Travelogue: ಶೆಲ್ಫಿಗೇರುವ ಮುನ್ನ; ‘ಹಲವು ನಾಡು ಹೆಜ್ಜೆ ಹಾಡು’ ಜಯಶ್ರೀ ದೇಶಪಾಂಡೆ ಪ್ರವಾಸ ಕಥನ ಸದ್ಯದಲ್ಲೇ

HerStory : ಹೆಸರಾಂತ ಶ್ರೀಮಂತ ಮಹಲುಗಳ ಹಿಂದೆ ಅವುಗಳನ್ನು ಕಟ್ಟಿದ ಬಡವರ ನಿಟ್ಟುಸಿರುಗಳು ಕೇಳುವುದಿಲ್ಲ. ಚಿನ್ನದ ಸಿಂಹಾಸನಗಳ ಮೇಲಿರುವ ಯುದ್ಧದ ಕಲೆಗಳು ಕಾಣುವುದಿಲ್ಲ. ಹಿಸ್ಟರಿಯೊಳಗೆ ಹುದುಗಿರುವ ಹರ್‌ಸ್ಟೋರಿಗಳನ್ನು ಹೆಕ್ಕಲು ಆಗುವುದಿಲ್ಲ!?

Travelogue: ಶೆಲ್ಫಿಗೇರುವ ಮುನ್ನ; ‘ಹಲವು ನಾಡು ಹೆಜ್ಜೆ ಹಾಡು’ ಜಯಶ್ರೀ ದೇಶಪಾಂಡೆ ಪ್ರವಾಸ ಕಥನ ಸದ್ಯದಲ್ಲೇ
ಲೇಖಕಿ ಜಯಶ್ರೀ ದೇಶಪಾಂಡೆ
Follow us
ಶ್ರೀದೇವಿ ಕಳಸದ
|

Updated on:Mar 10, 2022 | 4:45 PM

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ : ಹಲವು ನಾಡು ಹೆಜ್ಜೆ ಹಾಡು (ಪ್ರವಾಸ ಕಥನ) ಲೇಖಕರು : ಜಯಶ್ರೀ ದೇಶಪಾಂಡೆ ಪುಟ : 264 ಬೆಲೆ : ರೂ. 260 ಮುಖಪುಟ ವಿನ್ಯಾಸ : ಜಿ. ಅರುಣಕುಮಾರ್ ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು

ಲೋಕವನ್ನು ಸುತ್ತುವುದೆಂದರೆ ಇತಿಹಾಸದಲ್ಲೂ ಸುತ್ತುವುದು ಎನ್ನುವುದು ಪ್ರವಾಸ ಮಾಡುವಾಗ ನಮ್ಮ ಗ್ರಹಿಕೆ, ಸಂವೇದನೆ, ನಂಬಿಕೆಯಲ್ಲೇ ಇರಬೇಕು. ಇಲ್ಲದಿದ್ದರೆ ಊರಿನ ಚಹರೆಗಳಾದ ಕಟ್ಟಡಗಳಲ್ಲಿ ಮನುಷ್ಯರ ಪ್ರತಿಬಿಂಬ ಕಾಣುವುದಿಲ್ಲ. ಅರಮನೆಗಳ ಅಂತಃಪುರಗಳಲ್ಲಿ ಹೆಣ್ಣುಗಳ ಕಣ್ಣೀರು ಈಗಲೂ ಹಸಿಯಾಗಿರುವುದು ಕಾಣುವುದಿಲ್ಲ. ಹೆಸರಾಂತ ಶ್ರೀಮಂತ ಮಹಲುಗಳ ಹಿಂದೆ ಅವುಗಳನ್ನು ಕಟ್ಟಿದ ಬಡವರ ನಿಟ್ಟುಸಿರುಗಳು ಕೇಳುವುದಿಲ್ಲ. ಚಿನ್ನದ ಸಿಂಹಾಸನಗಳ ಮೇಲಿರುವ ಯುದ್ಧದ ಕಲೆಗಳು ಕಾಣುವುದಿಲ್ಲ. ಮತ್ತು ಹೇಳಿದ ಮಾತನ್ನೇ ಮತ್ತೆ ಹೇಳುವುದಾದರೆ, ಹಿಸ್ಟರಿಯೊಳಗೆ ಹುದುಗಿರುವ ಹರ್‌ಸ್ಟೋರಿಗಳನ್ನು ಹೆಕ್ಕಲು ಆಗುವುದಿಲ್ಲ. ಆದರೆ ಇಲ್ಲಿನ ಬರಹಗಳಲ್ಲಿ ಅಂಥ ಮತ್ತು ಇನ್ನೂ ಹೆಚ್ಚಿನ ಪ್ರಯತ್ನಗಳು ಇವೆ ಎನ್ನುವುದೇ ವಿಶೇಷ. ಡಾ. ಆರ್. ಪೂರ್ಣಿಮಾ, ಹಿರಿಯ ಪತ್ರಕರ್ತೆ, ಪ್ರಕಾಶಕಿ

ಲೂವ್ರ್! ಇದು ಪ್ಯಾರಿಸ್ ನಗರಿಯ ಗರಿ

ಲೂವ್ರ್ ಕಣ್ಣಿಗೆ ಹಬ್ಬವೂ, ಮೆದುಳಿಗೆ ಮೇವೂ, ದೇಹಕ್ಕೆ ಸುತ್ತಾಟದ ದಣಿವನ್ನು ಕೊಟ್ಟಷ್ಟೇ ಗಾಢವಾಗಿ ಮನಸ್ಸನ್ನು‌ ಅರಳಿಸುವ ತಾಕತ್ತಿನದು. ಯಾವೆಡೆಗೆ ಕಣ್ಣರಳಿಸಲಿ.. ಯಾವತ್ತ ಧಾವಿಸಲಿ‌ ಎಲ್ಲಿ ಯಾವ ಶಿಲ್ಪದಲ್ಲಿ ಮನಸ್ಸು ನೆಟ್ಟು ಹೋಗುವುದೋ ಹೇಳಲಾಗದ ಒಂದು ಬಗೆಯ‌ ಅವ್ಯಕ್ತ ಟ್ರಾನ್ಸ್ ನಮ್ಮನ್ನು‌ ಆ ಅಸಂಖ್ಯ, ಆಖಂಡ ಕಾರಿಡಾರುಗಳಲ್ಲಿ ಹರಡಿಕೊಂಡ ಇತಿಹಾಸದ ಸಮೃದ್ಧತನದತ್ತ‌ ಕರೆದೊಯ್ದು‌ ಅಲೆದಾಡಿಸುತ್ತದೆ. ಒಂದು ಪೇಂಟಿಂಗೋ, ಶಿಲ್ಪವೋ ಇಲ್ಲೇ ನಿಲ್ಲು ಅಂತ ಸೆಳೆಯುತ್ತಿರುವಾಗ ಗಡಿಯಾರ ಇನ್ನೂ ಒಂದಂಶವನ್ನೂ ನೋಡಿಲ್ಲ‌ ಮುಂದೆ ನಡಿ ಅಂತ ತಳ್ಳುತ್ತದೆ. ಲೂವ್ರ್ ನ ಮೋಡಿ‌ ಅಂಥದು! ನೀವು ಇತಿಹಾಸವನ್ನು ಪ್ರೀತಿಸುವವರೇ? ಹಾಗಿದ್ದಲ್ಲಿ ಲೂವ್ರ್ ನೋಡಲು ಸಾಕಷ್ಟು.. ಸಾಕಷ್ಟು ಸಮಯವನ್ನು ಕೊಡಿ!

ಮೈಕೆಲೆಂಜಲೋನ ರೆಬೆಲಿಯನ್ ಸ್ಲೇವ್ ಮತ್ತು ದಿ ಡೈಯಿಂಗ್ ಸ್ಲೇವ್ ಇವು ತಾನು ಕಾಯಿಲೆ ಬಿದ್ದಾಗ ನೋಡಿಕೊಂಡು ಆರೈಕೆ ಮಾಡಿದ್ದ ರಾಬರ್ತ್ವ್ ಸ್ಟ್ರಾಜಿ ಎಂಬ ಮಿತ್ರನಿಗೆ ಮೈಕಲೆಂಜಲೋ ಕೊಟ್ಟ ಉಡುಗೊರೆಗಳಂತೆ. ‘ವಿಂಗ್ಡ್ ವಿಕ್ಟರಿ ಆಫ್ ಸಾಮೋತಾರ್ಸ್’ ಲೂವ್ರ್ ನೋಡಲು ಹೋದವರು ಖಂಡಿತ‌ ತಪ್ಪಿಸಿಕೊಳ್ಳಲಾಗದ್ದು , ಆಕಾಶದೆತ್ತರಕ್ಕೂ ನಿಂತಂತೆನಿಸುವ ಆ ರುಂಡವಿಲ್ಲದ ಹೆಣ್ಣಿನ ಶರೀರದ ಭುಜದಿಂದ ಹಾರುವ ರೆಕ್ಕೆಗಳ ಆ ಭವ್ಯ ಮೂರ್ತಿಯ‌ ನೋಟ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡುಬಿಟ್ಟಿತ್ತು. ಆಂಟಿಯೊಕ್ ನ ಅಲೆಕ್ಸಾನ್ಡ್ರೋಸ್’ ಹೆಸರಿನ ಕಲಾವಿದನ ಶಿಲ್ಪ ಕೃತಿ ಇದು.‌ ಇನ್ನೊಂದು ಕಾರಿಡಾರ್ ಹೊಕ್ಕರೆ ಒಂದು ಭುಜ ಅರ್ಧ ಮತ್ತಿನ್ನೊಂದು ಪೂರ್ಣ ಕತ್ತರಿಸಿ ಹೋಗಿರುವ ವೀನಸ್ ದಿ ಮಿಲೋ ಗ್ರೀಕ್ ಚೆಲುವಿನ ದೇವತೆ ಆಫ್ರೋಡೈಟಳ ಪಡಿಯಚ್ಚು.

ಇದಲ್ಲದೆ ಅಸಂಖ್ಯ ಪೇಂಟಿಂಗ್ ಗಳು ಕಣ್ಣು ಚಾಚಿದಲ್ಲೆಲ್ಲ ಎದುರಾಗುತ್ತ ವರ್ಣವೈಭವದ ವಿಭ್ರಮೆಯಲ್ಲಿ, ಕಲಾವಿದರ ತಪಸ್ಸಿನ ಪ್ರತೀಕವಾದ ಸ್ವರೂಪ ಹೊತ್ತು ನಿಂತಿವೆ. ಯೂಜೀನ್ ಡೆಲಾಕ್ರೋಕ್ಸನ ಲಿಬರ್ಟಿ ಲೀಡಿಂಗ್ ದಿ ಪೀಪಲ್ ಫ್ರೆಂಚ್ ರಿಪಬ್ಲಿಕ್ ನ ಸಂಕೇತ. ರಣರಂಗದಲ್ಲಿ ವಿಜಯಧ್ವಜ ಎತ್ತಿ ಹಾರಿಸುತ್ತ ಕೆಳಗಿನ ಶವಗಳ ನಡುವೆ ಶತ್ರುಗಳಿಗೆದುರಾಗಿ ನಿಂತ ಸ್ವಾತಂತ್ರ್ಯ ದೇವತೆ. ಒಂದಿಡೀ ಗೋಡೆಯ ತುಂಬಾ ಹರಿದಿದೆಯೆನಿಸುವಷ್ಟು ದೊಡ್ಡ ಚಿತ್ರ ದಿ ಕೊರೋನೇಷನ್ ಆಫ್ ನೆಪೋಲಿಯನ್, ಹೆಣ್ಣು, ಗಂಡು ಎರಡೂ ಲಿಂಗದ ಲಕ್ಷಣಗಳನ್ನು ಹೊತ್ತ ಸ್ಲೀಪಿಂಗ್ ಹೆರ್ಮಾ ಆಫ್ರೋಡೈಟಿಸ್.

ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

‘ಕಣ್ಣಿಗೊಂದು ಕಣ್ಣು ಹಲ್ಲಿಗೊಂದು ಹಲ್ಲು’ ಎಂಬ ಹಮ್ಮುರಾಬಿಯ ಪ್ರಾಚೀನ ಬ್ಯಾಬಿಲೋನಿಯನ್ ನ್ಯಾಯನಿರ್ಣಯ ಸೂತ್ರದ ಲಿಖಿತ ಪ್ರದರ್ಶಿಕೆ, ಪುರಾತನ ಅಸ್ಸಿರಿಯವನ್ನು ಕಾಯುತ್ತಿದ್ದ ಎರಡು ಲಾಸ್ಸುಗಳು, ಪ್ರಾಣಿಯ ಶರೀರಕ್ಕೆ ಗಡ್ಡವುಳ್ಳ ಮನುಷ್ಯ ಮುಖದ ಮುದ್ದುಬರುವ ಶಿಲ್ಪಗಳು, ‘ಗ್ರಾಂಡೆ ಒಡಲಿಸ್ಕ್ ಬೈ ಇಂಗ್ರೆಸ್ಸ್ ಜೀನ್ ಆಗುಸ್ತೇ ಡೊಮಿನಿಕ್’ ಇದು‌ ಇಂಗರನ ಅದ್ಭುತ ಕೃತಿ. ಪೂರ್ವದ ಸುಲ್ತಾನರುಗಳ ಅಂತಃಪುರದಲ್ಲಿದ್ದ ಬೆತ್ತಲೆ ಕಾಮಿನಿಯ ಅರೆ ಒರಗಿದ ಭಂಗಿಯ ವರ್ಣಚಿತ್ರ.ತುಂಬಾ ಪ್ರಸಿದ್ಧಳಿದ್ದಾಳೆ ಈಕೆ. ಅಂಟೋನಿಯೋ ಕ್ಯನೋವಾನ ದಿ “ಕ್ಯುಪಿಡ್ಸ್ ಕಿಸ್” ಇನ್ನೊಂದು ತಪ್ಪಿಸಿಕೊಳ್ಳಲಾಗದ ಕೃತಿ. ಬಿಳಿ ಅಮೃತಶಿಲೆಯ ಈ ಪ್ರತಿಮೆಗಳಲ್ಲಿ ರೊಮ್ಯಾಂಟಿಕ್ ಭಾವದ ಪರಾಕಾಷ್ಠೆಯ ಲಕ್ಷಣಗಳು ಢಾಳಾಗಿವೆ.

ದಿ ರಾಫ್ಟ್ ಆಫ್ ದಿ ಮೆದುಸ್ಸಾ, ಐ ಎಮ್ ಪೇಯಸ್ ಪಿರಮಿಡ್, ಹೀಗೆ ನೋಡಿ ಮುಗಿಯುವ ಮಾತೇ ಇಲ್ಲದ ಗಳಿಗೆಗಳಲ್ಲಿ ಕಳೆದು ಹೋಗದಿದ್ದರೆ ಕೇಳಿ. ಹಾಂ ನಾವಂತೂ‌ ಕಳೆದೇ ಹೋಗಿದ್ದೆವು.‌ ಮೆದುಳು ತುಂಬಿ, ಮನಸ್ಸು ತಣಿದು, ಅತ್ಯಪೂರ್ವ ಅನುಭವಗಳ ಸರೋವರದಲ್ಲಿ ಮಿಂದ ಭಾವನೆ ಹರಡಿತ್ತು. ಇಷ್ಟೊತ್ತಿಗೆ ಮಧ್ಯಾಹ್ನದ ಸೂರ್ಯನಿಗೇ ದಣಿವು ಕಾಣಿಸಿಕೊಂಡಿತ್ತೇನೋ? ನಿಧಾನಕ್ಕೆ ತನ್ನ ವಿಶ್ರಾಂತಿಯ ಸೂಚನೆ ಕೊಟ್ಟಿದ್ದ. ನನ್ನ ಕಾಲುಗಳಲ್ಲಿ ಅವನ ದಣಿವಿನ‌ ಛಾಪು ಕಾಣಿಸಿಕೊಂಡು ಅಲ್ಲೇ ಇದ್ದ ಮೆತ್ತೆಯ ಸೋಫಾದಲ್ಲಿ ಒಂದಿಷ್ಟು ಒರಗಿದರೆ ಅಗೋ‌ ಅಲ್ಲೇ ಹಿಂದೆ ಕೈಗೆಟುಕುವ ದೂರದಲ್ಲಿ‌…

ಐಫೆಲ್ ಟವರಿನ ಕಣ್ಣು ಕುಕ್ಕುವ ಚಿತ್ರ ಚಾಚಿಕೊಂಡು ಹಿಂದಿನ ದಿನ ಆ ಗೋಪುರದ ಶಿಖರ ಯಾನೆ ಸಮಿಟ್ ನ ಹೊರಭಾಗದ ಗೋಲಾಕಾರದ ಗ್ಯಾಲರಿಯಲ್ಲಿ ನಿಂತಾಗ ಆಕಾಶ ಕೈಗೆಟುಕಿದಂತೆ ಕೆಳಗಿನ ಭೂಮಿ ಅದನ್ನು ಬಾ ಎಂದು ಬಾಚಿಕೊಳ್ಳುತ್ತಿದ್ದಂತೆ ಭಾಸವಾಗಿದ್ದು ನೆನಪಿಗೆ ತಂದಿತ್ತು. ಲೂವ್ರ್ ಒಂದು ಮಹಾಸಾಗರ. ಕಲೆ, ಸಂಸ್ಕೃತಿ, ಇತಿಹಾಸಗಳ ಪ್ರದರ್ಶಿಕೆ. ಸಮಸ್ತ ಯೂರೋಪನ್ನೆ ಪ್ರತಿನಿಧಿಸುವಂತೆ ಅದರ ನೂರಾರು ಅಮೂಲ್ಯ ವಸ್ತುಗಳನ್ನೂ ಜಗದುದ್ದಗಲದಿಂದ ಆರಿಸಿ ತಂದ ಬೆಲೆಕಟ್ಟಲಾಗದ ಸ್ಮರಣಿಕೆಗಳ ಭಂಡಾರ. ಲೂವ್ರ್ ನ ಒಂದೇ ಒಂದಂಶ ಭಾಗವನ್ನೂ ಒಂದು ಸುತ್ತಿನಲ್ಲಿ ನೋಡಲಾಗದು ಎಂಬುದೇ ನಮಗವತ್ತು ಅಡಿಗಡಿಗೂ ನೆನಪಾದ ಸಂಗತಿ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9900095204)

ಇದನ್ನೂ ಓದಿ : Women‘s Day 2022: ಶೆಲ್ಫಿಗೇರುವ ಮುನ್ನ: ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯ ಯಶೋಗಾಥೆ

Published On - 4:40 pm, Thu, 10 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ