Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ

Run : ಹಾಗೆ ನೋಡಿದರೆ ಎಷ್ಟೆಲ್ಲ ಬಗೆಯುಂಟು ಇದರಲ್ಲಿ ಜಾಗಿಂಗ್, ಸ್ಲೋ ರನ್ನಿಂಗ್, ಮೀಡಿಯಂ ಪೇಸ್, ಮ್ಯಾರಥಾನ್, ಸ್ಪೀಡ್ ಸ್ಟರ್ಸ್, ಎಂಡ್ಯೂರನ್ಸ್, ಮಾನ್ಸ್ಟರ್ಸ್, ಕೊಂಬೋ! ಎಲ್ಲವೂ ಓಟಗಳೇ. ನಮ್ಮಿಂದ ಯಾವುದು ಸಾಧ್ಯವೋ ಅದನ್ನು ಮಾಡಬಾರದೇ?

Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ
ಲೇಖಕಿ ಜಯಶ್ರೀ ದೇಶಪಾಂಡೆ
Follow us
ಶ್ರೀದೇವಿ ಕಳಸದ
|

Updated on:Jun 01, 2022 | 11:38 AM

Global Running Day 2022 : ಕನಸೆಂದುಕೊಂಡರೆ ಕನಸಾಗಲಿಕ್ಕಿಲ್ಲ. ನನಸಾಗದ್ದು ಕನಸೂ ಆಗದು. ಹನ್ನೊಂದರೊಳಗಿನ ವಯಸ್ಸಿನ ಹುಡುಗಿ ಶಾಲೆಯ ಓಟದ ಸ್ಪರ್ಧೆಗೆ ಹೆಸರು ಕೊಟ್ಟಾಗಿತ್ತು.‌ ಪ್ರಾಕ್ಟೀಸು? ಆಗೀಗ ಕೋಟೆ ಗೋಡೆಬದಿಯ ಉದ್ದಾನುದ್ದದ ಕೆಮ್ಮಣ್ಣಿನ ರಸ್ತೆಯಲ್ಲಿ ತಮ್ಮನೊಂದಿಗೆ ರೇಸ್ ಕಟ್ಟಿದ್ದು. ಆದರೇನು? ಓಟದಲ್ಲಿ ಎರಡು ಕಾಲುಗಳ ಬಲಕ್ಕೆ ಮಹತ್ವ ಅಷ್ಟೇ. ಸೋಲು ಗೆಲುವಿನ ಓಟ ಅಲ್ಲ ಅದು, ಮನಸ್ಸು ಬಂದಷ್ಟು ದೂರ… ಬೇಡ ಅನಿಸಿದರೆ ವಾಪಸು! ಸ್ಟಾರ್ಟಿಂಗ್ ಲೈನ್- ರೆಡೀ- ಗೋ, ಫಿನಿಶ್ ಲೈನಿನ ಬಿಳಿ ಸುಣ್ಣದ ಪಟ್ಟೆಸಾಲೇ ಕಾಲುಗಳ ಗುರಿ.‌ ಊಂಹೂಂ ಪರಿಚಯವೇ ಇಲ್ಲ ಅದೆಲ್ಲ. ಪಂದ್ಯದ ಮುನ್ನಾದಿನ ಹೀಗೆ ಅಂತ ಹೇಳಿಕೊಟ್ಟಿದ್ದು ಪಿಟಿ ಮೇಷ್ಟ್ರು. ಹೀಗೆ ಇಲ್ಲಿ ಕಾಲಿಟ್ಟು ಗೆರೆ ಹಿಂದೆ ನಿಂತ್ಕೊಂಡು ಸೀಟಿ ಊದಿದಾಗ ಓಡಬೇಕು. ರನ್ನಿಂಗ್ ರೇಸ್ ಯಾನೆ ಓಟದ ಪಂದ್ಯ ಅಂದರೆ ರಭಸ, ವೇಗ ಜಿದ್ದಾಜಿದ್ದಿ! ಸ್ಪರ್ಧೆಯಲ್ಲಿ ಆರೋ ಎಂಟೋ ಜೀವಗಳ ಹದಿನಾರು ಕಾಲುಗಳ ನಿರಂತರ ಚಲನೆ. ಶರೀರವಿಡೀ ಅಡ್ರೆನಾಲಿನ್ ಚಿಮ್ಮಿಸಿಕೊಂಡು ಆ ಕೊನೆಯಲ್ಲಿನ ಬಿಳಿ ಸುಣ್ಣದ ಗೆರೆಯತ್ತಲೇ ಕಣ್ಣು ಮನಸ್ಸಿಟ್ಟು ಓಡಿದ ಓಟ! ಜಯಶ್ರೀ ದೇಶಪಾಂಡೆ (Jayashree Deshpande)

ಅವತ್ತು ಅಂಥ ಚಿಮ್ಮಿ ಚಲಿಸಿದ ಓಟದಲ್ಲಿ ಆ ಬಿಳಿ ಗೆರೆ ಮುಟ್ಟಿದ ಹುಡುಗಿ ನಾನು. ಓಟದ ಪಂದ್ಯ ಅಂದರೆ ಹೀಗೆಂದು ತಿಳಿದದ್ದೇ ಅಂದು.‌ ಓಟದ ಮಹತ್ವದ ಬಗ್ಗೆ ಅದು ಶರೀರಕ್ಕೆ ತಂದೀಯುವ ಲಾಭಗಳ ಬಗ್ಗೆ, ದೇಹ ಗಟ್ಟಿಗೊಳ್ಳುವ ಬಗ್ಗೆ ಮೇಷ್ಟ್ರು ಹೇಳಿದ ಮಾತುಗಳು ಎಷ್ಟು ಅರ್ಥವಾದುವೋ ಬಿಟ್ಟವೋ ಅಷ್ಟು ಚಿಕ್ಕ ವಯಸ್ಸಿನಲ್ಲಿ ಓಡಿ ಆ ಬಿಳಿ ಗೆರೆ ಮುಟ್ಟಿದ್ದಕ್ಕೆ ಸಿಕ್ಕ ಒಂದು ಪುಟ್ಟ ಮೆಡಲು ಜೀವಮಾನವಿಡೀ ನನಪಿನ ಬುತ್ತಿ! ಗ್ಲೋಬಲ್ ರನ್ನಿಂಗ್ ಡೇ ಎಂಬುದೆಲ್ಲ ಆಗಿನ ಸಂಗತಿ ಅಲ್ಲ. ಆದರೆ ಓಟಕ್ಕೆ ಇರುವ ಮಹತ್ವದ ಅರಿವನ್ನು ‘ಗ್ಲೋಬಲ್ ರನಿಂಗ್ ಡೇ’ ಅಂತ ಹೆಸರಿಟ್ಟು ಇನ್ನಷ್ಟು ಪ್ರಪಂಚಕ್ಕೆ ತಿಳಿಸಿಕೊಡುವ ಸುಕಾರ್ಯ ಶುರುವಾಗಿ ಆರು ವರ್ಷಗಳಾಗಿವೆ.‌ ಜೂನ್ ಒಂದು 2016, ನ್ಯೂಯಾರ್ಕ್. ನೂರಾ ಎಪ್ಪತ್ತೇಳು ದೇಶಗಳ ಇಪ್ಪತ್ತೈದು ಲಕ್ಷ ಜನ ಒಂಬತ್ತೂವರೆ ದಶಲಕ್ಷ ಮೈಲಿಗಳನ್ನು ಓಡಿ ಪೂರೈಸುವ ಪ್ರಮಾಣ ನೀಡುವ ಕೈ ಚಾಚಿದರು.‌ ಅದಕ್ಕೂ ಮೊದಲು ರಾಷ್ಟ್ರೀಯ ಓಟದ ದಿನ ಎಂದಾಗಿ ಅಮೆರಿಕ ಇದನ್ನು ಎರಡು ಸಾವಿರದಾ ಒಂಬತ್ತರಲ್ಲಿ ಶುರುಮಾಡಿತ್ತು.

ಇದನ್ನೂ ಓದಿ : Global Running Day 2022: ಎದ್ರೀ ಯವ್ವಾ, ನಾವು ಎದ್ವೀ ನೋಡ್ರಿವಾ ಈಗ

ಇದನ್ನೂ ಓದಿ
Image
World Milk Day 2022: ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು!
Image
Poetry : ಅವಿತಕವಿತೆ ; ಎಲ್ಲ ತೇದಿಗಳ ಜುಂಗು ಹಿಡಿದು ಕೆಂಪಗೆ ಕಂತುವಾಗಲು
Image
Poetry : ಅವಿತಕವಿತೆ : ಜೀವದ ಒಳಮಾಲು ಬಸಿದ ಮೊಟ್ಟೆಚಿಪ್ಪಿನ ಹಾಗೆ ಭಿದುರವಿದ್ದಾರು
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು

ಆಟ-ಓಟ-ಪಾಠ ಈ ಮೂರು ಪದಗಳು ಒಂದು ಬಗೆಯ ಜೊತೆಗಾರರು. ಅನಾದಿ ಕಾಲದಿಂದಲೂ ಓಟದ ಪಂದ್ಯಗಳು ಪ್ರಪಂಚದುದ್ದಗಲಕ್ಕೂ ನಡೆಯುತ್ತ ಬಂದ ಸುದ್ದಿ ಹೊಸದಲ್ಲ. ವರ್ಷವಿಡೀ ಯಾವುದೇ ಒಂದು ದೇಶದಲ್ಲಿ ಓಟದ ಸ್ಪರ್ಧೆಗಳ ಹಬ್ಬ ನಡೆದೇ ಇರುತ್ತದೆ. ಅದಕ್ಕಾಗೇ ಹೆಜ್ಜೆ ಇಡಲಾರಂಭಿಸಿದ ಕ್ಷಣದಿಂದ ಓಟವನ್ನು ಬದುಕಿನ ತಪಸ್ಸಾಗಿಸಿಕೊಂಡವರ ರೋಮಾಂಚಕ ಸ್ವಾರಸ್ಯಗಳು ಕಣ್ಣು, ಕಿವಿ ಮನಸ್ಸುಗಳನ್ನು ತುಂಬುತ್ತಿರುತ್ತವೆ. ಅದಕ್ಕಾಗಿ ಮಾಡುವ ವೆಚ್ಚ, ತರಬೇತಿ, ಆಹಾರ ಎಲ್ಲವೂ ಇನ್ನೊಂದು ಗುರಿಯಷ್ಟೇ ಮಹತ್ವದ ಮಾತು. ಒಲಿಂಪಿಕ್ಸ್ ನ ಓಟ ಎಂದರಂತೂ ಪೂರ್ವಜನುಮದಿಂದಲೇ ತಯಾರಿ ಆರಂಭಿಸಿದಂತೆ ಇರುವಷ್ಟು ಮಟ್ಟಿಗಿನ ತಹತಹದ ಮಾನಸಿಕತೆ ಓಟದ ಸ್ಪರ್ಧಾಳುಗಳಿಗೆ! ಸೆಕೆಂಡುಗಳು, ಅದರಲ್ಲೂ ಹತ್ತಾಂಶ, ನೂರಾಂಶದ ಕ್ಷಣಗಣನೆಯಲ್ಲಿ ಅವರ ತಪಸ್ಸಿನ ಫಲಿತಾಂಶದ ನಿರ್ಧಾರ. ಗೆದ್ದವರ ಖುಶಿಯ ಚೀತ್ಕಾರವೋ ಸಂತೋಷದ ಅಳುವೋ… ಓಡಿ ಮುಗಿಸಿದ ಹೆಮ್ಮೆಯಲ್ಲಿ ಆ ನೆಲಕ್ಕೇ ಮುತ್ತಿಟ್ಟು ಉರುಳಾಡಿದ ಪರಿಯೋ ಟಿವಿಯ ತೆರೆಯಲ್ಲಿ, ವೀಕ್ಷಕರಾಗಿ ಹೋಗಿ ಕೂತವರಲ್ಲಿ, ಗೆದ್ದ ಸ್ಪರ್ಧಿಯ ಆತ್ಮೀಯರಲ್ಲಿ ಉಕ್ಕಿಸಿದ ಹರ್ಷವನ್ನೂ ಕೂದಲೆಳೆಯ ನೂರಾಂಶದಷ್ಟು ಅಂತರದಲ್ಲಿ ಮೆಡಲಿನಿಂದ ವಂಚಿತರಾದವರ ನಿರಾಶ ನೋವಿನ ಮುಖಗಳೂ ಪಂದ್ಯಗಳೆಂಬ ನಾಣ್ಯದ ಎರಡು ಮುಖಗಳನ್ನು ಪರಿಚಯಿಸುತ್ತವಲ್ಲ!

ಶರೀರದ ಆರೋಗ್ಯ ಕಾಲುಗಳಲ್ಲಿದೆ. “ನಿಮ್ಮ ಎರಡು ಕಾಲುಗಳೇ ದೇಹದ ಇನ್ನೊಂದು ಹೃದಯ. ಕಾಲು ಗಟ್ಟಿಯಿದ್ದಷ್ಟೂ ದೇಹ ಗಟ್ಟಿ. ಅದಕ್ಕಾಗಿ ಕಾಲುಗಳನ್ನು ಓಟ, ನಡಿಗೆಗೆ ತರಬೇತಿ‌ ಕೊಟ್ಟು ಅಣಿಮಾಡಿ” ಎಂಬ ಮಾತನ್ನು ಸರಿಸುಮಾರು ಎಲ್ಲ ಬಗೆಯ ವೈದ್ಯರು, ಯೋಗ, ಡಯಟೀಶಿಯನ್ ಗಳು ನಮ್ಮಲ್ಲಿ ಬಿತ್ತುತ್ತಿರುತ್ತಾರೆ. ಸ್ಪರ್ಧೆಯ ಮಾತು ಸ್ಪರ್ಧೆಗೆ, ದಿನನಿತ್ಯ ವಯಸ್ಸಿನ ಭೇದವಿಲ್ಲದೆ ನಡಿಗೆಯನ್ನೋ, ಓಟವನ್ನೋ ಚಾಚೂತಪ್ಪದೆ ಪಾಲಿಸುವವರ ದೇಹದ ಆರೋಗ್ಯ ನಮ್ಮನ್ನು ಅಚ್ಚರಿಗೊಳಿಸುವುದಿಲ್ಲವೇ! ಎದೆಗೂಡಿನಲ್ಲಿರುವ ಗುಂಡಿಗೆಗೆ ಶಕ್ತಿ ಕೊಡುವ ‘ಇನ್ನೊಂದು ಹೃದಯದ’ ಮಾತನ್ನು ಕೇಳಿದವರು ಅವರು.‌

ಇದನ್ನೂ ಓದಿ : World Milk Day 2022: ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು!

ನಾವು ನೀವೆಲ್ಲ ಅಷ್ಟು ಮಾಡಿದರೆ, ಮಾಡುತ್ತ, ಓಡುತ್ತ ಇರುವೆವಾದರೆ ನೂರೆಂಟು ಬಗೆಯ ಎಕ್ಸರೇಗಳು, ಇಸಿಜಿಗಳು, ಇಕೋ ಕಾರ್ಡಿಯೋಗಳು, ಎಂಜಿಯೋಗ್ರಾಮು, ಸ್ಟೆಂಟು, ತೆರೆದ ಹೃದಯದ ಆಪರೇಶನ್ ಇವೆಲ್ಲವನ್ನೂ ಆಚೆಗಿಟ್ಟು ಬದುಕಿನ ಓಟದ ಸಾರ್ಥಕತೆಯತ್ತ ಗಮನ ಹರಿಸಬಹುದು. ಹಾಗೆ ನೋಡಿದರೆ ಎಷ್ಟೆಲ್ಲ ಬಗೆಯುಂಟು ಇದರಲ್ಲಿ ಜಾಗಿಂಗ್, ಸ್ಲೋ ರನ್ನಿಂಗ್, ಮೀಡಿಯಂ ಪೇಸ್, ಮ್ಯಾರಥಾನ್, ಮತ್ತೆ ಮಿಂಚಿನ ಒಟವೂ! ವಿವರ ಹೆಕ್ಕಿ ನೋಡಿದರೆ ಸ್ಪೀಡ್ ಸ್ಟರ್ಸ್, ಎಂಡ್ಯೂರನ್ಸ್, ಮಾನ್ಸ್ಟರ್ಸ್, ಕೊಂಬೋ! ಎಲ್ಲವೂ ಓಟಗಳೇ. ನಮ್ಮಿಂದ ಯಾವುದು ಸಾಧ್ಯವೋ ಅದನ್ನು ಮಾಡಬಾರದೇ?

ಇತ್ತೀಚಿನ ನಮ್ಮ ಬದುಕು ನೂರೆಂಟು ಕವಲಿನ ಹೋರಾಟಗಳ ಜಿಜ್ಞಾಸೆಯಲ್ಲಿ ತೊಳಲುತ್ತಿದೆ. ಶರೀರಧಾರ್ಡ್ಯ ಹಿನ್ನೆಲೆಗೆ ಸರಿದು ಆಧುನಿಕ ಪ್ರಪಂಚದ ಆಮಿಷಗಳಲ್ಲಿ ಏಳರಿಂದ ಎಪ್ಪತ್ತಿನವರೂ ಇಳಿದು ಹೋಗಿದ್ದೇವೆ. ಇದನ್ನು ಸಾಕುಮಾಡಿ “ಶರೀರಮಾದ್ಯಂ ಖಲುಧರ್ಮಸಾಧನಮ್” ಅಂತಾಗಬೇಕಾದರೆ ಕಾಲುಗಳ ಬಲ ಅದರೊಂದಿಗೆ ಶರೀರದ ಶಕ್ತಿಯನ್ನು ಹೆಚ್ಚುಸುವ ಓಟಕ್ಕೆ ಮನಸ್ಸುಗೊಡಬೇಕು.‌ ಆಗಲೇ ‘ಅಂತಾರಾಷ್ಟ್ರೀಯ ಓಟದ ದಿನ’ದ ಜೊತೆ ಬದುಕೂ ಸಂಪನ್ನವಾದೀತು.

ಗಮನಿಸಿ : ವಿಶೇಷ ದಿನಗಳ ಸಂದರ್ಭಕ್ಕೆ ನೀವೂ ಕೂಡ ನಿಮ್ಮ ವಿಚಾರ, ಅನುಭವವನ್ನು ಬರೆಯಬಹುದು. ಒಂದು ವಾರ ಮೊದಲೇ ಸುಮಾರು 300 ಪದಗಳಲ್ಲಿ ನಿಮ್ಮ ಫೋಟೋದೊಂದಿಗೆ ಬರಹ ನಮ್ಮನ್ನು ತಲುಪಲಿ. tv9kannadadigital@gmail.com

Published On - 11:33 am, Wed, 1 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ