ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಛಾಯಗ್ರಾಹಕರೊಬ್ಬರು ಕಡಲತೀರದ ಬಳಿ ನಿವೃತ್ತ ಬೋಯಿಂಗ್ ವಿಮಾನದ ರೆಕ್ಕೆಯ ಮೇಲೆ ನಡೆದುಕೊಂಡು ಹೋಗುವ ಸಾಹಸದ ವಿಡಿಯೋ ವೈರಲ್ ಆಗುತ್ತಿದೆ. ಬಾಲಿಯಲ್ಲಿ ಕಡಲತೀರದ ಬಲು ಎತ್ತರದ ಬಂಡೆಯ ಮೇಲೆ ಈ ವಿಮಾನವನ್ನು ಇಡಲಾಗಿದ್ದು, ರೆಕ್ಕೆಯು ಚಾಚಿರುವ ಕಡೆ ನೂರಾರು ಅಡಿಗಳಷ್ಟು ಆಳ ಹೊಂದಿದೆ. ಇದರ ರೆಕ್ಕೆಯ ಅಂಚಿನವರೆಗೆ ಛಾಯಗ್ರಾಹಕರು ನಡೆದುಕೊಂಡು ಹೋಗುತ್ತಾರೆ.
ಒಂದಷ್ಟು ಮಂದಿಗೆ ಎತ್ತರದ ಪ್ರದೇಶಕ್ಕೆ ಹೋಗುವುದೆಂದರೆ ಭಯ. ಇಂಥವರು ಈ ವಿಡಿಯೋ ನೋಡಿದರೆ ನಿಬ್ಬೆರಗಾಗುವುದು ಖಂಡಿತ. ಇದರ ವಿಡಿಯೋವನ್ನು earthpix ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 11 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್ನ ಮೃಗಾಲಯ
“koming.darmawan ಎಂಬವರು ಕಡಲತೀರದ ಬಂಡೆಯ ಮೇಲೆ ಇರಿಸಲಾಗಿರುವ ಈ ನಿವೃತ್ತ ಬೋಯಿಂಗ್ ವಿಮಾನವನ್ನು ಅನ್ವೇಷಿಸಿದ್ದಾರೆ. ಇದನ್ನು ಉಲುವಾಟು ಬದುಂಗ್ ರೀಜೆನ್ಸಿಯ ನ್ಯಾಂಗ್-ನ್ಯಾಂಗ್ ಬೀಚ್ ಬಳಿ ಪ್ರವಾಸಿ ವಸತಿಗೃಹವಾಗಿ ಪರಿವರ್ತಿಸಲಾಗುವುದು” ಎಂದು ಟ್ರಾವೆಲ್ ಬ್ಲಾಗ್ ಬರೆದುಕೊಂಡಿದೆ.
View this post on Instagram
ನೆಟ್ಟಿಜನ್ಗಳು ವಿಡಿಯೋ ವೀಕ್ಷಣೆ ಮಾಡಿದ ನಂತರ ಅವರ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ನಲ್ಲಿ ಹಂಚಿಕೊಂಡಿದ್ದು, ಓರ್ವ ಇನ್ಸ್ಟಾಗ್ರಾಮ್ ಬಳಕೆದಾರ “ನಾನು ನಡೆಯುತ್ತಿದ್ದರೆ ನಾನು ನೇರವಾಗಿ ಕೆಳಗೆ ಬೀಳುತ್ತೇನೆ” ಎಂದು ಹೇಳಿದ್ದಾರೆ. ಹೀಗೆ ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Trending News: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಮಾರಾಟ! ಎಷ್ಟಕ್ಕೆ ಗೊತ್ತಾ?
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪು ಬಳಿಕ ಬಸವಣ್ಣನ ಪಠ್ಯ ಪರಿಷ್ಕರಣೆಯ ಚರ್ಚೆ ಆರಂಭ; ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ