾನೆ. ಅವರು ಭಯೋತ್ಪಾದಕರನ್ನು ತಪ್ಪಿಸಿಕೊಳ್ಳಲು ಬಿಡಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಾಮಕಿಯಲ್ಲಿ  ಮೂವರು ಉಗ್ರರು ಹತರಾಗಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada